Tagged: mangaloresouth mla

ಶಾಸಕರೇ ಕ್ಲೀನ್ ಮಂಗಳೂರಿಗೆ ನೀವು ಸಹಕರಿಸಿ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಅನಧಿಕೃತ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಹಾಗೂ ತಪ್ಪಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ವಿಚಾರದಲ್ಲಿ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಆದರೆ ಮಂಗಳೂರಿನ ಉರ್ವಸ್ಟೋರ್ ಸರಕಾರಿ ಕ್ವಾಟ್ರರ್ಸ್ ಬಳಿಯಲ್ಲಿ ಸಾಗಿದಾಗ ಭರ್ತಿ ಮೂರು ಫ್ಲೆಕ್ಸ್‌ಗಳ ಮೂಲಕ ಶಾಸಕ ಡಿ.ವೇದವ್ಯಾಸ ಕಾಮತ್ ರಾರಾಜಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛತೆಯ ಪಾಠ ಹೇಳುವ ಶಾಸಕರು ಪರೋಕ್ಷ ರೀತಿಯಲ್ಲಿ ಫ್ಲೆಕ್ಸ್ ಸಂಸ್ಕೃತಿಗೆ ಮಣೆ ಹಾಕುವ ಮೂಲಕ ಕ್ಲೀನ್ ಮಂಗಳೂರು ಅಭಿಯಾನಕ್ಕೆ ತಡೆಯಾಗುತ್ತಿದೆ. ದಯವಿಟ್ಟು ಶಾಸಕರೇ ಸ್ವಚ್ಛತೆಯ ಕಡೆಗೆ ನೀವು ಗಮನ ಮೊದಲು ಕೊಡಿ.