Tagged: Jasmine

ಮೋದಿಗಾಗಿ 500 ಚೆಂಡು ಮಲ್ಲಿಗೆ ಕೊಟ್ಟ ಮುಸ್ಲಿಂ ಹೂ ವ್ಯಾಪಾರಿ

ಕುಡ್ಲದಲ್ಲಿ ಶ್ರೀಮಂತ ಮಾತ್ರವಲ್ಲ ಸಾಮಾನ್ಯ ಬಡವ ಕೂಡ ಪ್ರಧಾನಿ ನರೇಂದ್ರ ಮೋದಿಯಾಗಬೇಕು ಎಂದು ಕನಸ್ಸು ಕಾಣುತ್ತಾನೆ ಎನ್ನುವ ಮಾತಿಗೆ ಮತ್ತಷ್ಟು ಉದಾಹರಣೆ ಕಾಣಸಿಗುತ್ತಿದೆ.

ಹೌದು. ಕುಡ್ಲದ ಸಿಟಿ ಸೆಂಟರ್ ಮುಂಭಾಗದಲ್ಲಿರುವ ಲಲಿತ್ ಮಹಲ್ ಹೋಟೆಲ್ ಪಕ್ಕದಲ್ಲಿ ಹೂ ಮಾರಾಟ ಮಾಡುವ ಪಕೀರಬ್ಬ ಬೇಸಿಕಲಿ ದೊಡ್ಡ ಶ್ರೀಮಂತ ರಲ್ಲ ಹೂ ವ್ಯಾಪಾರ ಮಾಡುತ್ತಾ ಬದುಕು ಕಟ್ಟುವ ಮನುಷ್ಯ ಆದರೆ ಮೋದಿ ಪ್ರಧಾನಿ ಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದಾಕ್ಷಣ ತಾನು ಕೂಡ ಸೇವೆ ಮಾಡಲು ಇಳಿದು ಬಿಡುತ್ತಾರೆ.

ಗುರುವಾರ ಸಂಜೆ ಯಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಬರೋಬರಿ 500 ಚೆಂಡು ಮಲ್ಲಿಗೆಯನ್ನು ಉಚಿತವಾಗಿ ಮಹಿಳೆಯರಿಗೆ ನೀಡುವ ಕೆಲಸ ಮಾಡಿದ್ದಾರೆ. ಈ ಸೇವೆಗೆ ಹೆಚ್ಚು ಕಡಿಮೆ 50 ಸಾವಿರ ದಷ್ಟು ಖರ್ಚು ತಗಲಬಹುದು ಮೋದಿ‌ ದೇಶದ ಉದ್ದಾರಕ್ಕೆ ಸಾಕಷ್ಟು ಮಾಡಿದ್ದಾರೆ ನಾನು ಕೊಂಚ ಸೇವೆ ಮಾಡಬೇಕು ಎನ್ನುವ ಮೂಲಕ ಪಕೀರಬ್ಬ ಅಭಿಮಾನಿ ತೋರಿಸುತ್ತಾರೆ. ಅಂದಹಾಗೆ ಇವರು ಬೆಳ್ತಂಗಡಿಯವರು ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಜಾನ್ ವೃತದಲ್ಲಿರವ ಪಕೀರಬ್ಬರಿಗೆ ಮೋದಿ ಮೇಲೆ ಅಪಾರ ನಂಬಿಕೆ.

ಮಂಗಳೂರು ಮಲ್ಲಿಗೆಗೆ ಮನಸೋಲದವರಿಲ್ಲ

ಮಲ್ಲಿಗೆ ತುಳುನಾಡಿನ ಮಣ್ಣಿಂದ ಮಿಂದೆದ್ದ ಸುಗಂಧವತಿ. ಇಲ್ಲಿ ಮಲ್ಲಿಗೆ ಇಲ್ಲದೆ ಯಾವುದೇ ಮಂಗಳ ಕಾರ್ಯ ನಡೆಯುವುದಿಲ್ಲ.
ಭೌಗೋಳಿಕ ಚಿಹ್ನೆಯ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆ ವಹಿವಾಟಿನಲ್ಲಿ ಮುಂಚೂಣಿಯಲ್ಲಿದ್ದರೆ, ಸಾಂಪ್ರದಾಯಿಕ ಹಿನ್ನೆಲೆ ಹಾಗೂ ಘಮಘಮಿಸುವ ಪರಿಮಳದಿಂದ ಮಂಗಳೂರು ಮಲ್ಲಿಗೆ ಇಂದಿಗೂ ತನ್ನದೇ ಆದ ವಿಶೇಷತೆ ಉಳಿಸಿಕೊಂಡಿದೆ.
ಮಂಗಳೂರು ಮಲ್ಲಿಗೆ ಉಡುಪಿ ಮಲ್ಲಿಗೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಮೊಗ್ಗಿನ ತುದಿ ಮೊನಚಾಗಿರುತ್ತದೆ. ಉಡುಪಿ ಮಲ್ಲಿಗೆ ಮೊಗ್ಗು ತುದಿ ಸ್ವಲ್ಪ ಮೊಂಡು.
ಮಧುಮಗಳ ಸಿಂಗಾರಕ್ಕೆ ಎರಡು ಚೆಂಡಾದರೂ ಮಂಗಳೂರು ಮಲ್ಲಿಗೆ ಬೇಕು ಎನ್ನುವ ನಂಬಿಕೆಯನ್ನು ಈ ಭಾಗದ ಹೆಚ್ಚಿನ ಜನರು ಬೆಳೆಸಿಕೊಂಡಿದ್ದಾರೆ. ಹಿಂದುಗಳ ಎಲ್ಲ ಮಂಗಳ ಕಾರ್ಯಕ್ರಮಗಳಿಗೆ ಈ ಹೂವು ಬೇಕೇಬೇಕು.
ಬ್ರಾಹ್ಮಣರು, ಬಂಟರು, ಜಿಎಸ್ಬಿ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.ಉಡುಪಿ ಮಲ್ಲಿಗೆ, ಶಂಕರಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಮಂಗಳೂರು ಮಲ್ಲಿಗೆ ಹೀಗೆ ವಿವಿಧ ಹೆಸರುಗಳ ಮಲ್ಲಿಗೆ ಕರಾವಳಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.