ಕಾರ್ನಾಡ್ ಸದಾಶಿವ ರಾವ್ ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವರಿವರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ. ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.
1936 ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬಯಿಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9 ರಂದು ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು.
ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು ಧರ್ಮರಾಜ ಅಂತ ಕರೆದಿದ್ದರು. ಅಂದಹಾಗೆ ಅವರ ನೆನಪಿಗಾಗಿ ಕುಡ್ಲದ ಕೆ.ಎಸ್.ರಾವ್ ರಸ್ತೆ ಅವರ ನೆನಪಿಗಾಗಿ ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳು, ಬ್ಯಾಂಕ್‌ಗಳು ಕಾರ‍್ಯಾಚರಿಸುತ್ತಿದೆ.
pics: Nandan Bhat
Tagged: Madras
ಕುಡ್ಲಕ್ಕೆ ಬಂತು ಫ್ರೆಶ್ ಫಿಶ್ ಮಾರಾಯ್ರೆ !
ಕುಡ್ಲದ ಮೀನು ಮಾರುಕಟ್ಟೆ ಗೆ ಕಳೆದ ನಾಲ್ಕೈದು ದಿನಗಳಿಂದ ತಾಜಾ ಮೀನುಗಳು ಬರುತ್ತಿದೆ. ಬಿಳಿ ಸಿಗಡಿ, ಅಡೆಮೀನ್, ಬೊಳ್ಳೆಂಜೀರ್ ಹೀಗೆ ಮೀನುಗಳ ಮೇಲೆ ಫ್ರೆಶ್ ಫಿಶ್ ಮೀನು ಮಾರುಕಟ್ಟೆ ಗೆ ದಾಂಗುಡಿ ಇಡುತ್ತಿದೆ.
ಮುಖ್ಯವಾಗಿ ರಾಣಿ ಬಲೆ ಹಾಗೂ ಪಟ್ಟೆಬಲೆಯ ನಾಡದೋಣಿಗಳು ಉತ್ತಮ ಮೀನುಗಾರಿಕೆ ಯನ್ನು ಮಾಡುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದ ಮದ್ರಾಸ್, ಓಮನ್ ಸೇರಿದಂತೆ ಫ್ರಿಜರ್ ಮೀನುಗಳ ನ್ನು ತಿಂದ ಕರಾವಳಿಯ ಮೀನು ಪ್ರಿಯರಿಗಂತೂ ಇದೊಂದು ಖುಷಿಯ ವಿಚಾರ.
ಕುಡ್ಲ ದಕ್ಕೆಯಲ್ಲಿ ಓಮನ್,ಮದ್ರಾಸ್ ದರ ಗಲಾಟೆ !
ಕುಡ್ಲದ ಮೀನುಗಾರಿಕೆ ದಕ್ಕೆಯಲ್ಲಿ ವಿಶಿಷ್ಟ ರೀತಿಯ ದರ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಇದರ ಪರಿಣಾಮ ಬೂತಾಯಿ ಮೀನು ಕೆಜಿ ಗೆ 80 ರ ಅಸುಪಾಸಿಗೆ ಗ್ರಾಹಕರಿಗೆ ಸಿಗುವಂತಹ ಭಾಗ್ಯ ಭಾನುವಾರ ಲಭ್ಯವಾಗಿದೆ.
ಕಾರಣ ಇಷ್ಟೇ ಮಂಗಳೂರಿನಲ್ಲಿ ಮೀನುಗಾರಿಕೆಗೆ ರಜೆ ಯಾವ ಬೋಟುಗಳು ಮೀನುಗಾರಿಕೆಗೆ ಇಳಿಯುತ್ತಿಲ್ಲ ಓಮನ್ ಹಾಗೂ ಮದ್ರಾಸ್ ಕಡೆಯಿಂದ ಬೂತಾಯಿ ಮೀನು ಸಾಕಷ್ಟು ಪ್ರಮಾಣದಲ್ಲಿ ಬರುವುದರಿಂದ ಬೂತಾಯಿ ದರ ಮೀನುಗಾರಿಕೆ ರಜೆ ಅವಧಿಯಲ್ಲಿ ಮೊದಲ ಬಾರಿಗೆ ರೇಟ್ ಕಡಿಮೆಯಾಗಿದೆ.