ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಡರ್ ನ ಸಾಹಸದಲ್ಲಿ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ಕಾರ್ಲದ ಮೂಲದ ವಿಜ್ಞಾನಿ ವೈ.ದೇವದಾಸ್ ಶೆಣೈ ಕೂಡ ಒಬ್ಬರು. ಅವರು ಸರಕಾರಿ ಶಾಲೆಯಲ್ಲಿ ಓದಿದವರು. ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡು ಈಗ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ನಿಂತಿರೋದು ಹೆಮ್ಮೆಯ ವಿಚಾರ.
Tagged: pm
ಅಷ್ಟಮಿಗೆ ಫ್ಲೆಕ್ಸ್ ಶಾಸಕರ ಹೊಸ ಕಲ್ಪನೆ
ಕುಡ್ಲಸಿಟಿಯ ನಿರಂತರ ಅಭಿಯಾನಕ್ಕೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಪೂರ್ಣ ರೂಪದ ಬೆಂಬಲ ಸೂಚಿಸುವ ಮೂಲಕ ಮಂಗಳೂರಿನಲ್ಲಿ ಇನ್ನು ತಮ್ಮ ಯಾವುದೇ ಬ್ಯಾನರ್ ಬಿದ್ದರೂ ಕೂಡ ಅದು ಪ್ಲಾಸ್ಟಿಕ್ ಬದಲು ಬಟ್ಟೆಯ ಫ್ಲೆಕ್ಸ್ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಹಿಂದೆ ಕುಡ್ಲ ಸಿಟಿ ಜವಾಬ್ದಾರಿಯುತ ಶಾಸಕರ ಅಭಿಮಾನಿಗಳು ಫ್ಲೆಕ್ಸ್ ಹಾಕುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿರುವ ವಿಚಾರದಲ್ಲಿ ಶಾಸಕರ ಗಮನಕ್ಕೆ ಸಾಮಾಜಿಕ ಜಾಲತಾಣದ ಮಾಹಿತಿ ಹಂಚಲಾಗಿತ್ತು.
ಸಾರ್ವಜನಿಕರು ನೀವು ಮಾಡುತ್ತಿರುವ ಕೆಲಸ ಸರಿಯಲ್ಲ ಎಂದು ಕರೆ,ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಮಂಡಿಸಿದ ಬಳಿಕ ಸುಧಾರಿಸಿಕೊಂಡ ಅಭಿಮಾನಿಗಳು ಫ್ಲೆಕ್ಸ್ ತೆರವು ಮಾಡುವ ಮೂಲಕ ಗಮನ ಸೆಳೆದಿದ್ದರು. ಈಗ ಪ್ರಧಾನಿ ಅವರ ಮಾತಿನಂತೆ ನಡೆದುಕೊಳ್ಳುವ ಕಾರ್ಯವಾಗುತ್ತಿದೆ. ಜೈ ಮೋದಿಜೀ
ಸುಷ್ಮಾ ಸ್ವರಾಜ್ ಮತ್ತು ಕುಡ್ಲದ ಮಲ್ಲಿಗೆ !
ಬಿಜೆಪಿ ನಾಯಕಿ ದಿ.ಸುಷ್ಮಾ ಸ್ವರಾಜ್ ಸಾಕಷ್ಟು ಬಾರಿ ಮಂಗಳೂರು ಸೇರಿದಂತೆ ಕರಾವಳಿಯ ಉಡುಪಿಗೂ ಬಂದಿದ್ದಾರೆ. ವಿಶೇಷ ಎಂದರೆ ಪ್ರತಿ ಸಾರಿನೂ ಬರುವಾಗ ಅವರಿಗೆ ಕರಾವಳಿಯ ಅವರ ಅಭಿಮಾನಿಗಳು ಪ್ರೀತಿಯಿಂದ ಮಲ್ಲಿಗೆ ನೀಡಲಾಗುತ್ತಿತ್ತು. ಅವರು ಅಷ್ಟೇ ಪ್ರೀತಿಯಿಂದ ಸ್ವೀಕಾರ ಮಾಡಿ ತಲೆಗೆ ಇಟ್ಟುಬಿಡುತ್ತಿದ್ದರು. ಮಲ್ಲಿಗೆ ಸೂಸುವ ಪರಿಮಳದಿಂದ ಮತ್ತಷ್ಟು ಹುರುಪು ಅವರಲ್ಲಿ ಬಂದು ಬಿಡುತ್ತಿತ್ತು ಎನ್ನುವ ಮಾತನ್ನು ಅವರ ಅಭಿಮಾನಿ ಗಳು ಹೇಳುತ್ತಾರೆ.
ಕರಾವಳಿ ಸ್ವಾಮೀಜಿಗೆ ನಮೋ ಗುರುವಂದನೆ
ಉಡುಪಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಗುರು ಪೂರ್ಣಿಮಾ ದ ಅಂಗವಾಗಿ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ಉಡುಪಿ ಕೃಷ್ಣ ನ ಪ್ರತಿಮೆ ಪ್ರಭಾವಳಿಯನ್ನು ನೀಡುವ ಮೂಲಕ ಉತ್ತಮ ಸರಕಾರಕ್ಕೆ ಶುಭ ಹಾರೈಸಿದರು.