ಮಂಗಳೂರಿನ ಕದ್ರಿ ಉದ್ಯಾನವನಕ್ಕೆ ಹೋಗುವ ಮಂದಿಯ ಗಮನಕ್ಕೆ ಇರಲಿ. ಈಗ ಪಾರ್ಕ್‌ಗೊಂದು ವಿಶೇಷವಾದ ಗಡಿಯಾರ ಬಂದಿದೆ. ಎಸ್‌ಎಸ್ 316 ಗುಣಮಟ್ಟದ ಸ್ಟೀಲ್‌ನಿಂದ ಈ ಗಡಿಯಾರ ಹಾಗೂ ಗೋಪುರವನ್ನು ನಿರ್ಮಾಣ ಮಾಡಲಾಗಿದೆ.
ಗಡಿಯಾರದ ಗೋಪುರ 21 ಅಡಿ ಎತ್ತರವಿದೆ. ಈ ಗೋಪುರ ತುಕ್ಕು ನಿರೋಧಕವಿದೆ. ಮಳೆ, ಗಾಳಿ, ಬಿಸಿಲು ಯಾವುದಕ್ಕೂ ಈ ಗೋಪುರ ಏನೂ ಆಗೋದಿಲ್ಲ. ಇದನ್ನು ಎಚ್‌ಎಂಟಿ ಕಂಪನಿ ನಿರ್ಮಾಣ ಮಾಡಿದೆ ಎನ್ನುವುದು ವಿಶೇಷ.
Tagged: city news
ಕುಡ್ಲದ ಮಲ್ಲಿಗೆ ಮಕ್ಕಳಿಗೆ ವಿದ್ಯೆ ಕೊಟ್ಟಿತು!
ಸರಕಾರಿ ಶಾಲೆಗಳಲ್ಲಿ ಸರಕಾರ ನೀಡಿದ ಶಿಕ್ಷಕರ ಸಂಖ್ಯೆ ಸಾಲದಾದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾಭಿವೃದ್ಧಿ ಸಮಿತಿ ಗೌರವ ಶಿಕ್ಷಕರನ್ನು ನೇಮಿಸುತ್ತದೆ. ಆದರೆ ಹೀಗೆ ನೇಮಕ ಮಾಡುವ ಗೌರವ ಶಿಕ್ಷಕರಿಗೆ ವೇತನ ನೀಡಲು ಪರದಾಡುವಂತಹ ಪರಿಸ್ಥಿತಿ ಇದೆ. ಇದಕ್ಕೆ ಭಿನ್ನವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಶಾಲೆ ಮಲ್ಲಿಗೆ ಬೆಳೆದು ಶಿಕ್ಷಕಿಯರ ವೇತನ ಭರಿಸುತ್ತಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯ ಒಳಗೆ ವಿದ್ಯಾಭ್ಯಾಸ ನಡೆಯುತ್ತಿದ್ದರೆ ಹೊರಗೆ ಮಲ್ಲಿಗೆ ಗಿಡಗಳ ಕಂಪು ಶಾಲೆಯನ್ನು ಅಲಂಕರಿಸಿದೆ. ಈ ಮಲ್ಲಿಗೆ ಗಿಡ ನೆಟ್ಟದ್ದು ಶಾಲೆಯ ಅಲಂಕಾರಕ್ಕೆ ಅಲ್ಲ. ಈ ಶಾಲೆಯ ಗೌರವ ಶಿಕ್ಷಕಿಯರಿಗೆ ನೀಡುವ ವೇತನ ಭರಿಸಲು ಎನ್ನುವುದು ವಿಶೇಷ.
ಇಲ್ಲಿ ಇರುವ ಮಲ್ಲಿಗೆ ಗಿಡಗಳಿಂದ ದಿನಕ್ಕೆ ಒಂದು ಅಟ್ಟೆ ಮಲ್ಲಿಗೆ ಹೂಗಳು ಸಿಗುತ್ತದೆ . ಮಲ್ಲಿಗೆ ಹೂಗಳನ್ನು ಮುಂಜಾನೆ ಶಾಲೆ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳು ಶಿಕ್ಷಕರು ಕೊಯ್ದಿಟ್ಟರೆ ಶಾಲೆಯ ಸಿಬ್ಬಂದಿಯೊಬ್ಬರು ಅದನ್ನು ಪೋಣಿಸುತ್ತಾರೆ. ಹೀಗೆ ಮಲ್ಲಿಗೆ ಗಿಡಗಳಿಂದ ಸಿಗುವ ಹೂವನ್ನು ಹೂವಿನ ಅಂಗಡಿಗೆ ನೀಡುವ ಮೂಲಕ ವರುಷಕ್ಕೆ 40ರಿಂದ 50 ಸಾವಿರದವರೆಗೆ ಆದಾಯ ಬರುತ್ತದೆ. ಈ ಆದಾಯದಲ್ಲಿ ಮೂರು ಗೌರವ ಶಿಕ್ಷಕರ ಪೈಕಿ ಪೂರ್ವ ಶಿಕ್ಷಕಿಗೆ ವೇತನ ನೀಡಲು ಸಾಕಾಗುತ್ತದೆ. ಉಳಿದ ಶಿಕ್ಷಕರ ವೇತನಕ್ಕೆ ಬೇರೆ ಮೂಲಗಳನ್ನು ಅವಳ ಮೀಸಲಾಗುತ್ತದೆ ಎನ್ನುತ್ತಾರೆ ಓಜಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಅವರು.
