Tagged: tendercoconut

ಕುಡ್ಲದವರು ಕೇಳುವ ಮೊದಲ ಮಾತು !

ಮಂಗಳೂರಿನ ಜನ ಎಲ್ಲಿ ಬೇಕಾದರೂ ನೋಡಿ ಎಳೆನೀರು ನೋಡಿದಾಕ್ಷಣ ಮೊದಲು ಕೇಳುವ ಮಾತು ಈ ಎಳೆನೀರು ಊರಿದ್ದ ( ಬೊಂಡ ಊರ್ದನಾ…?) ಅಲ್ಲ ಎಂದಾಗ ಇರ್ಲಿ ಒಂದು ಕೊಡಿ ಎನ್ನುತ್ತಾರೆ. ಹೌದು ಎಂದ್ರೆ ಬಹಳ ಖುಷಿಯಿಂದ ಕುಡಿದು ಒಳ್ಳೆಯ ನೀರಿತ್ತು ಎಂದು ಬಿಡುತ್ತಾರೆ.

ಎಳೆನೀರಿನಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಈ ರೀತಿ ಇವೆ: ಇದರಲ್ಲಿ ಆಂಟಿ ಏಜಿಂಗ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳಿದ್ದು, ಚರ್ಮ ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಎಳೆನೀರು ಕುಡಿದರೆ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಶುಗರ್ ಅಂಶವನ್ನು ಕರಗಿಸುತ್ತದೆ ಹಾಗೂ ಕೊಬ್ಬಿನಂಶವು ಕಡಿಮೆಯಾಗುತ್ತದೆ.

ಕಿಡ್ನಿ ಸ್ಟೋನ್ಸ್ ಅನ್ನು ಕರಗಿಸಲು ನೆರವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ ಅಂಶವು ಮೂತ್ರದ ಕ್ಷಾರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಕಿಡ್ನಿ ಸ್ಟೋನ್ ಉತ್ಪಾದನೆಯನ್ನು ತಡೆಯುತ್ತದೆ.

ಜೀರ್ಣ ಕ್ರಿಯೆಯನ್ನು ಸುಲಭವಾಗಿಸುತ್ತದೆ. ನೀರಿನಲ್ಲಿ ಮಿನರಲ್ ಅಂಶಗಳಾದ ಕ್ಯಾಲ್ಷಿಯಂ, ಮ್ಯಾಂಗನೀಸ್ ಮತ್ತು ಸತು ಇದೆ. ಇವು ದೇಹವನ್ನು ಮರುಪೂರಣ ಮಾಡಲು ನೆರವಾಗುತ್ತದೆ. ಎಳೆನೀರಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶ ಕಡಿಮೆ ಇದೆ ಮತ್ತು ಪೋಟಾಶಿಯಂ ಅಂಶ ಅಧಿಕವಾಗಿದೆ. ಕ್ಯಾಲ್ಷಿಯಂ ಮತ್ತು ಕ್ಲೋರೈಡ್ ನೀರಿನ ಅಂಶವನ್ನು ಹೆಚ್ಚಿಸಿ ದೇಹವನ್ನು ಪುನರ್ ಯೌನಗೊಳಿಸುತ್ತದೆ.

ಕ್ಯಾಲ್ಷಿಯಂ ಅಧಿಕವಾಗಿದೆ. ಆರೋಗ್ಯಕರ ಮೂಳೆ, ಮಾಂಸಖಂಡಗಳಿಗೆ ಇದು ಅಗತ್ಯವಾಗಿ ಬೇಕು. ಮಧುಮೇಹ ನಿಯಂತ್ರಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಕೂಡ ಇದು ನೆರವಾಗುತ್ತದೆ.