Tagged: Coconut

ಡೆಂಗೆಗೆ ಅಡುಗೆ ಮನೆಯಲ್ಲಿದೆ ಮದ್ದು !

ಕುಡ್ಲದಲ್ಲಿ ಡೆಂಗೆಯಿಂದ ಈಗಾಗಲೇ ಐವರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ ಆದರೆ ಬಹಳಷ್ಟು ಮಂದಿಗೆ ಈ ರೋಗ ಬರುವುದಕ್ಕಿಂತ ಮೊದಲೇ ಎಚ್ಚರವಾದರೆ ಇದೆಲ್ಲವೂ ನಡೆಯುತ್ತಿರಲಿಲ್ಲ.

ಹೌದು. ಡೆಂಗೆಯ ಸೊಳ್ಳೆ ಯಿಂದ ಪಾರಾಗಲು ಅಡುಗೆಮನೆಯಲ್ಲಿ ಇರುವ ತೆಂಗಿನ ಎಣ್ಣೆ, ಕಹಿಬೇವಿನ ಆಯಿಲ್, ನೀಮ್ ಗ್ರಾಸ್ ಆಯಿಲ್ ಸೇರಿದಂತೆ ಮಾರ್ಕೆಟ್ ನಲ್ಲಿ ಸಿಗುವ ಕ್ರೀಮ್ ಗಳನ್ನು ಕೈ ಕಾಲುಗಳಿಗೆ ಉಜ್ಜಿಕೊಂಡು ನಂತರ ಹೊರಗಡೆ ಹೋದರೆ ಯಾವುದೇ ಸೊಳ್ಳೆ ಕೂಡ ಹತ್ತಿರಕ್ಕೆ ಸುಳಿಯಲಾರದು.

ಕುಡ್ಲದ ಹುಡುಗಿ ನಮ ಜಿಗ್ಗ ಫಿಯೇಟ್ !

ಕುಡ್ಲ ಸಿಟಿಯ ಹುಡುಗಿ ಮಿಹಿಕಾ ಪ್ರಿಮಿಯರ್ ಪದ್ಮಿನಿ ಫಿಯೇಟ್ ವನ್ನು ಜಿಗ್ಗ ಮಾಡಿದ್ದಾರೆ. ತುಳುವಿನ ನಮ ಜಿಗ ಎಂದರೆ ತುಂಬಾನೇ ಫೋಶ್ ಎನ್ನುವ ಅರ್ಥ.

ಹೌದು. ಮಿಹಿಕಾ ಬೇಸಿಕಲಿ ಕುಡ್ಲದ ಗೋರಿ ಗುಡ್ಡೆ ಯ ಹುಡುಗಿ ನಗರದ ಮಹಾಲಸಾದಲ್ಲಿ ವಿಶುವಲ್ ಆರ್ಟ್ ನಲ್ಲಿ ಕಲಿತು ಈಗ ಮಾಸ್ಟರ್ ಆಫ್ ವೇದಿಕ್ ಸೈನ್ಸ್ ಪದವಿಯನ್ನು ಗುಜರಾತ್ ನ ಮಹರ್ಷಿ ವೇದವ್ಯಾಸ್ ವಿವಿಯಿಂದ ಕಲಿಯುತ್ತಿದ್ದಾರೆ.

ಅಂದಹಾಗೆ ನಮ ಜಿಗ್ಗ ಎನ್ನುವುದು ಫಿಯೇಟ್ ಕಾರಿಗೆ ಮಿಹಿಕಾ ನೀಡಿದ ಹೆಸರು ಮಿಹಿಕಾ ಅಣ್ಣನಿಗೆ ಅವರ ಅಂಕಲ್ ಉಡುಗೊರೆಯಾಗಿ ಬಹಳ ವರ್ಷಗಳ ಹಿಂದೆ ನೀಡಿದ್ದರು.

ಈ ಬಳಿಕ ಅಣ್ಣ ಮದುವೆಯಾದ ಬಳಿಕ ಈ ಕಾರು ಮನೆಯ ಮೂಲೆ ಸೇರಿತು ಎಲ್ಲರೂ ಅದನ್ನು ಗುಜರಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದರು. ಆದರೆ ಮಿಹಿಕಾಳಿಗೆ ಇದು ಇಷ್ಟ ಇರಲಿಲ್ಲ. ಅಣ್ಣನ ಪ್ರೀತಿಯ ಕಾರು ಮನೆಯಲ್ಲೇ ಇರಲಿ ಎಂದುಕೊಂಡು ತಾನೇ ತುಳುನಾಡಿನ ಯಕ್ಷಗಾನ, ಪಿಲಿವೇಶ,ಮೀನುಗಾರಿಕೆ, ತೆಂಗಿನ ಮರ ಹೀಗೆ ಹತ್ತಾರು ವಿಚಾರಗಳನ್ನು ಚಿತ್ರಿಸುವ ಮೂಲಕ ಹಳೆಯ ಫಿಯೇಟ್ ವನ್ನು ನಮ ಜಿಗ್ಗ ಆಗಿ ಬದಲಾಯಿಸಿದ್ದಾರೆ.

ಅಂದಹಾಗೆ ಮಿಹಿಕಾ ಎಂದರೆ ಅಸ್ಸಾಮೀ ಹೆಸರು. ಇದರ ಅರ್ಥ ಮುಂಜಾನೆಯ ಇಬ್ಬನಿಯಲ್ಲಿರುವ ನೀರಿನ ಬಿಂದುವಂತೆ ಮಿಹಿಕಾ ಅಜ್ಜಿ ಅದನ್ನು ಇಟ್ಟದ್ದು ಮಿಹಿಕಾ ಹೆಸರು ಮಾತ್ರ ಅಸ್ಸಾಮೀ ಆದರೆ ಮಿಹಿಕಾ ಪಕ್ಕ ತುಳುನಾಡಿನ ಪೊಣ್ಣು.

ಐಟಿ ಓದಿದವರು ಸಿಗ್ತಾರೆ ತೆಂಗಿನ ಕಾಯಿ ಕೀಳುವರಿಲ್ಲ !

ಮಂಗಳೂರು ಮಾತ್ರವಲ್ಲ ಇದು ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲರೂ ಹೇಳುವ ಮಾತು. ಐಟಿ, ಬಿಟಿ ಓದಿ ಬಂದವರು ಎಲ್ಲ ಕಡೆಯಲ್ಲೂ ಸಿಗ್ತಾರೆ ಮಾರಾಯ್ರೆ. ಈ ಕಾಯಿ ಕೀಳುವ ಮಂದಿಯಂತೂ ಸಿಗ್ತಾ ಇಲ್ಲ. ಸಿಕ್ಕರೂ ಕೂಡ ಒಳ್ಳೆಯ ಮೊತ್ತವನ್ನು ಕೀಳುತ್ತಾರೆ ಎನ್ನುವ ಮಾತು ಕಾಮನ್ ಆಗಿ ಸಿಗುತ್ತದೆ.