Tagged: kannur

ಹೀರೋಯಿನ್‌ಗಳಂತೆ ಮಿಂಚಿದ ಹಳೆಯ ಸ್ಕೂಟರ್

ಹಳೆಯ ಸ್ಕೂಟರ್‌ಗಳು ಬಣ್ಣ ಬಳಿದುಕೊಂಡು ಹೀರೋಯಿನ್‌ಗಳಂತೆ ಲಕಲಕವಾಗಿ ಹೊಳೆಯುತ್ತಾ ರಸ್ತೆಗೆ ಇಳಿದರೆ ನೋಡುವ ಕಣ್ಣುಗಳಿಗೆ ಹಬ್ಬವೇ ಸರಿ. ಇಂದಿನ ಮುಂದುವರಿದ ತಾಂತ್ರಿಕವಾಗಿ ಅಪ್‌ಗ್ರೇಡ್ ಟೂ ವೀಲರ್‌ಗಳ ಮುಂದೆ ಹಳೆಯ ಸ್ಕೂಟರ್‌ಗಳ ಓಡುವ ಖದರೇ ಬೇರೆ ಇಂತಹ ಸ್ಕೂಟರ್‌ಗಳ ಪ್ರದರ್ಶನ ಮಂಗಳೂರಿನ ಕುದ್ರೋಳಿಯ ಸಮೀಪದ ಮೈದಾನದಲ್ಲಿ ಭಾನುವಾರ ನಡೆಯಿತು.
ಮಂಗಳೂರು ಕ್ಲಾಸಿಕ್ ಸ್ಕೂಟರ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು. ಎಂದೋ ಗುಜರಿ ಅಂಗಡಿ ಸೇರಬೇಕಿದ್ದ 2 ಸ್ಟ್ರೋಕ್ ಸ್ಕೂಟರ್‌ಗಳೆಲ್ಲ ಹೊಸ ಲುಕ್‌ನೊಂದಿಗೆ ಅಲ್ಲಿ ಕಂಗೊಳಿಸುತ್ತಿದ್ದವು. ಬರೋಬ್ಬರಿ 70 ವರ್ಷಗಳಷ್ಟು ಹಳೆಯ, 2-3 ತಲೆಮಾರುಗಳನ್ನು ದಾಟಿ ಬಂದ 1960 ರ ದಶಕದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ನೋಡುಗರ ಆಕರ್ಷಣೆಗೆ ಕಾರಣವಾಯಿತು. ಮೂಲ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ, ಕೇವಲ ಹೊಸ ಬಣ್ಣ- ಟೈರ್‌ಗಳೊಂದಿಗೆ ಈ ಸ್ಕೂಟರ್‌ಗಳನ್ನು ಅವುಗಳ ಮಾಲೀಕರು ಕಾಪಿಟ್ಟುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 10,11 ರಾಜ್ಯಗಳನ್ನು ದಾಟಿ ಬಂದ ಸ್ಕೂಟರ್‌ಗಳಿಂದ ಹಿಡಿದು 2000 ಇಸವಿವರೆಗಿನ ಬಜಾಜ್ ಚೇತಕ್‌ವರೆಗೆ ಸುಮಾರು 80 ಕ್ಕೂ ಅಧಿಕ ಸ್ಕೂಟರ್‌ಗಳು ತಮ್ಮ ‘ದೇಹ ಸಿರಿ’ಯ ಪ್ರದರ್ಶನ ಮಾಡಿದವು. ನೂರಾರು ಮಂದಿ ಕುತೂಹಲದಿಂದ ಬಂದು ನೋಡಿ ಹಳೆ ಸ್ಕೂಟರ್‌ಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಅಜ್ಜನ ಕಾಲದ ಸ್ಕೂಟರ್‌ಗಳನ್ನು ನೋಡಿ ಮಕ್ಕಳು ರೋಮಾಂಚನಗೊಂಡರು.

ಕುಡ್ಲದಲ್ಲಿ ಸೊಳ್ಳೆ ಉತ್ಪಾದನೆ ಗೆ ಭರ್ಜರಿ ದಂಡ

ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರಪಾಲಿಕೆ ಅಧಿಕಾರಿಗಳು, ಶನಿವಾರ ಹಳೇ ಟಯರ್‍ಗಳಲ್ಲಿ ನೀರು ನಿಂತು ರೋಗಕ್ಕೆ ನೀಡುತ್ತಿದ್ದ ವ್ಯಕ್ತಿಗೆ ರೂ. 5000 ದಂಡ ವಿಧಿಸಿದೆ.
ಕಣ್ಣೂರಿನ ವ್ಯಕ್ತಿಯೊಬ್ಬರು ತನ್ನ ಆವರಣದಲ್ಲ ಹಳೆಯ ಟಯರ್‍ಗಳನ್ನು ಇಟ್ಟಿದ್ದು, ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ವ್ಯಕ್ತಿಗೆ ರೂ. 5000 ದಂಡ ಸ್ಥಳದಲ್ಲೇ ವಿಧಿಸಿ, ಎಚ್ಚರಿಕೆ ನೀಡಿದರು.