ಜಗತ್ತು ಬದಲಾಗಿದೆ ಅದರಲ್ಲೂ ಕುಡ್ಲ ಕೂಡ ಅಷ್ಟೇ ವೇಗದಲ್ಲಿ ಬದಲಾಗುತ್ತಿದೆ. ಮನುಷ್ಯ ನ ಸ್ವಾರ್ಥ ದ ಬದುಕು ಎಲ್ಲಕ್ಕೂ ಕಾರಣವಾಗಿದೆ. ಗೂಗಲ್ ಅರ್ಥ್ ಈ ಎಲ್ಲ ಬದಲಾವಣೆಯನ್ನು ಸಮರ್ಥ ವಾಗಿ ದಾಖಲೆ ಮಾಡುವ ಕಾರ್ಯವನ್ನು ಮಾಡಿದೆ.
ಮಂಗಳೂರು 2004 ರಲ್ಲಿ ಎಷ್ಟು ಮರ,ಗಿಡಗಳ ಜತೆಗೆ ಹಸಿರು ತುಂಬಿದ ನಗರವಾಗಿತ್ತು. ಈ ಬಳಿಕ ಮಂಗಳೂರು 2014 ರಲ್ಲಿ ಹೇಗಿದೆ. ಈಗ ಮಂಗಳೂರಿನಲ್ಲಿ ಎಷ್ಟು ಹಸಿರಿದೆ. ಮುಂದೆ ಕುಡ್ಲ ಏನಾಗಲಿದೆ ಎನ್ನುವ ಎಚ್ಚರಿಕೆಯನ್ನು ಗೂಗಲ್ ಅರ್ಥ್ ವಿವರ ವಾಗಿ ಚಿತ್ರದ ಮೂಲಕ ವಿವರಿಸಿದೆ. ಮುಂದಿನ ದಿನಗಳಲ್ಲಿ ಹಸಿರು ಕುಡ್ಲ ಸಿಟಿಯ ಉಸಿರಾಗಲಿ.
Tagged: plant
ನೇರಳೆ ಹಣ್ಣು ಮಾರುವ ಷಣ್ಮುಗ ಬಿಸಿನೆಸ್ ಟೆಕ್ನಿಕ್
ಕುಡ್ಲ ಸಿಟಿಯೊಳಗೆ ನೇರಳೆ ಹಣ್ಣು ಎಂಟ್ರಿಯಾಗಿದೆ. ಸೆಂಟ್ರಲ್ ಮಾರ್ಕೆಟ್ ಹೊರಭಾಗದಲ್ಲಿ ನೇರಳೆಹಣ್ಣು ಮಾರುವ ಮೂರು ನಾಲ್ಕು ಮಂದಿಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ವ್ಯಕ್ತಿ ಷಣ್ಮುಗ.
ವರ್ಷ 70 ದಾಟಿದರೂ ಕೂಡ ಬಿಸಿಲಿಗೆ ಕೂತು ನೇರಳೆಹಣ್ಣು ಮಾರುವ ಇವರು ಮಂಗಳೂರಿನ ಕಾರ್‌ಸ್ಟ್ರೀಟ್ ಕಡೆಯವರು ಅವರು 40 ವರ್ಷಗಳಿಂದ ಇಂತಹ ಹಣ್ಣುಗಳನ್ನು ಮಾರಾಟ ಮಾಡುವುದೇ ವ್ಯಾಪಾರ.
ಬರೀ ಒಂದು ತಿಂಗಳ ಕಾಲ ಮಾತ್ರ ಅವರು ನೇರಳೆ ಹಣ್ಣು ಮಾರುತ್ತಾರೆ. ಉಳಿದ ತಿಂಗಳುಗಳ ಕಾಲ ಉಳಿದ ಚಾಕಲೇಟ್ ಸೇರಿದಂತೆ ನಾನಾ ವ್ಯಾಪಾರ ಮಾಡುತ್ತಾರೆ. ತಿಂಗಳಿಗೊಂದು ವ್ಯಾಪಾರ ಷಣ್ಮುಗ ಅವರ ಬಿಸಿನೆಸ್ ಟೆಕ್ನಿಕ್.
ಈಗ ನೇರಳ ಹಣ್ಣಿನ ಸೀಸನ್ ಕಾಲು ಕೆಜಿಗೆ 7೦ ರೂನಂತೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಹುಬ್ಬಳ್ಳಿ, ತಿರುಪತಿಯಿಂದ ಈ ಹಣ್ಣುಗಳು ಬರುತ್ತದೆ. ಕರಾವಳಿಯಲ್ಲಿ ನೇರಳೆ ಹಣ್ಣು ದೊಡ್ಡ ಪ್ರಮಾಣದ್ಲಿ ಸಿಗುವುದಿಲ್ಲವಂತೆ ಕಳೆದ ಆರು ವರ್ಷಗಳಿಂದ ಕರಾವಳಿ ನೇರಳೆಹಣ್ಣು ಮಾರುಕಟ್ಟೆಗೆ ಬಂದಿಲ್ಲ ಎನ್ನುವುದು ಅವರ ಮಾತು.
ಅಂದಹಾಗೆ ನೇರಳೆಹಣ್ಣಿನ ಮಾರಾಟ ಸಮಯದಲ್ಲಿ ಷಣ್ಮುಗ ಅವರು ಹೇಳುವ ಒಂದೇ ಮಾತು ನೇರಳೆಹಣ್ಣು ಔಷಧೀಯ ಗುಣವನ್ನು ಹೊಂದಿದೆ ಎಂದು ಟಿವಿಯಲ್ಲಿ ಬರ‍್ತಾ ಇರುತ್ತದೆ ಎನ್ನುವುದು ಅವರ ಮಾತು.
ಅವರು ಹೇಳುವಂತೆ ನೇರಳೆಹಣ್ಣು ಸಕ್ಕರೆ ಕಾಯಿಲೆಗೆ, ರಕ್ತ ಹೀನತೆ, ರಕ್ತದ ಶುದ್ಧಿಕರಣ, ರಕ್ತದ ಒತ್ತಡ ತಗ್ಗಿಸುವುದು, ಹೊಟ್ಟೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಹತ್ತಾರು ರೋಗಗಳಿಗೆ ಇದು ದಿವ್ಯ ಔಷಧವಾಗಿದೆ.