ಒಂದಲ್ಲ ಎರಡಲ್ಲ ತಮ್ಮ ಬದುಕಿನ ಕೊನೆಯ ತನಕನೂ ಭೂಮಿ, ಕೃಷಿ,ಪರಿಸರ ಜತೆಗೆ ಇಂದಿನ ಯುವಜನತೆಗೊಂದು ಮಾದರಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಪಾವಂಜೆಯ ರುಕ್ಮಯ್ಯ ಮೂಲ್ಯರು ಇನ್ನು ಮುಂದೆ ಬರೀ ನೆನಪು ಮಾತ್ರ.
90ರ ಹರೆಯದಲ್ಲೂ ಮುಂಜಾನೆ ಯಿಂದ ಸಂಜೆಯ ತನಕ ಗದ್ದೆಯಲ್ಲಿ ದುಡಿಯುತ್ತಾ ಅವರು ಬಹಳಷ್ಟು ಮಂದಿಗೆ ಆದರ್ಶರಾಗಿದ್ದರು. ಎಂದಿನಂತೆ ಕೆಲಸಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಭಾನುವಾರ ವಾಹನವೊಂದು ಡಿಕ್ಕಿಯಾದ ಪರಿಣಾಮ ಅವರು ಮೃತಪಟ್ಟರು.
ವಿಶೇಷ ಎಂದರೆ ಅವರು ಕೃಷಿ ಮೇಲಿಟ್ಟ ಅಪಾರ ಪ್ರೀತಿಯಿಂದ ಅವರು ಎಲ್ಲರ ಮೆಚ್ಚುಗೆಗೆ ಅರ್ಹರಾಗಿದ್ದರು. ಕುಡ್ಲಸಿಟಿ ಅವರ ಆತ್ಮಕ್ಕೆ ಭಗವಂತನಲ್ಲಿ ಶಾಂತಿ ಕೋರುತ್ತದೆ.