Tagged: medicine

ಕಣಿಲೆ ಕಂಡ್ರೆ ಕುಡ್ಲದವರಿಗೆ ಬರೀ ಖುಷಿ

ಬಿದಿರಿನ ಕಣಿಲೆ ಎಂದರೆ ಕುಡ್ಲದವರಿಗೆ ಬಹಳ ಇಷ್ಟ. ಮಳೆಗಾಲದಲ್ಲಂತೂ ಇದರ ಪಲ್ಯ ಅಥವಾ ಯಾವುದೇ ಐಟಂ ಮಾಡಿದ್ರು ಚಪ್ಪರಿಸಿಕೊಂಡು ತಿನ್ನುತ್ತಾರೆ.

ವಿಶೇಷ ಎಂದರೆ ಕಣಿಲೆಯಲ್ಲಿ ಔಷಧೀಯ ಗುಣವಿದೆ. ಅದಕ್ಕೂ ಮುಖ್ಯವಾಗಿ ಕಡಿಮೆ ಕ್ಯಾಲೋರಿ, ಮಿತವಾದ ಕಾರ್ಬೋಹೈಡ್ರೇಟ್ ಸೇರಿದಂತೆ ಪಚನ ಕ್ರಿಯೆ ಗೂ ಇದು ಸಹಕಾರಿ. ಹಳೆಯ ಕಾಲದಲ್ಲಿ ತುಳುನಾಡಿನ ಜನರು ಮಳೆಗಾಲದಲ್ಲಿ ಹೆಚ್ಚು ಇದನ್ನು ಬಳಸುತ್ತಿದ್ದರು ಈ ಮೂಲಕ ಮಳೆಗಾಲದ ರೋಗಗಳಿಂದ ಮುಕ್ತಿ ಪಡೆಯುತ್ತಿದ್ದರು ಈಗ ಬಿದಿರು ಕಡಿಮೆಯಾಗುತ್ತಿದೆ. ಕಣಿಲೆ ಕೂಡ ಸಿಗುತ್ತಿಲ್ಲ ಇಂಗ್ಲಿಷ್ ಔಷಧೀಯ ಮುಂದೆ ಈ ಕಣಿಲೆ ಕೂಡ ಸಪ್ಪೆಯಾಗಿದೆ.

ಶ್ರೀಕೃಷ್ಣ ನಿಗೆ ಅರ್ಪಿಸಿದ ತುಳಸಿಯೇ ಮೆಡಿಸಿನ್

ಉಡುಪಿ ಶ್ರೀ ಕೃಷ್ಣ ನಿಗೆ ನಿತ್ಯವೂ ಅರ್ಪಿಸುವ ಲಕ್ಷ ಲಕ್ಷ ತುಳಸಿ ಈಗ ಆಯುರ್ವೇದ ಕಂಪನಿಯೊಂದು ಔಷಧವಾಗಿ ಬದಲಾಯಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ತುಳಸಿಯ ಕಫ ಸಂಬಂಧಿಸಿದ ಔಷಧ,ನಶ್ಯ,ಸಿರಪ್ ಗಳನ್ನು ಮಾಡುತ್ತಿದೆ. ದಿನಕ್ಕೆ 10 ಕೆಜಿ ತುಳಸಿಯನ್ನು ನಾನಾ ವಿಧಾನವನ್ನು ಬಳಸಿಕೊಂಡು ಮಾಡುವ ಮೂಲಕ ದೇವರಿಗೆ ಬಳಸಿದ ತುಳಸಿಯನ್ನು ಔಷಧೀಯವಾಗಿ ಯೂ ಬಳಸಿಕೊಳ್ಳುವ ಕೆಲಸ ಬಹಳ ಒಳ್ಳೆಯದು.

ಗೆದ್ದಲು ನಾಶಕ್ಕೆ ದಡ್ಡಾಲ ಮರದ ತೊಗಡೆಯ ಮೆಡಿಸಿನ್

ಕರಾವಳಿಯ ಬೆಟ್ಟ ಗುಡ್ಡಗಳಲ್ಲಿ ಹೇರಳವಾಗಿ ಬೆಳೆಯುವ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಗೆದ್ದಲು ನಾಶಕ ದ್ರಾವಣ ತಯಾರಿಸುವ ಪುತ್ತೂರಿನ ವಿದ್ಯಾರ್ಥಿನಿಯರಿಬ್ಬರ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ರಜತ ಪದಕ ಗಳಿಸಿದೆ.

ಪುತ್ತೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರು. ಇವರಿಬ್ಬರೂ ಅಮೆರಿಕಾದ ನ್ಯೂಯಾರ್ಕ್‌ನ ಓಸ್‌ವೆಗೊ ಯುನಿವರ್ಸಿಟಿಯಲ್ಲಿ ಜೂನ್ 17 ರಂದು ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ತಮ್ಮ ಪ್ರಾಜೆಕ್ಟ್ ಮಂಡಿಸಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಯಾವುದೇ ಕೃತಕ ವಸ್ತುವಾಗಲೀ, ರಾಸಾಯನಿಕವಾಗಲೀ ಬಳಸದೆ ಕೇವಲ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಅದರಿಂದ ಈ ಜಲೀಯ ಸಾರ ತಯಾರಿಸಲಾಗಿತ್ತು. ಸಾಮಾನ್ಯವಾಗಿ ಮನೆಯ ಒಳಗೆ, ಹೊರಗೆ ಕಾಣಿಸುವ ಗೆದ್ದಲುಗಳನ್ನು ಈ ಸಾರದ ಮೂಲಕ ಸುಲಭವಾಗಿ ನಿರ್ಮೂಲನೆ ಮಾಡಬಹುದಾಗಿದೆ ಮತ್ತು ಇದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯಿಲ್ಲ ಎಂಬುದನ್ನು ಪ್ರಾಜೆಕ್ಟ್ ಮೂಲಕ ತೋರಿಸಿಕೊಡಲಾಗಿತ್ತು.