ಕುಡ್ಲದ ಸೋನಾಲ್ ಮೊಂತೆರೋ ತುಳು ಸಿನಿಮಾದ ಮೂಲಕ ಪರಿಚಯವಾಗಿ ಈಗ ಕನ್ನಡದಲ್ಲಿ ಬ್ಯುಸಿ ಇರುವ ನಟಿಮಣಿ.
ತುಳುವಿನ ನಿರ್ದೇಶಕ ಸೂರಜ್ ಶೆಟ್ಟಿ ನಿರ್ದೇಶನದ ಎಕ್ಕಸಕ ಹಾಗೂ ಪಿಲಿಬೈಲ್ ಯಮುನಕ್ಕ ಜತೆಗೆ ಜೈ ತುಳುನಾಡ್ ಸಿನಿಮಾದ ಮೂಲಕ ತುಳುವರಿಗೆ ಪರಿಚಯವಾದ ಸೋನಾಲ್ ಹಿಂದಿರುವ ಶಕ್ತಿ ಅವರ ಅಮ್ಮ ಲೀಟಾ ಮೊಂತೆರೋ.
ಬಣ್ಣದ ಬದುಕಿಗೆ ಅವರ ತಾಯಿ ನೀಡಿದ ಪ್ರೇರಣೆ, ಪ್ರೋತ್ಸಾಹ ಜತೆಗೆ ಸಹಕಾರದ ಮನೋಭಾವವೇ ಇಂದು ಸೋನಾಲ್ ತುಳು ಮಾತ್ರವಲ್ಲ ಕನ್ನಡದ ಸಿನಿಮಾ ಅಭಿಮಾನಿಗಳಿಗೂ ಪ್ರೀತಿಯ ಹುಡುಗಿಯಾಗಿದ್ದಾರೆ.