ಮಂಗಳೂರಿನ ಬೋಳಾರ ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಮಂಗಳಾದೇವಿಯ ಉತ್ಸವ ಮೂರ್ತಿಯ ಶೋಭಾಯಾತ್ರೆಯನ್ನು ಕಣ್ಣಾರೆ ನೋಡುವ ಭಾಗ್ಯವೇ ಒಂದು ವಿಶಿಷ್ಟ. ನವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ರಥೋತ್ಸವವಂತೂ ಕರಾವಳಿಯ ದೇವಳಗಳಲ್ಲಿ ಸಿಗುವುದೇ ಅಪರೂಪ. ಅಂದಹಾಗೆ ಮಂಗಳೂರು ಹೆಸರಿನ ಹಿಂದಿನ ಶಕ್ತಿಯೇ ಮಂಗಳಾದೇವಿ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.
Tagged: mangaladevi
ಕುಡ್ಲದ ಸಿಟಿ ಬಸ್ ನಲ್ಲಿ ಟಿಕೇಟ್ ಇಲ್ಲದೇ ಫ್ರಿಯಾಗಿ ಪ್ರಯಾಣಿಸಿ
ಕುಡ್ಲದ ಸಿಟಿ ಬಸ್‌ನಲ್ಲಿ ಪ್ರಯಾಣಿಸುವವರ ಗಮನಕ್ಕೆ ಸೆಪ್ಟೆಂಬರ್ ಒಂದರಿಂದ ಸಿಟಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಟಿಕೆಟ್ ನೀಡದೇ ಇದ್ದರೆ ನೀವು ಫ್ರಿಯಾಗಿ ಈ ಬಸ್ ನಲ್ಲಿ ಪ್ರಯಾಣ ಬೆಳೆಸಬಹುದು ಇಂತಹ ಹೊಸ ಯೋಜನೆಯನ್ನು ಮಂಗಳೂರು ಸಿಟಿ ಬಸ್ ಮಾಲೀಕರ ಸಂಘ ಹಮ್ಮಿಕೊಳ್ಳುತ್ತಿದೆ. ಕಂಡಕ್ಟರ್ ಟಿಕೇಟ್ ಪ್ರಯಾಣಿಕರಿಗೆ ನೀಡಬೇಕು ಎಂದು ಎಷ್ಟು ಬಾರಿ ಹೇಳಿದ್ರು ಸಂಬಂಧಪಟ್ಟ ಜನರು ಕೇಳಿಸದ ಪರಿಣಾಮವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ.
ಅಂದಹಾಗೆ ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ 27, ಸ್ಟೇಟ್‌ಬ್ಯಾಂಕ್- ಮಂಗಳಾದೇವಿಯ 5 ಹಾಗೂ ಸ್ಟೇಟ್ ಬ್ಯಾಂಕ್ ನಿಂದ ಉಳ್ಳಾಲ ಕಡೆ ಸಾಗುವ 13 ಬಸ್ ಗಳಲ್ಲಿ ಈ ಅವಕಾಶ ಸಿಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಕಂಡಕ್ಟರ್ ಗೆ ಬುದ್ದಿ ಕಲಿಸಬಹುದು ಎನ್ನುವುದು ಸಂಘದ ಹಿಂದಿರುವ ಉದ್ದೇಶ.
ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಎಲ್ಲೂ ಇಲ್ಲ!
ಇಡೀ ದೇಶದ ಲೆಕ್ಕಚಾರ ತೆಗೆದು ನೋಡಿದರೆ ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಯಾರಿಗೂ ಇಲ್ಲ.
ಒಂದು ಊರಿಗೆ ಅತೀ ಹೆಚ್ಚು ಹೆಸರು ಇರೋದು ಮಂಗಳೂರಿಗೆ ಮಾತ್ರವಂತೆ. ತುಳು ಭಾಷೆಯಲ್ಲಿ ‘ಕುಡ್ಲ’, ಕನ್ನಡದಲ್ಲಿ ‘ಮಂಗಳೂರು‘, ಇಂಗ್ಲೀಷ್‌ನಲ್ಲಿ ‘ಮ್ಯಂಗಳೂರು’, ಮಲಯಾಳಂನಲ್ಲಿ ‘ಮಂಗಳಾಪುರಂ’, ಹವ್ಯಕ ಭಾಷೆಯಲ್ಲಿ ‘ಕೊಡಿಯಾಲ’,ಕೊಂಕಣಿ ಭಾಷೆಯಲ್ಲಿ ‘ಕೊಡಿಯಲ್’, ಬ್ಯಾರಿ ಭಾಷೆಯಲ್ಲಿ ‘ಮೈಕಾಲ’, ಸಂಸ್ಕೃತದಲ್ಲಿ ‘ಮಂಜುರನ್’ ಹಾಗೂ ಉರ್ದು ಭಾಷೆಯಲ್ಲಿ ಕುಡಲ್. ಇದರ ಜತೆಗೆ ಜಲಾಲಾಬಾದ್ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ ಎನ್ನುವ ಇತಿಹಾಸ ಪುಟಗಳು ವಿವರಣೆ ನೀಡುತ್ತದೆ.
ಮಂಗಳೂರು ಹೆಸರಿನ ಹಿಂದಿನ ಆದಿಶಕ್ತಿ ಈ ದೇವತೆ !
ಮಂಗಳೂರು ಎನ್ನುವ ಹೆಸರಿನ ಹಿಂದೆ ಈ ಅಧಿದೇವತೆ ಯ ಶಕ್ತಿಯಿದೆ.
ಹೌದು. ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಮಂಗಳೂರಿನ ಮಧ್ಯಪ್ರದೇಶದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ.
ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎನ್ನುವುದು ಕುಡ್ಲದ ಇತಿಹಾಸ ಪುಟ ಹೇಳುತ್ತಿದೆ.