ಪಂಪ್‌ವೆಲ್ ಸರ್ಕಲ್ ಮಂಗಳೂರಿನ ಹೆಬ್ಬಾಗಿಲು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಇಡೀ ಕುಡ್ಲದ ಇತಿಹಾಸದಲ್ಲಿ ಇಂತಹ ಒಂದು ಸರ್ಕಲ್ ನಿರ್ಮಾಣ ಮಾಡುವ ಕನಸ್ಸು ಇನ್ನು ಕೂಡ ಪೂರ್ಣವಾಗಿಲ್ಲ.
ಜನಪ್ರತಿನಿಧಿಗಳನ್ನು ನೇರವಾಗಿಲ್ಲ ಕೇಳುವ ಧೈರ್ಯ ಇಲ್ಲದ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಪಂಪ್‌ವೆಲ್ ಸರ್ಕಲ್ ಕನಸ್ಸು ಇನ್ನು ಪೂರ್ಣವಾಗಲು ಅದೆಷ್ಟೋ ವರ್ಷಗಳೇ ಬೇಕು ಮಾರಾಯ್ರೆ. ಎಂಜಿನಿಯರ್ ಡೇ ಆಚರಣೆ ಮಾಡುವಾಗ ಪಂಪ್‌ವೆಲ್ ಸರ್ಕಲ್ ಮಾಡಲು ಶ್ರಮ ಪಟ್ಟ ಎಂಜಿನಿಯರ್‌ಗಳನ್ನು ಬಿಟ್ಟು ಉಳಿದವರಿಗೆ ಹ್ಯಾಪಿ ಎಂಜಿನಿಯರ‍್ಸ್ ಡೇ.
Tagged: mla
ಶಾಸಕರ ಭರವಸೆ ಮುಷ್ಕರಕ್ಕೆ ಬಿತ್ತು ಬ್ರೇಕ್ !
ಶಾಲಾ ಮಕ್ಕಳ ವಾಹನ ಚಾಲಕರ ಮೇಲಿನ ಕಿರುಕುಳವನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ಶಾಲಾ ಮಕ್ಕಳ ವಾಹನ ಚಾಲಕರು ಮಂಗಳೂರಿನಲ್ಲಿ ನಡೆಸುತ್ತಿದ್ದ ಸ್ವಯಂಪ್ರೇರಿತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಂದು ಪೂರ್ಣ ವಿರಾಮ ಸಿಕ್ಕಿದೆ. ಈ ಮೂಲಕ ಜು.13 ರಿಂದ ಎಂದಿನಂತೆ ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ರೆಡಿಯಾಗಿದೆ.
ಅಂದಹಾಗೆ ಈ ಎಲ್ಲ ಬೆಳವಣಿಗೆಯ ಹಿಂದೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಭರವಸೆ ಮಾತುಗಳೇ ಮುಷ್ಕರ ಹಿಂತೆಗೆಯುವ ಕೆಲಸಕ್ಕೆ ಸಾಥ್ ಕೊಟ್ಟಿದೆ. ಮುಖ್ಯವಾಗಿ ಶಾಲಾ ವಾಹನ ಚಾಲಕರ ಸಂಘದ ಪದಾಧಿಕಾರಿಗಳ ಜತೆಯಲ್ಲಿ ಮಾತನಾಡಿದ ಶಾಸಕರು ಈ ಬಳಿಕ ಪೊಲೀಸ್ ಕಮೀಷನರ್ ಜತೆಯಲ್ಲೂ ಈ ಕುರಿತು ಮಾತುಕತೆ ನಡೆಸುತ್ತೇನೆ. ಸಮಸ್ಯೆಗೆ ಪರಿಹಾರ ನೀಡುವ ಕಾರ‍್ಯ ಕೈಗೆತ್ತಿಕೊಂಡು ನ್ಯಾಯ ನೀಡುತ್ತೇನೆ ಎನ್ನುವ ಮಾತುಗಳೇ ಮುಷ್ಕರ ಹಿಂತೆಗೆಯಲು ಕಾರಣವಾಗಿದೆ.
ಈ ಮೂಲಕ ಮಂಗಳೂರಿನ ವಿದ್ಯಾರ್ಥಿಗಳು ಹೆತ್ತವರು ಕಳೆದ ಎರಡು ದಿನಗಳಿಂದ ಈ ಶಾಲಾ ವಾಹನಗಳು ಇಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.
