ಕಳೆದ ಎರಡು ವಾರಗಳಿಂದ ನಿರಂತರವಾಗಿ ಗ್ರಾಹಕರಿಗೆ ಕಣ್ಣೀರು ತರಿಸಿದ ನೀರುಳ್ಳಿಯ ರೇಟ್ ನಿಧಾನವಾಗಿ ಇಳಿಮುಖವಾಗುತ್ತಾ ಸಾಗುತ್ತಿದೆ. ಎರಡು ವಾರಗಳಲ್ಲಿ 150 ರೂ. ದಾಖಲಿಸಿದ ರೇಟ್ ಈಗ 70ರಿಂದ 80 ರೂ.ಗೆ ಬಂದು ನಿಂತಿದೆ. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಎರಡು ವಾರಗಳಿಂದ ರೇಟ್ ಏರುಗತಿಯಲ್ಲಿಯೇ ಸಾಗುತ್ತಿತ್ತು.
ಆದರೆ ಸೋಮವಾರದಿಂದ ನಿಧಾನವಾಗಿ ನೀರುಳ್ಳಿಯ ದರ ಇಳಿಕೆಯ ಕಡೆಗೆ ಸಾಗಿದೆ. ಸೋಮವಾರ ಒಂದೇ ದಿನ 50 ರೂ. ಇಳಿಕೆಯಾದರೆ ಮತ್ತೆ ಉಳಿದ ದಿನಗಳಲ್ಲಿ ಸಾಧಾರಣವಾಗಿ 10 ರೂ. ನಂತೆ ಇಳಿಯುತ್ತಾ ಈಗ ಕೆಜಿ ನೀರುಳ್ಳಿಗೆ ಭರ್ತಿ 70ರಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಹಾಗೂ ಪುಣೆಯಿಂದ ನೀರುಳ್ಳಿ ಜಾಸ್ತಿಯಾಗಿ ಪೂರೈಕೆಯಾಗುತ್ತಿದ್ದಂತೆ ಇಲ್ಲಿ ದರ ಕುಸಿತ ಕಾಣುತ್ತಿದೆ. ಮುಂದಿನ ವಾರ ಮತ್ತಷ್ಟೂ ದರ ಕುಸಿತವಾಗುವ ನಿರೀಕ್ಷೆಯಿದೆ.
Tagged: down
ಕುಡ್ಲ ದಕ್ಕೆಯಲ್ಲಿ ಓಮನ್,ಮದ್ರಾಸ್ ದರ ಗಲಾಟೆ !
ಕುಡ್ಲದ ಮೀನುಗಾರಿಕೆ ದಕ್ಕೆಯಲ್ಲಿ ವಿಶಿಷ್ಟ ರೀತಿಯ ದರ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಇದರ ಪರಿಣಾಮ ಬೂತಾಯಿ ಮೀನು ಕೆಜಿ ಗೆ 80 ರ ಅಸುಪಾಸಿಗೆ ಗ್ರಾಹಕರಿಗೆ ಸಿಗುವಂತಹ ಭಾಗ್ಯ ಭಾನುವಾರ ಲಭ್ಯವಾಗಿದೆ.
ಕಾರಣ ಇಷ್ಟೇ ಮಂಗಳೂರಿನಲ್ಲಿ ಮೀನುಗಾರಿಕೆಗೆ ರಜೆ ಯಾವ ಬೋಟುಗಳು ಮೀನುಗಾರಿಕೆಗೆ ಇಳಿಯುತ್ತಿಲ್ಲ ಓಮನ್ ಹಾಗೂ ಮದ್ರಾಸ್ ಕಡೆಯಿಂದ ಬೂತಾಯಿ ಮೀನು ಸಾಕಷ್ಟು ಪ್ರಮಾಣದಲ್ಲಿ ಬರುವುದರಿಂದ ಬೂತಾಯಿ ದರ ಮೀನುಗಾರಿಕೆ ರಜೆ ಅವಧಿಯಲ್ಲಿ ಮೊದಲ ಬಾರಿಗೆ ರೇಟ್ ಕಡಿಮೆಯಾಗಿದೆ.