ಕಾವೂರಿನ ಬಿಜಿಎಸ್ ವಿದ್ಯಾ ಸಂಸ್ಥೆಯ ಪ್ರತಿಯೊಂದು ಭಾರತೀಯ ಹಬ್ಬಗಳನ್ನು ತುಂಬಾ ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಅದರಲ್ಲೂ ನಾಗರಪಂಚಮಿ, ರಕ್ತಬಂಧನ ಈಗ ಕೃಷ್ಣ ಜನ್ಮಾಷ್ಟಮಿಯನ್ನು ಕೂಡ ವಿಶೇಷವಾಗಿ ಆಚರಣೆ ಮಾಡಲಾಗಿದೆ.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳು ಕೃಷ್ಣ ಲೀಲೆಗಳ ಪ್ರದರ್ಶನದ ಮೂಲಕ ಸಂಸ್ಥೆಯ ಆವರಣವನ್ನು ನಂದಗೋಕುಲ ಮಾಡಿದ್ದಾರೆ. ಕಾವೂರು ಗಾಂಧಿನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿ ಹೊತ್ತಿರುವ ಶ್ರೀಧರ್ಮಪಾಲನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಉತ್ತಮ ಶೈಕ್ಷಣಿಕ ಸಂಸ್ಥೆಯ ಜತೆಯಲ್ಲಿ ವಿದ್ಯಾರ್ಥಿಗಳಲ್ಲಿ ದೇಶಿಯ ಮೌಲ್ಯವನ್ನು ಬಿತ್ತುವ ಕಾರ‍್ಯವನ್ನು ಮಾಡುತ್ತಿದೆ.
Tagged: Sri Sri Dharmapalanatha Swamiji
ಬಿಜಿಎಸ್‌ನಲ್ಲಿ ಗಮನ ಸೆಳೆಯುವ ಬೆಳದಿಂಗಳ ಚಿಂತನ ಚಾವಡಿ
ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು ಇಂತಹ ಪುಣ್ಯಭೂಮಿ ಭಾರತದಲ್ಲಿ ಜನ್ಮ ತಾಳಿರುವುದು ನಮ್ಮ ಸುಕೃತದ ಫಲ. ಪೂರ್ವಿಕರು, ಋಷಿಮುನಿ, ಸಂತರು ಹಾಕಿ ಕೊಟ್ಟ ಶ್ರೇಷ್ಠ ಪರಂಪರೆ ನಮ್ಮ ಭರತಖಂಡವನ್ನು ಇತರೆಲ್ಲರಿಗಿಂತ ವಿಶಿಷ್ಟವಾಗಿಸಿ, ವಿಶ್ವಗುರು ಸ್ಥಾನದಲ್ಲಿರುವಂತೆ ಮಾಡಿದೆ. ಇದಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿಯೇ ಮೂಲ ಕಾರಣ ಎಂದು ಶ್ರೀಆದಿಚುಂಚನ ಗಿರಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಶಾಖಾಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಜನ್ಮದಿಂದ ಮರಣದವರೆಗೂ ಆಚರಿಸಲ್ಪಡುವ ನಮ್ಮ ಆಚಾರಗಳು ವಿಶ್ವದಲ್ಲೆಲ್ಲೂ ಕಾಣ ಸಿಗದು. ಇಂತಹ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೆತ್ತವರು ಗುರುಗಳು, ಅತಿಥಿಗಳನ್ನು ದೇವರೆಂದು ಪೂಜಿಸಿದ ಈ ದೇಶದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳು ಶುಭ ಸಂಕೇತವಲ್ಲ. ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವುದು ಭಾರತೀಯ ಸಂಸ್ಕೃತಿ ಅಲ್ಲ ಎಂಬುದನ್ನು ಯುವ ಪೀಳಿಗೆ ಮನಗಾಣಬೇಕು. ಈ ತಪೋ ಭೂಮಿಯ ಭವ್ಯ ಸಂಸ್ಕೃತಿಯನ್ನು ಉಳಿಸಲು ನಾವೆಲ್ಲರು ಪಣತೊಡಬೇಕು ಎಂದರು.
ವಿದ್ವಾಂಸ ಮುನಿರಾಜ ರೆಂಜಾಳ ಅವರು ಭಾರತೀಯ ಸಾಂಸ್ಕೃತಿಕ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು. ಕಾವೂರು ಬಂಟರ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರಾಧ್ಯಾಪಕ ಸುಬ್ರಹ್ಮಣ್ಯ ಸ್ವಾಗತಿಸಿದರು. ಸಂಸ್ಥೆಯ ಮ್ಯಾನೇಜರ್ ಸುಬ್ಬಕಾರಡ್ಕ ವಂದಿಸಿದರು. ನರಸಿಂಹ ಕುಲಕರ್ಣಿ ನಿರೂಪಿಸಿದರು.