ದೇಶದಲ್ಲಿಯೇ ಅಪೂರ್ವ ಕುಡ್ಲದ ಮಳೆ ರಸ್ತೆ
ದೇಶದ ಯಾವುದೇ ನಗರದಲ್ಲೂ ಮಳೆ ಬಂದಾಗ ನೀರು ರಸ್ತೆಯ ಬದಿಯಲ್ಲಿರುವ ಚರಂಡಿ ಮೂಲಕ ಹರಿದು ಹೋಗುತ್ತದೆ. ಆದರೆ ಮಂಗಳೂರಿನಲ್ಲಿ ಮಾತ್ರ ಮಳೆ ನೀರು ರಸ್ತೆಯಲ್ಲೇ ಸಾಗುತ್ತದೆ. ಸ್ಮಾರ್ಟ್ ಸಿಟಿ ಮಂಗಳೂರು ಮಳೆ ರಸ್ತೆ ನೋಡುವುದು ಚೆಂದ ಸಮಸ್ಯೆಗಳು ಮಾತ್ರ ಬಹಳವಿದೆ.
ಶಾಸಕರ ಐಡಿಯಾಕ್ಕೆ ಭೇಶ್ ಎಂದ ಸ್ವಿಗ್ಗಿ
ನಮ್ಮ ಕುಡ್ಲ ಸಿಟಿ ಬೆಳೆಯುತ್ತಿದೆ. ಅದರಲ್ಲೂ ಈ ಬೆಳವಣಿಗೆಯ ಜತೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ದಿನನಿತ್ಯ ಏರಿಕೆಯಾಗುತ್ತಿದೆ. ಆಹಾರದಲ್ಲೂ ಪ್ಲಾಸ್ಟಿಕ್ ಲಕೋಟೆ(ಬ್ಯಾಗ್)ಗಳ ಪ್ರಮಾಣ ಏರಿಕೆಯಾಗುತ್ತಿದೆ.
ಮಂಗಳೂರಿನ ಫುಡ್ ಡೆಲಿವರಿ ಸಿಸ್ಟಂ ಕೂಡ ಅಷ್ಟೇ ವೇಗವಾಗಿ ಓಡುತ್ತಿದೆ. ಇಂತಹ ಸಮಯದಲ್ಲಿ ಫುಡ್ ಡೆಲಿವರಿಯಲ್ಲಿ ಕರಾವಳಿಯಲ್ಲಿ ಹೇರಳವಾಗಿ ಸಿಗುವ ಬಾಳೆ ಎಳೆಯನ್ನು ಬಳಸಿಕೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚುವ ಕಾರ‍್ಯ ಮಾಡಿದ್ದರು.
ಇದಕ್ಕೆ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿ ಕೂಡ ಈ ಕುರಿತು ಪಾಸಿಟಿವ್ ಅಭಿಪ್ರಾಯವನ್ನು ನೀಡುವ ಜತೆಗೆ ಮುಂದಿನ ದಿನಗಳಲ್ಲಿ ತಮ್ಮ ಪಾಲುದಾರ ಹೋಟೆಲ್‌ಗಳ ಜತೆಗೆ ಕಂಪನಿ ಕೂಡ ಈ ಕುರಿತು ಚಿಂತನೆ ನಡೆಸುತ್ತದೆ ಎನ್ನುವ ಅಭಿಪ್ರಾಯ ತಾಳಿದೆ.
ಕರಾವಳಿಯ ರಾಜಕಾರಣಿಗಳ ಮಾನ ಹರಾಜು ಹಾಕಿದ ಜನತೆ !
ಜನರಿಗೆ ಕುಡಿಯುವ ನೀರಿಗಾಗಿ ರೂಪಿಸಲಾದ ಎತ್ತಿನಹೊಳೆ ಯೋಜನೆ ಬೆಂಬಲಿಸಿ ಕರಾವಳಿಗೆ ಕುಡಿಯುವ ನೀರಿಗೆ ತತ್ವಾರ ಮಾಡಿದ ಜನಪ್ರತಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಆಕ್ರೋಶವ್ಯಕ್ತಪಡಿಸಿ, ನಗರದ ಹಲವೆಡೆ ಬ್ಯಾನರ್‌ಗಳನ್ನು ಪ್ರದರ್ಶನ ಮಾಡಿದ್ದಾರೆ.
ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ ಕೊಟ್ಟಾರ, ಪಂಪ್‌ವೆಲ್, ಹಂಪನಕಟ್ಟೆ ಮುಂತಾದೆಡೆ ಬ್ಯಾನರ್ ಹಾಕಲಾಗಿದೆ.
ಈ ಬ್ಯಾನರ್‌ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಸಂಜೀವ ಮಠಂದೂರು, ಹರೀಶ್ ಪೂಂಜ, ಎಸ್. ಅಂಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲ ಶಾಸಕರ ಹೆಸರು, ಭಾವಚಿತ್ರ ಹಾಕಿ, ‘ನಿಮ್ಮನ್ನು ಜನ ಚುನಾಯಿಸಿದ್ದು 40 ಲಕ್ಷ ರೂ. ಕಾರಿನಲ್ಲಿ ತಿರುಗಾಡಲು ಅಲ್ಲ, ಜಿಲ್ಲೆಯ ಜನರಿಗೆ ಈಗ ಕುಡಿಯುವ ನೀರಿಲ್ಲ, ಮೊದಲು ಎತ್ತಿನಹೊಳೆ ವಿರೋಧಿಸಿ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದರೆ ರಾಜಿನಾಮೆ ಕೊಟ್ಟು ಅಮರನಾಂತ ಉಪವಾಸ ಕುಳಿತುಕೊಳ್ಳಿ’ ಆಗ ನೀವು ನಿಜವಾದ ಜನಸೇವಕರು ಎಂಬುದನ್ನು ಸಾಬೀತುಪಡಿಸಿ ಎಂದು ಸಂದೇಶ ಹಾಕಿದ್ದಾರೆ.
ಆ ಬ್ಯಾನರ್‌ಗಳ ಪಕ್ಕದಲ್ಲಿ ಇನ್ನೊಂದು ಬ್ಯಾನರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಎತ್ತಿನಹೊಳೆ ಯೋಜನೆ ಬೆಂಬಲಿಸಿದ ದ.ಕ. ಜಿಲ್ಲೆಯವರಾದ ಡಾ. ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಫೊಟೊ ಹಾಕಿ ‘13 ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗೆ ಜಿಲ್ಲೆಯ ಜೀವನದಿಯನ್ನು ಸರ್ವನಾಶ ಮಾಡಿ, ಜನರೀಗ ಟಾಯ್ಲೆಟ್, ಚರಂಡಿ ನೀರು ಶುದ್ಧೀಕರಿಸಿ ಕುಡಿಯುವಂತೆ ಮಾಡಿದ ಮೊಯ್ಲಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ನಿದ್ದೆಯಲ್ಲಿರುವ ಜಿಲ್ಲೆಯ ಪ್ರಜೆಗಳಿಂದ ಹಾರ್ದಿಕ ಸ್ವಾಗತ ಎಂದು ವ್ಯಂಗ್ಯ ಮಾಡಿ ಬರಹ ಹಾಕಲಾಗಿದೆ.
ಕರಾವಳಿಯ ನೀರಿನ ಸಮಸ್ಯೆಗೆ ಕಾರಣಕರ್ತರಾದ ಜನಪ್ರತಿನಿಧಿಗಳಿಗೆ ಸಂದೇಶ ನೀಡುವ ಈ ಬ್ಯಾನರ್‌ನ್ನು ತೆಗೆಯುವಂತಿಲ್ಲ. ಒಂದು ವೇಳೆ ತೆಗೆಯುವುದಾದರೆ ‘ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್ ಮೊದಲು ತೆರವು ಮಾಡಿ. ಆ ಬ್ಯಾನರ್‌ಗಳನ್ನು ತೆರವು ಮಾಡದೆ ಎತ್ತಿನಹೊಳೆ ಕುರಿತು ಅಳವಡಿಸಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸಿದರೆ ಎಚ್ಚರಿಕೆ…. ಎಂದು ಮಂಗಳೂರು ಮಹಾನಗರಪಾಲಿಗೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.