Tagged: Pilikula Lake

ಪಿಲಿಕುಳದ ‘ರಾಣಿ’ಗೆ ಐದು ಮರಿಗಳು !

ಪಿಲಿಕುಳದ ‘ರಾಣಿ’ಗೆ ಐದು ಮರಿಗಳು ! ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ೮ ವರ್ಷದ ರಾಣಿ ಎನ್ನುವ ಹೆಣ್ಣು ಹುಲಿ ಮುದ್ದಾದ 3 ಹೆಣ್ಣು ಹಾಗೂ 2 ಗಂಡು ಮರಿಗಳಿಗೆ ಜನ್ಮ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಾಣಿ ಮರಿ ಹಾಕಿದ್ದು, ಎಲ್ಲ ಮರಿಗಳು ಆರೋಗ್ಯವಾಗಿವೆ. ಅವುಗಳಿಗೆ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ತಾಯಿ-ಮರಿಗಳನ್ನು ಬೋನಿನಲ್ಲಿಡಲಾಗಿದೆ. ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. 2-3 ತಿಂಗಳ ಬಳಿಕ ಅವುಗಳಿಗೆ ಚುಚ್ಚು ಮದ್ದು- ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿದ ಬೋನಿನಿಂದ ಹೊರ ಬಿಡಲಾಗುವುದು ಎಂದು ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಣಿಯನ್ನು ಮೂರು ವರ್ಷಗಳ ಹಿಂದೆ ಬನ್ನೇರುಘಟ್ಟದಿಂದ ತರಲಾಗಿತ್ತು. ಸದ್ಯ ಮರಿಗಳು ತಾಯಿಯ ಹಾಲನ್ನಷ್ಟೇ ಸೇವಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾಂಸಾಹಾರ ನೀಡಲಾ ಗುತ್ತದೆ. 3 ವರ್ಷಗಳ ಬಳಿಕ ಮರಿಗಳನ್ನು ಬೇರೆ ಮೃಗಾಲಯಗಳಿಗೆ ಕಳು ಹಿಸುವ ಯೋಚನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.