ಮಧುಮೇಹ ಅಥವಾ ಡಯಾಬೀಟಿಸ್ ನಮ್ಮ ಸುತ್ತಮುತ್ತಲಿನ ಹತ್ತು ಮಂದಿಯಲ್ಲಿ ಒಬ್ಬರಿಗೆ ಗ್ಯಾರಂಟಿ ಇರುತ್ತದೆ. ನಮ್ಮ ಜೀವನ ಶೈಲಿ, ಒತ್ತಡ ಸೇರಿದಂತೆ ಆಧುನಿಕ ಜಗತ್ತಿನ ವ್ಯಾಯಾಮ ರಹಿತ ಬದುಕು ಡಯಾಬೀಟಿಸ್‍ಗೆ ಕಾರಣವಾಗುತ್ತಿದೆ.
ಹಿಂದಿನ ಕಾಲದ ಆಹಾರ ಪದ್ದತಿಯ ಬದಲು ಹೊಸ ರೀತಿಯ ಆಹಾರ ಶೈಲಿಗೆ ವಿದ್ಯಾರ್ಥಿಗಳು ಒಗ್ಗಿಕೊಳ್ಳುತ್ತಿರುವ ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ಮಧುಮೇಹ ಮುತ್ತಿಕೊಳ್ಳುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ಭಾರತವನ್ನು ಮಧುಮೇಹ ಮುಕ್ತ ಭಾರತ ಎನ್ನುವ ಕನಸ್ಸಿನ ಮೂಲಕ ಜÁಗೃತಿಯ ಹೋರಾಟ, ಉಪನ್ಯಾಸ, ಚಿಕಿತ್ಸೆ ಎಲ್ಲದರಲ್ಲೂ ಡಾ.ಸತೀಶ ಶಂಕರ್ ದುಡಿಯುತ್ತಿz್ದÁರೆ.
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಹಾಗೂ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠದ ಮೂಲಕ ಡಾ.ಸತೀಶ್ ಕೆಲಸ ಮಾಡುತ್ತಿz್ದÁರೆ. ಆಯುರ್ವೇದ ಶಾಸ್ತ್ರ ದ ಮೂಲಕ ಡಯಾಬಿಟಿಸ್‍ಗೆ ವಿಶಿಷ್ಟ ಮದ್ದನ್ನು ಕೂಡ ಸಂಶೋಧನೆ ನಡೆಸಿz್ದÁರೆ. ಹೆಚ್ಚಿನ ಮಾಹಿತಿ ಹಾಗೂ ಶಾಲೆಯಲ್ಲಿ ಮಧುಮೇಹದ ಕುರಿತಾಗಿ ಉಪನ್ಯಾಸವನ್ನು ಕೇಳಬಯಸುವ ಮಂದಿ ಅವರನ್ನು ಸಂಪರ್ಕ ಮಾಡಬಹುದು 9482167168
Tagged: hospital
ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಕೂದಲು ದಾನ
ಮಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಮರುಗಿದ ನಗರದ ವಿದ್ಯಾರ್ಥಿನಿಯೊಬ್ಬರು ತನ್ನ ಕೇಶಯನ್ನೇ ದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಎ ಎಲ್‌ಲ್‌ಬಿ ಕಲಿಯುತ್ತಿರುವ ಪವಿತ್ರಾ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸುವುದಕ್ಕಾಗಿ ತನ್ನ ಕೂದಲು ದಾನ ಮಾಡಿದ್ದಾರೆ. ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರದ ಪವಿತ್ರಾ ವ್ಯಾಸಂಗಕ್ಕಾಗಿ ನಗರದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯದ ಚಿಕಿತ್ಸೆಗೆಂದು ಪವಿತ್ರಾ, ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.
ಅಲ್ಲಿ ವೈದ್ಯರಿಗೆ ಕಾಯುತ್ತಿದ್ದ ವೇಳೆ ಕೀಮೋಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ನಿಮ್ಮ ಕೂದಲು ಚೆನ್ನಾಗಿದೆ ಎಂದು ಮುಟ್ಟಿದ್ದಾರೆ. ಇದರಿಂದ ಪವಿತ್ರಾ ಅವರಿಗೆ ತುಂಬಾ ನೋವುಂಟಾಯಿತು, ಮಕ್ಕಳ ಮುಖದಲ್ಲಿದ್ದ ಅಸಹಾಯಕತೆಯ ನೋವಿನಿಂದ ಬೇಸರವಾದರೂ ಮಕ್ಕಳ ಮುಂದೆ ನಸುನಗುತ್ತಾ ವೈದ್ಯರನ್ನು ಭೇಟಿಯಾಗಿ ವಾಪಸ್ ಬಂದಿದ್ದರು.
ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಕೇಶದಾನ ಬಗ್ಗೆ ಚರ್ಚಿಸಿ ಕಳೆದ ವಾರ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದರು. ಕೂದಲು ಮಹಿಳೆಯರ ಸೌಂದರ್ಯ ಕ್ಕೆ ಮುಖ್ಯ ಹೌದು, ಆದರೆ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿರುವ ಖುಷಿ ಬೇರಿಲ್ಲ. ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂದು ಪವಿತ್ರಾ ಹೇಳುತ್ತಾರೆ.
ಆಸ್ಪತ್ರೆಗೆ ಹೋಗುವಾಗ ಜಾಗ್ರತೆ ಮಾರಾಯ್ರೆ !
ಮಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಜತೆಯಲ್ಲಿ ಆಸ್ಪತ್ರೆಗಳು ಕೂಡ ಬೇಕಾದಷ್ಟು ಹುಟ್ಟಿಕೊಳ್ಳುತ್ತಿದೆ. ವಿಶೇಷ ಎಂದರೆ ಕುಡ್ಲದ ಆಸ್ಪತ್ರೆಗಳಿಗೆ ರೋಗಿಗಳು ಬಂದಾಗ ಯಾವ ಚಿಕಿತ್ಸೆಗೆ ಬರುತ್ತಿದ್ದೇವೆ ಎನ್ನುವ ಅರಿವು ರೋಗಿಗಳಿಗೆ ಇದ್ದರೆ ಬಹಳ ಒಳ್ಳೆಯದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.
ಕಾಸರಗೋಡಿನ ಮಹಿಳೆಯೊಬ್ಬರು ಕಾಲುನೋವಿನ ಕಾರಣಕ್ಕೆ ನಗರದ ಖ್ಯಾತ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ತಪಾಸಣೆ ನಡೆಸಿದ ವೈದ್ಯರು ಅವರ ಬಲಕಾಲನ್ನು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡುತ್ತಾರೆ. ಅದರಂತೆ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗುತ್ತದೆ.
ಆದರೆ ಆಪರೇಷನ್ ಮಾಡಿ ಮರಳಿ ಬರುವಾಗ ಎಡಗಾಲಿಗೆ ಆಪರೇಷನ್ ಮಾಡಲಾಗಿತ್ತು. ಈ ಕಾರಣದಿಂದ ಮಂಗಳೂರಿನ ಖ್ಯಾತ ಆಸ್ಪತ್ರೆಯ ವೈದ್ಯರು ಎಡವಟ್ಟು ಮಾಡುವ ಮೂಲಕ ವೈದ್ಯ ಲೋಕದಲ್ಲೂ ಇಂತಹ ಘಟನೆಗಳು ನಡೆಯುತ್ತದೆ ಎನ್ನುವ ಮಾತು ಫ್ರೂವ್ ಆಗಿದೆ. ಮಾಡಿದ ತಪ್ಪಿಗೆ ಆಸ್ಪತ್ರೆಯವರು ಮಹಿಳೆಯ ಪೂರ್ಣ ಖರ್ಚು ವೆಚ್ಚವನ್ನು ಕೊಡುವ ಕೆಲಸಕ್ಕೆ ಮುಂದಾಗಿರುವ ಪರಿಣಾಮ ಪ್ರಕರಣ ರಾಜಿಯಲ್ಲಿ ಮುಗಿದಿದೆ.