ಮದ್ಮಲ್ ಎಂದರೆ ಮದುಮಗಳು ಎನ್ನುವ ಅರ್ಥ ತುಳು ಭಾಷೆಯಲ್ಲಿ ಹೇಳಲಾಗುತ್ತದೆ. ಇದು ಕುಡ್ಲದಲ್ಲಿ ಈ ಸೀಸನ್ ನಲ್ಲಿ ಕಾಣ ಸಿಗುವ ವಿಶಿಷ್ಟವಾದ ಮೀನು.
ಈಗ ಯಾವುದೇ ಹೋಟೆಲ್ ನಲ್ಲಿ ಫಿಶ್ ಪ್ರೈ ಕೇಳಿದ್ರೆ ಇದೇ ಮದ್ಮಲ್ ವಿಚಾರವನ್ನು ಹೇಳುತ್ತಾರೆ. ಕೊಂಚ ಸಿಹಿ ಜತೆಗೆ ಸುಂದರವಾದ ಮೀನು ಇದು ಅದಕ್ಕೂ ಮುಖ್ಯ ತುಳುವರು ಶೋಧನೆ ಮಾಡಿದ ಮೀನು ಎನ್ನುವ ಹೆಗ್ಗಳಿಕೆ ಜತೆಗಿದೆ.
Tagged: fishermen
ಕುಡ್ಲಕ್ಕೆ ಬಂತು ಫ್ರೆಶ್ ಫಿಶ್ ಮಾರಾಯ್ರೆ !
ಕುಡ್ಲದ ಮೀನು ಮಾರುಕಟ್ಟೆ ಗೆ ಕಳೆದ ನಾಲ್ಕೈದು ದಿನಗಳಿಂದ ತಾಜಾ ಮೀನುಗಳು ಬರುತ್ತಿದೆ. ಬಿಳಿ ಸಿಗಡಿ, ಅಡೆಮೀನ್, ಬೊಳ್ಳೆಂಜೀರ್ ಹೀಗೆ ಮೀನುಗಳ ಮೇಲೆ ಫ್ರೆಶ್ ಫಿಶ್ ಮೀನು ಮಾರುಕಟ್ಟೆ ಗೆ ದಾಂಗುಡಿ ಇಡುತ್ತಿದೆ.
ಮುಖ್ಯವಾಗಿ ರಾಣಿ ಬಲೆ ಹಾಗೂ ಪಟ್ಟೆಬಲೆಯ ನಾಡದೋಣಿಗಳು ಉತ್ತಮ ಮೀನುಗಾರಿಕೆ ಯನ್ನು ಮಾಡುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದ ಮದ್ರಾಸ್, ಓಮನ್ ಸೇರಿದಂತೆ ಫ್ರಿಜರ್ ಮೀನುಗಳ ನ್ನು ತಿಂದ ಕರಾವಳಿಯ ಮೀನು ಪ್ರಿಯರಿಗಂತೂ ಇದೊಂದು ಖುಷಿಯ ವಿಚಾರ.
ಕರಾವಳಿ ಮೀನುಗಾರರ ಹೆಸರು ಕೆಡಿಸಿದ ಕ್ಲಾತಿ!
ಕೆಲವು ತಿಂಗಳ ಹಿಂದೆ ಕೇರಳ ಸೇರಿದಂತೆ ನೆರೆಯ ರಾಜ್ಯಗಳಿಗೆ ಅಪ್ಪಳಿಸಿದ ಓಖಿ ಚಂಡಮಾರುತದ ಪ್ರಭಾವ ಕಡಿಮೆಯಾದರೂ ಕರಾವಳಿಯ ಮೀನುಗಾರರು ಮಾತ್ರ ಇನ್ನು ಕೂಡ ಅದರ ಪ್ರಭಾವದಿಂದ ಹೊರಬಂದಿಲ್ಲ.
ಈ ಚಂಡಮಾರುತದ ಬಳಿಕ ಕರಾವಳಿ ಗೆ ಹೊಸ ಮೀನೊಂದು ಎಂಟ್ರಿಪಡೆದುಕೊಂಡಿದೆ ಇದು ಬರೀ ಫಿಶ್ ಮಿಲ್ ಗೆ ಮಾತ್ರ ಸಾಗಬೇಕಾದ ಕ್ಲಾತಿ ಮೀನು ಅತಿಯಾದ ವಾಸನೆ ಇರುವ ಈ ಮೀನು ಕರಾವಳಿಯ ಮೀನುಗಾರರ ಬಲೆಗೆ ದಿನಕ್ಕೆ 60 ಟನ್ ಗಳ ಬೀಳುತ್ತಿದೆ. ಇದರ ಪರಿಣಾಮ ಇತರ ಮೀನು ರುಚಿ ಕಳೆದು ಕೊಳ್ಳುತ್ತಿಕೊಳ್ಳುತ್ತಿದೆ ಎನ್ನುವುಮೀನುಗಾರರ ವಾದ.


