ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶನಿವಾರ ನಡೆದ ಪದ್ಮಭೂಷಣ ಪುರಸ್ಕøತ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 75ನೇ ಜಯಂತ್ಯುತ್ಸವದ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ವಿಜಯ ಕರ್ನಾಟಕದ ಬೋಧಿವೃಕ್ಷದಲ್ಲಿ ಬರೆದ ಅಂಕಣ ಬರಹಗಳನ್ನು ಒಳಗೊಂಡ `ಚಿಂತನ ಗಂಗಾ’ ಕೃತಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಸ್ವಾಮೀಜಿಗಳು, ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿ, ಪತ್ರಕರ್ತ ರವಿ ಹೆಗಡೆ, ಶಾಸಕರಾದ ಪುಟ್ಟರಾಜು, ಸುರೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
Tagged: education
ಜನರಿಗೆ ಬೆಳಕು ನೀಡುವ ಚಿಂತನ ಗಂಗಾ
ಮಂಗಳೂರಿನ ಕಾವೂರು ಗಾಂಧಿನಗರದಲ್ಲಿರುವ ಬಿಜಿಎಸ್ ಶಾಖಾ ಮಠದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಅಂಕಣ ಬರಹಗಳ ಕೃತಿ `ಚಿಂತನ ಗಂಗಾ’ ಜ.18ರಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ಭೈರವೈಕ್ಯರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 75 ಅಮೃತ ಮಹೋತ್ಸವದ ಸಮಯದಲ್ಲಿ ಬಿಡುಗಡೆ ಕಾಣುತ್ತಿದೆ.
ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಈ ಅಂಕಣ ಬರಹಗಳು ಈಗಾಗಲೇ ಮುದ್ರಣ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗ ಕೃತಿ ರೂಪದಲ್ಲೂ ಕಾಣಿಸಿಕೊಂಡಿದೆ.
ಬಿಜಿಎಸ್‌ನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹೈಟೆಕ್ ಸವಲತ್ತು !
ಕಾವೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಬಹಳ ಮುಖ್ಯವಾದದ್ದು ಗುಣಮಟ್ಟದ ಶಿಕ್ಷಣ ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಬದುಕಿಗೆ ಸಂಬಂಧಪಟ್ಟಂತಹ ಹೈಟೆಕ್ ಸವಲತ್ತು.
ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಾನವೀಯ ಗುಣಗಳಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದಲ್ಲಿ ಬಹಳ ಎತ್ತರಕ್ಕೆ ಸಾಗಿದ ಉದಾಹರಣೆಗಳೇ ಜಾಸ್ತಿ.
ಹೆತ್ತವರಿಗೆ ಮಕ್ಕಳು ಅಮೂಲ್ಯವಾದ ಸಂಪತ್ತು ಎಂದು ಪರಿಗಣಿಸಿದರೆ ಇಂತಹ ಸಂಪತ್ತನ್ನು ಸಮಾಜದಲ್ಲಿ ಉತ್ತಮವಾಗಿ ಬೆಳೆಸುವ ಕೆಲಸವನ್ನು ಕಾವೂರಿನ ಬಿಜಿಎಸ್ ಸಂಸ್ಥೆ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ 0824 -248 4749
ಐಟಿ ಓದಿದವರು ಸಿಗ್ತಾರೆ ತೆಂಗಿನ ಕಾಯಿ ಕೀಳುವರಿಲ್ಲ !
ಮಂಗಳೂರು ಮಾತ್ರವಲ್ಲ ಇದು ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲರೂ ಹೇಳುವ ಮಾತು. ಐಟಿ, ಬಿಟಿ ಓದಿ ಬಂದವರು ಎಲ್ಲ ಕಡೆಯಲ್ಲೂ ಸಿಗ್ತಾರೆ ಮಾರಾಯ್ರೆ. ಈ ಕಾಯಿ ಕೀಳುವ ಮಂದಿಯಂತೂ ಸಿಗ್ತಾ ಇಲ್ಲ. ಸಿಕ್ಕರೂ ಕೂಡ ಒಳ್ಳೆಯ ಮೊತ್ತವನ್ನು ಕೀಳುತ್ತಾರೆ ಎನ್ನುವ ಮಾತು ಕಾಮನ್ ಆಗಿ ಸಿಗುತ್ತದೆ.
ಶೈಕ್ಷಣಿಕ ಬದುಕಿನ ಯಶಸ್ಸಿಗೆ ರೊಸಾರಿಯೋ ಬೆಸ್ಟ್
ರೊಸಾರಿಯೋ ಕಾಲೇಜು ವಿದ್ಯಾರ್ಥಿಗಳ ಎಲ್ಲ ದೃಷ್ಟಿಯಿಂದಲ್ಲೂ ಸಮರ್ಥವಾದ ಶಿಕ್ಷಣ ಸಂಸ್ಥೆ ಮುಖ್ಯವಾಗಿ ಜಿಲ್ಲೆಯ ಬಹಳ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕೊಂದು ಜಾಸ್ತಿ ಮಹತ್ವವಿದೆ.
ಇದರ ಜತೆಗೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ, ಅವರ ಫೀಸ್ ವಿಚಾರದಲ್ಲೂ ಸೆಮಿಸ್ಟರ್ ವೈಸ್ 5500 ರೂ ಮಾತ್ರ ಕಟ್ಟಿದರೆ ಸಾಕು. ಉತ್ತಮವಾದ ಗ್ರಂಥಾಲಯ ವ್ಯವಸ್ಥೆ, ಜಿಮ್, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಎಲ್ಲವೂ ಪೂರಕವಾಗಿದೆ.
ವಾಹನ ವಿಚಾರದಲ್ಲೂ ಇದು ಸ್ಟೇಟ್ ಬ್ಯಾಂಕ್‌ಗೆ ಬಹಳ ಹತ್ತಿರದ ಕಾಲೇಜು. ಉತ್ತಮ ಉಪನ್ಯಾಸಕರ ವರ್ಗ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನಿರಂತರವಾಗಿ ದುಡಿಯುವ ಪ್ರಿನ್ಸಿಪಾಲರು, ಒಂದೇ ಕ್ಯಾಂಪಸ್‌ನಲ್ಲಿ ಎಲ್ಲ ಶಿಕ್ಷಣ ನೀಡುವ ತಾಣ. ಒಂದೇ ಮಾತಿನಲ್ಲಿ ಕುಡ್ಲದ ಬೆಸ್ಟ್ ಕಾಲೇಜುಗಳಲ್ಲಿ ರೊಸಾರಿಯೋ ಫಸ್ಟ್.