Tagged: College

ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಕೂದಲು ದಾನ

ಮಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಮರುಗಿದ ನಗರದ ವಿದ್ಯಾರ್ಥಿನಿಯೊಬ್ಬರು ತನ್ನ ಕೇಶಯನ್ನೇ ದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಎ ಎಲ್‌ಲ್‌ಬಿ ಕಲಿಯುತ್ತಿರುವ ಪವಿತ್ರಾ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸುವುದಕ್ಕಾಗಿ ತನ್ನ ಕೂದಲು ದಾನ ಮಾಡಿದ್ದಾರೆ. ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರದ ಪವಿತ್ರಾ ವ್ಯಾಸಂಗಕ್ಕಾಗಿ ನಗರದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯದ ಚಿಕಿತ್ಸೆಗೆಂದು ಪವಿತ್ರಾ, ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.

ಅಲ್ಲಿ ವೈದ್ಯರಿಗೆ ಕಾಯುತ್ತಿದ್ದ ವೇಳೆ ಕೀಮೋಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ನಿಮ್ಮ ಕೂದಲು ಚೆನ್ನಾಗಿದೆ ಎಂದು ಮುಟ್ಟಿದ್ದಾರೆ. ಇದರಿಂದ ಪವಿತ್ರಾ ಅವರಿಗೆ ತುಂಬಾ ನೋವುಂಟಾಯಿತು, ಮಕ್ಕಳ ಮುಖದಲ್ಲಿದ್ದ ಅಸಹಾಯಕತೆಯ ನೋವಿನಿಂದ ಬೇಸರವಾದರೂ ಮಕ್ಕಳ ಮುಂದೆ ನಸುನಗುತ್ತಾ ವೈದ್ಯರನ್ನು ಭೇಟಿಯಾಗಿ ವಾಪಸ್ ಬಂದಿದ್ದರು.

ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಕೇಶದಾನ ಬಗ್ಗೆ ಚರ್ಚಿಸಿ ಕಳೆದ ವಾರ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದರು. ಕೂದಲು ಮಹಿಳೆಯರ ಸೌಂದರ್ಯ ಕ್ಕೆ ಮುಖ್ಯ ಹೌದು, ಆದರೆ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿರುವ ಖುಷಿ ಬೇರಿಲ್ಲ. ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂದು ಪವಿತ್ರಾ ಹೇಳುತ್ತಾರೆ.

ದ.ಕದಲ್ಲಿ ಇನ್ನು ಆ.13ಕ್ಕೆ ಶಾಲಾ ಕಾಲೇಜು ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.10ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ. ಇದರ ಜತೆಯಲ್ಲಿ ಆ.11 ಭಾನುವಾರ ಹಾಗೂ ಆ.12ರಂದು ಬಕ್ರೀದ್ ಹಬ್ಬದ ಗೌಜಿ ಇರುವುದರಿಂದ ಎಲ್ಲವೂ ಮಕ್ಕಳಿಗೆ ರಜೆಯಾಗಿ ಪರಿವರ್ತನೆಯಾಗಿದೆ ಈ ಮೂಲಕ ಆ.13ರ ಬಳಿಕ ಸರಿಯಾಗಿ ಮಳೆ ಬಿಟ್ಟರೆ ಶಾಲಾ ಕಾಲೇಜು ಆರಂಭವಾಗುವ ನಿರೀಕ್ಷೆಯಿದೆ.

ಕುಡ್ಲದ ಮಳೆಗೆ‌ ಮೂರನೇ ದಿನನೂ ರಜೆ !

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.9ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ.

ಬಿಜಿಎಸ್ ವಿದ್ಯಾರ್ಥಿಗಳೆಂದರೆ ಶಿಸ್ತಿನ ಸಿಪಾಯಿಗಳು

ಮಂಗಳೂರಿನ ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಇಡೀ ಮಂಗಳೂರಿನ ಕಾಲೇಜುಗಳಲ್ಲಿ ವಿಭಿನ್ನ ಎನ್ನುವ ಮಾತಿದೆ. ಇದಕ್ಕೆ ಈ ಬಾರಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ವೈಸ್ ಪ್ರಿನ್ಸಿಪಾಲ್ ರೊನಾಲ್ಡ್ ಪಿಂಟೋ ಅವರು ಮತ್ತೆ ಸಾಕ್ಷಿ ನೀಡಿದ್ದಾರೆ.
ಬಿಜಿಎಸ್ ಪದವಿ ಕಾಲೇಜಿನಲ್ಲಿ ಅವರು ಸೋಮವಾರ ಬಿಕಾಂ ವಿದ್ಯಾರ್ಥಿಗಳಿಗೆ ಕೇರಿಯರ್ ಗೈಡೆನ್ಸ್ ಕುರಿತು ಉಪನ್ಯಾಸ ನೀಡಿದ್ದರು. ಈ ಸಮಯದಲ್ಲಿ ಅವರ ಉಪನ್ಯಾಸ ವನ್ನು ಬಹಳ ಶಿಸ್ತಿನಿಂದ ಕೇಳಿದರು ಇಂತಹ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯೇ ಇಲ್ಲ ಎಂದು ಬಿಟ್ಟರು. ಬರೀ ಮಾತಿಗೆ ಮಾತ್ರ ಈ ಮಾತು ಬಂದಿಲ್ಲ ತಮ್ಮ ಭಾವನೆಗಳನ್ನು ಕೂಡ ಫೇಸ್ ಬುಕ್ ನಲ್ಲಿ ಹಾಕಿ ಸಂಭ್ರಮ ಪಟ್ಟಿದ್ದಾರೆ.

ಮಂಗಳೂರು ವಿವಿ ಪದವಿ ಕಾಲೇಜುಗಳ ಆರಂಭ

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳು ಜೂ.20 ರಿಂದ ಆರಂಭ ವಾಗಲಿದೆ. ವಿಶೇಷವಾಗಿ ಈ ಬಾರಿ ಸರಕಾರಿ ಪದವಿ ಕಾಲೇಜು ಗಳಲ್ಲಿ ಇನ್ನೂ ಕೂಡ ಅತಿಥಿ ಉಪನ್ಯಾಸ ಕರ ನೇಮಕ ನಡೆಯದ ಕಾರಣ ಸರಕಾರಿ ಕಾಲೇಜಿನಲ್ಲಿ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಕೊಂಚ ತರಗತಿಗಳು ನಡೆಯದ ಸ್ಥಿತಿಯಲ್ಲಿ ಮುಂದೆ ಸಾಗಲಿದೆ ಉಳಿದಂತೆ ಹೊಸ ವಿದ್ಯಾರ್ಥಿಗಳು ಪದವಿ ತರಗತಿಯನ್ನು ಖುಷಿಯಿಂದ ಸ್ವಾಗತಿಸುತ್ತಾರೆ.