Tagged: Ponnu Pili

ಕುಡ್ಲದ ಹೆಣ್ಣು ಪಿಲಿ ಸುಷ್ಮಾ ರಾಜ್

ಕರಾವಳಿಯ ಹುಲಿವೇಷ ಸಮಯದಲ್ಲಿ ಹುಲಿವೇಷ ಹಾಕೋದು ಬರೀ ಪುರುಷರು ಮಾತ್ರ ಎನ್ನುವ ಲೆಕ್ಕಚಾರವನ್ನು ಬುಡಮೇಲು ಮಾಡಿದ ಹುಡುಗಿ ಎಂದರೆ ಸುಷ್ಮಾ ರಾಜ್. ಅವರನ್ನು ಕರಾವಳಿಯ ಹೆಣ್ಣು ಹುಲಿ ಎಂದೇ ಕರೆಯಲಾಗುತ್ತದೆ ಸಾಕಷ್ಟು ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
ಮುಖ್ಯವಾಗಿ ಮಂಗಳೂರಿನಲ್ಲಿ ನಡೆಯುವ ದಸರಾದಲ್ಲೂ ಅವರ ಹುಲಿವೇಷ ಬೊಂಬಾಟ್ ಆಗಿರುತ್ತದೆ. ಉಡುಪಿಯ ಕಲಾವಿದ ಅಶೋಕ್ ರಾಜ್ ಮತ್ತು ರಾಧಾ ದಂಪತಿಗಳ ಕಿರಿಯ ಪುತ್ರಿ. ಹುಲಿವೇಷದತ್ತ ಸುಷ್ಮಾಗೆ ಬಾಲ್ಯದಿಂದಲೂ ಆಸಕ್ತಿ. ಕಾರಣ, ಅಪ್ಪ ಸುಮಾರು ಮೂವತ್ತು ವರುಷಗಳಿಂದ ಹುಲಿವೇಷ ಕುಣಿತದ ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ.