Tagged: Coastal districts

ಮಹಾಲಿಂಗೇಶ್ವರ ದೇವರಿಗೆ ಪ್ರೀತಿ, ಭಕ್ತಿ ತೋರಿಸುವ ಕಂಬಳ ಕೋಣಗಳು

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳದ ವಿಶೇಷತೆ ಎಂದರೆ ಕಂಬಳದ ಕೆರೆಗೆ ಇಳಿಯುವ ಮೊದಲು ಕಂಬಳದ ಕೋಣಗಳು ದೇವಸ್ಥಾನದ ಮುಂಭಾಗದಲ್ಲಿ ತಮ್ಮ ಪ್ರೀತಿ, ಭಕ್ತಿ ವಿಶ್ವಾಸವನ್ನು ತೋರಿಸುತ್ತದೆ.

ಕಳೆದ 27 ವರ್ಷಗಳಿಂದ ಇಲ್ಲಿ ಕೋಟಿ ಚೆನ್ನಯ ಕಂಬಳ ನಡೆಯುತ್ತಿದೆ. ಕರಾವಳಿ ಕಂಬಳದಲ್ಲಿಯೇ ಅತೀ ಹೆಚ್ಚು ಜನ ಸೇರುವ ಕಂಬಳ ಎಂದೇ ಈ ಕಂಬಳವನ್ನು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇವರ ಗದ್ದೆಯಲ್ಲಿ ನಡೆಯುವ ಕಂಬಳದಲ್ಲಿ ಹೆಚ್ಚು ಕಡಿಮೆ 150ಕ್ಕೂ ಅಧಿಕ ಕೋಣದ ಜೋಡಿಗಳು ಕಾಣಿಸಿಕೊಳ್ಳುತ್ತದೆ.

ಕರಾವಳಿಯ ನಾಗರಾಧನೆ ವಿಶ್ವಕ್ಕೆ ಮಾದರಿ

ಇಡೀ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಕೂಡ ಕರಾವಳಿಯಲ್ಲಿರುವಷ್ಟು ನಾಗನ ಆರಾಧಿಸುವ ಜನ ಬೇರೆ ಎಲ್ಲೂ ಕಾಣ ಸಿಗೋದಿಲ್ಲ.
ಇಡೀ ವಿಶ್ವದ ಜನವೇ ನಾಗನ ನಿಜವಾದ ಆರಾಧನೆ ಮಾಡಬೇಕಾದರೆ ಕರಾವಳಿಗೆ ಬರಲೇಬೇಕು. ಇಲ್ಲಿನ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ, ಕುಡುಪು ದೇವಸ್ಥಾನ ಹೀಗೆ ಉಡುಪಿ, ಕಾಸರಗೋಡಿನಲ್ಲಿ ಇಂತಹ ನಾಗನ ಆರಾಧನೆ ಸಿಮೀತವಾದ ದೇವಸ್ಥಾನಗಳು ಬೇಕಾದಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತದೆ.
ನಾಗಮಂಡಲ, ಡಕ್ಕೆಬಲಿ, ಸರ್ಪಂಕಳ ಹಾಗೂ ಕಾಡ್ಯನಾಟ ಎಂಬ ಆಚರಣೆಗಳು ನಾಗಾರಾಧನೆಯ ವೈವಿಧ್ಯತೆಯನ್ನು ಪರಿಚಯಿಸುತ್ತದೆ ಎನ್ನುವುದು ವಿಶೇಷ.