Tagged: state Bank

ಕುಡ್ಲದ ಸಿಟಿ ಬಸ್ ನಲ್ಲಿ ಟಿಕೇಟ್ ಇಲ್ಲದೇ ಫ್ರಿಯಾಗಿ ಪ್ರಯಾಣಿಸಿ

ಕುಡ್ಲದ ಸಿಟಿ ಬಸ್‌ನಲ್ಲಿ ಪ್ರಯಾಣಿಸುವವರ ಗಮನಕ್ಕೆ ಸೆಪ್ಟೆಂಬರ್‌ ಒಂದರಿಂದ ಸಿಟಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಟಿಕೆಟ್ ನೀಡದೇ ಇದ್ದರೆ ನೀವು ಫ್ರಿಯಾಗಿ ಈ ಬಸ್ ನಲ್ಲಿ ಪ್ರಯಾಣ ಬೆಳೆಸಬಹುದು ಇಂತಹ ಹೊಸ ಯೋಜನೆಯನ್ನು ಮಂಗಳೂರು ಸಿಟಿ ಬಸ್ ಮಾಲೀಕರ ಸಂಘ ಹಮ್ಮಿಕೊಳ್ಳುತ್ತಿದೆ. ಕಂಡಕ್ಟರ್ ಟಿಕೇಟ್ ಪ್ರಯಾಣಿಕರಿಗೆ ನೀಡಬೇಕು ಎಂದು ಎಷ್ಟು ಬಾರಿ ಹೇಳಿದ್ರು ಸಂಬಂಧಪಟ್ಟ ಜನರು ಕೇಳಿಸದ ಪರಿಣಾಮವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ.
ಅಂದಹಾಗೆ ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ 27, ಸ್ಟೇಟ್‌ಬ್ಯಾಂಕ್- ಮಂಗಳಾದೇವಿಯ 5 ಹಾಗೂ ಸ್ಟೇಟ್ ಬ್ಯಾಂಕ್ ನಿಂದ ಉಳ್ಳಾಲ ಕಡೆ ಸಾಗುವ 13 ಬಸ್ ಗಳಲ್ಲಿ ಈ ಅವಕಾಶ ಸಿಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಕಂಡಕ್ಟರ್ ಗೆ ಬುದ್ದಿ ಕಲಿಸಬಹುದು ಎನ್ನುವುದು ಸಂಘದ ಹಿಂದಿರುವ ಉದ್ದೇಶ.

ಕುಡ್ಲದಲ್ಲಿ ಮಾತ್ರ ಸ್ಟೇಟ್ ಬ್ಯಾಂಕ್ ನಲ್ಲಿ ಮೀನು ಸಿಗುತ್ತೆ!

ಕುಡ್ಲದ ವಿಶೇಷ ಗಳಲ್ಲಿ ಒಂದು ಎಂದು ಪರಿಗಣಿಸಿದರೆ ಮಂಗಳೂರಿನ ಮೀನು ಪ್ರಿಯರು ಅರ್ಜೆಂಟ್ ಆಗಿ ಮೀನು ತರಬೇಕಾದರೆ ಸ್ಟೇಟ್ ಬ್ಯಾಂಕ್ ಗೆ ಹೋಗಬೇಕು. ವಿಶ್ವದ ಯಾವ ಭಾಗದಲ್ಲೂ ಇಂತಹ ವಿಚಾರ ಕಾಣಸಿಗದು.
ವಿಶೇಷವಾಗಿ ಕುಡ್ಲದ ಜನರಿಗೆ ಈ ಕುರಿತು ಯಾವುದೇ ಗೊಂದಲ ಇಲ್ಲ. ಕಾರಣ ಈ ವಿಚಾರ ಅವರಿಗೆ ಹೊಸತಲ್ಲ ಆದರೆ ಕುಡ್ಲ ಬಿಟ್ಟು ಉಳಿದ ಮಂದಿಯ ಗಮನಕ್ಕೆ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಅಲ್ಲಿದ್ದ ಕಾರಣ ಅದಕ್ಕೆ ಈ ಹೆಸರು ಹುಟ್ಟಿತು ಎನ್ನಲಾಗುತ್ತಿದೆ. ಇದರ ಮೂಲ ಹೆಸರು ಏನಿತ್ತು ಎನ್ನುವುದು ಇಲ್ಲಿಯ ಹಿರಿಯರಿಗೆ ಗೊತ್ತಿದೆ. ಹೊಸ ಪೀಳಿಗೆಯ ಮಕ್ಕಳಿಗೆ ಅದು ಸ್ಟೇಟ್ ಬ್ಯಾಂಕ್ ಮಾತ್ರ ಅವರಿಗೆ ಅಲ್ಲಿ ಮೀನು ಜತೆಯಲ್ಲಿ ಬಸ್ ಸಿಗುವ ತಾಣವಷ್ಟೇ.