ಮಂಗಳೂರು ಸಂಸದರಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆ ಯಾಗುವ ಮೂಲಕ ಮೂರು ಬಾರಿ ಸಂಸದರಾಗಿ ದಾಖಲೆ ನಿರ್ಮಿಸಿದ್ದಾರೆ. ಇದು ನಳಿನ್ ರ ಹ್ಯಾಟ್ರಿಕ್ ಗೆಲುವು ಎನ್ನುವುದು ವಿಶೇಷ. ಪ್ರತಿ ಹಂತದ ಮತ ಎಣಿಕೆಯಲ್ಲೂ ಲೀಡ್ ಉಳಿಸಿಕೊಂಡು ಜಿಲ್ಲೆಯ ಜನತೆ ಮೋದಿ ಅಭಿವೃದ್ಧಿ ಯ ಮಂತ್ರಕ್ಕೆ ಪೂರ್ಣ ಅಂಕ ನೀಡಿದ್ದಾರೆ ಎನ್ನುವುದು ಮತದಾರರ ಅಭಿಪ್ರಾಯ.
Tagged: result
ಎಸ್ಸೆಸ್ಸೆಲ್ಸಿ ತುಳು ಭಾಷೆಯಲ್ಲಿ 100 ರಿಸಲ್ಟ್
ಎಸ್ಸೆಸ್ಸೆಲ್ಸಿ ಫಲಿತಾಂಶ ಈಗಾಗಲೇ ಹೊರಬಿದಿದ್ದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಈ ಬಾರಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 617 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದಾರೆ.
ಅದರಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ. 100 ಫಲಿತಾಶ ದಾಖಲಾಗಿದೆ. ಅದರಲ್ಲಿಯೂ 63 ವಿದ್ಯಾರ್ಥಿಗಳು ನೂರಕ್ಕೆ100 ಅಂಕ ಪಡೆದಿದ್ದಾರೆ.ಉಭಯ ಜಿಲ್ಲೆಗಳ ಒಟ್ಟು 41 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ. ತುಳುವಿನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯ ಒಟ್ಟು ಫಲಿತಾಶದಲ್ಲಿ ಏರಿಕೆ ಕಂಡುಬಂದಿದೆ.