ಕುಡ್ಲದ ಫಸ್ಟ್ ಜೈವಿಕ ಇಂಧನದ ಸಿಟಿ ಬಸ್ ! ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಈಗಾಗಲೇ ಜೈವಿಕ ಇಂಧನದ ಬಸ್‌ಗಳು ಓಡಾಡುತ್ತಿದೆ. ಆದರೆ ಮೊದಲ ಬಾರಿಗೆ ಮಂಗಳೂರಿನ ಸಿಟಿ ಬಸ್‌ನಲ್ಲಿ ಜೈವಿಕ ಇಂಧನದ ಬಳಕೆಯ ಮೂಲಕ ಮಾಲಿನ್ಯತೆ, ಇಂಧನ ಉಳಿಕೆ ಹಾಗೂ ಹಣದ ಉಳಿತಾಯಕ್ಕೂ ಇದು ಸಹಕಾರಿಯಾಗಲಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್- ಮಂಗಳಾದೇವಿ ಕಡೆಗೆ ಓಡುವ ಸಿಟಿ ಬಸ್‌ನಲ್ಲಿ ಶೇ.೮೦ ಡಿಸೇಲ್ ಜತೆಗೆ ಶೇ.೨೦ ಜೈವಿಕ ಈಂಧನ ಬಳಕೆ ಮಾಡಲಾಗುತ್ತಿದೆ. ಮುಂದೆ ಇದರ ಪ್ರಮಾಣ ಜಾಸ್ತಿಯಾಗಲಿದೆ ಎನ್ನುವುದು ಮಂಗಳೂರು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳುತ್ತಾರೆ. ಜೈವಿಕ ಇಂಧನಗಳೆಂದರೆ ಜೈವಿಕ ಎಥೆನಾಲ ಹಾಗೂ ಬಯೋ ಡೀಸೆಲ. ಎಥೆನಾಲ್‌ನ್ನು ಪೆಟ್ರೋಲ್ ನೊಂದಿಗೆ ಬೆರೆಸಿದರೆ, ಬಯೋ ಡೀಸೆಲ್‌ನ್ನು ಡೀಸೆಲ್‌ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಎಥೆನಾಲ್ ವಾಹನ ಇಂಧನಕ್ಕೆ ಪೂರಕವಾಗಿ ಬಳಸಬಹುದಾದ ಇಂಧನವಾದರೆ, ಬಯೋ ಡೀಸೆಲ ಪೆಟ್ರೋಲಿಯಂಗೆ ಪರ್ಯಾಯವಾಗಿ ಬಳಸಬಹುದಾದ ಇಂಧನ. ಬಯೋ ಎಥೆನಾಲ ಯುಎಸ್‌ಎ ಮತ್ತು ಬ್ರೆಜಿಲ್‌ನಲ್ಲಿ ಹೆಚ್ಚು ಬಳಕೆಯಾಗುತ್ತದೆ. ಸಕ್ಕರೆ ಅಂಶವಿರುವ ಸಸ್ಯೋತ್ಪನ್ನ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಜೋಳ, ಬೀಟ್‌ರೂಟ್, ಮೆಕ್ಕೆ ಜೋಳ, ತಾಳೆ ಮೊದಲಾದವುಗಳಿಂದ ಎಥೆನಾಲ್ ಉತ್ಪಾದನೆ ಮಾಡಬಹುದಾಗಿದೆ. ನಗರದ ಸಿಟಿ ಬಸ್‌ಗಳಿಗೆ ಉಪಯೋಗಿಸುವ ಬಯೋ ಡೀಸೆಲ್ ಹೋಟೆಲ್ ಗಳಲ್ಲಿ ಬಳಕೆ ಮಾಡಿದ ಅಡುಗೆ ಅನಿಲದಿಂದ ತಯಾರಿಸಲಾಗುತ್ತಿದೆ. ನಿಟ್ಟೆಯ ಎನ್‌ಎಂಎಎಂಐಟಿ ಸಂಸ್ಥೆಯು ಬಿಆರ್‌ಐಡಿಸಿ ವಿಭಾಗದಲ್ಲಿ ಬಯೋ ಡೀಸೆಲ್ ತಯಾರಿಸುತ್ತಿದೆ. ಈ ಯುನಿಟ್‌ನಲ್ಲಿ ತಿಂಗಳಿಗೆ 600 ರಿಂದ 700 ಲೀ. ಬಯೋ ಡೀಸೆಲ್ ತಯಾರಿಸಲಾಗುತ್ತಿದೆ.
Tagged: citybus
ಕುಡ್ಲದ ಸಿಟಿ ಬಸ್ ನಲ್ಲಿ ಟಿಕೇಟ್ ಇಲ್ಲದೇ ಫ್ರಿಯಾಗಿ ಪ್ರಯಾಣಿಸಿ
ಕುಡ್ಲದ ಸಿಟಿ ಬಸ್‌ನಲ್ಲಿ ಪ್ರಯಾಣಿಸುವವರ ಗಮನಕ್ಕೆ ಸೆಪ್ಟೆಂಬರ್ ಒಂದರಿಂದ ಸಿಟಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಟಿಕೆಟ್ ನೀಡದೇ ಇದ್ದರೆ ನೀವು ಫ್ರಿಯಾಗಿ ಈ ಬಸ್ ನಲ್ಲಿ ಪ್ರಯಾಣ ಬೆಳೆಸಬಹುದು ಇಂತಹ ಹೊಸ ಯೋಜನೆಯನ್ನು ಮಂಗಳೂರು ಸಿಟಿ ಬಸ್ ಮಾಲೀಕರ ಸಂಘ ಹಮ್ಮಿಕೊಳ್ಳುತ್ತಿದೆ. ಕಂಡಕ್ಟರ್ ಟಿಕೇಟ್ ಪ್ರಯಾಣಿಕರಿಗೆ ನೀಡಬೇಕು ಎಂದು ಎಷ್ಟು ಬಾರಿ ಹೇಳಿದ್ರು ಸಂಬಂಧಪಟ್ಟ ಜನರು ಕೇಳಿಸದ ಪರಿಣಾಮವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ.
ಅಂದಹಾಗೆ ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ 27, ಸ್ಟೇಟ್‌ಬ್ಯಾಂಕ್- ಮಂಗಳಾದೇವಿಯ 5 ಹಾಗೂ ಸ್ಟೇಟ್ ಬ್ಯಾಂಕ್ ನಿಂದ ಉಳ್ಳಾಲ ಕಡೆ ಸಾಗುವ 13 ಬಸ್ ಗಳಲ್ಲಿ ಈ ಅವಕಾಶ ಸಿಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಕಂಡಕ್ಟರ್ ಗೆ ಬುದ್ದಿ ಕಲಿಸಬಹುದು ಎನ್ನುವುದು ಸಂಘದ ಹಿಂದಿರುವ ಉದ್ದೇಶ.