ಶಾಲೆಯ ಇತರ ಶಿಕ್ಷಕರಿಗೆ ನೀಡುವ ವೇತನದ ಆದಾಯಕ್ಕಾಗಿ ಇನ್ನಷ್ಟು ಮಲ್ಲಿಗೆ ಗಿಡಗಳನ್ನು ನೀಡಬಹುದಾದರೂ ಅದರ ನಿರ್ವಹಣೆ ಕಷ್ಟ. ಆದುದರಿಂದ ಇತರ ಮೂಲದ ಆದಾಯವನ್ನು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾ.
ಈ ಶಾಲೆಯಲ್ಲಿ ಸರಕಾರದ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇಬ್ಬರು ಶಿಕ್ಷಕರು ಸಾಲದು ಎಂದು ಮೂವರು ಗೌರವ ಶಿಕ್ಷಕರನ್ನು ನೇಮಿಸಿ ಅದಕ್ಕೆ ಬೇಕಾದ ಆದಾಯವನ್ನು ಶಾಲೆಯಲ್ಲಿ ಮಲ್ಲಿಗೆ ಗಿಡಗಳನ್ನು ನೆಡುವ ಮೂಲಕ ಮಾಡಿರುವ ಪ್ರಯತ್ನ ಶ್ಲಾಘನೀಯವಾದದ್ದು
ಮೋದಿಗಾಗಿ 500 ಚೆಂಡು ಮಲ್ಲಿಗೆ ಕೊಟ್ಟ ಮುಸ್ಲಿಂ ಹೂ ವ್ಯಾಪಾರಿ
ಕುಡ್ಲದಲ್ಲಿ ಶ್ರೀಮಂತ ಮಾತ್ರವಲ್ಲ ಸಾಮಾನ್ಯ ಬಡವ ಕೂಡ ಪ್ರಧಾನಿ ನರೇಂದ್ರ ಮೋದಿಯಾಗಬೇಕು ಎಂದು ಕನಸ್ಸು ಕಾಣುತ್ತಾನೆ ಎನ್ನುವ ಮಾತಿಗೆ ಮತ್ತಷ್ಟು ಉದಾಹರಣೆ ಕಾಣಸಿಗುತ್ತಿದೆ.
ಹೌದು. ಕುಡ್ಲದ ಸಿಟಿ ಸೆಂಟರ್ ಮುಂಭಾಗದಲ್ಲಿರುವ ಲಲಿತ್ ಮಹಲ್ ಹೋಟೆಲ್ ಪಕ್ಕದಲ್ಲಿ ಹೂ ಮಾರಾಟ ಮಾಡುವ ಪಕೀರಬ್ಬ ಬೇಸಿಕಲಿ ದೊಡ್ಡ ಶ್ರೀಮಂತ ರಲ್ಲ ಹೂ ವ್ಯಾಪಾರ ಮಾಡುತ್ತಾ ಬದುಕು ಕಟ್ಟುವ ಮನುಷ್ಯ ಆದರೆ ಮೋದಿ ಪ್ರಧಾನಿ ಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದಾಕ್ಷಣ ತಾನು ಕೂಡ ಸೇವೆ ಮಾಡಲು ಇಳಿದು ಬಿಡುತ್ತಾರೆ.
ಗುರುವಾರ ಸಂಜೆ ಯಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಬರೋಬರಿ 500 ಚೆಂಡು ಮಲ್ಲಿಗೆಯನ್ನು ಉಚಿತವಾಗಿ ಮಹಿಳೆಯರಿಗೆ ನೀಡುವ ಕೆಲಸ ಮಾಡಿದ್ದಾರೆ. ಈ ಸೇವೆಗೆ ಹೆಚ್ಚು ಕಡಿಮೆ 50 ಸಾವಿರ ದಷ್ಟು ಖರ್ಚು ತಗಲಬಹುದು ಮೋದಿ ದೇಶದ ಉದ್ದಾರಕ್ಕೆ ಸಾಕಷ್ಟು ಮಾಡಿದ್ದಾರೆ ನಾನು ಕೊಂಚ ಸೇವೆ ಮಾಡಬೇಕು ಎನ್ನುವ ಮೂಲಕ ಪಕೀರಬ್ಬ ಅಭಿಮಾನಿ ತೋರಿಸುತ್ತಾರೆ. ಅಂದಹಾಗೆ ಇವರು ಬೆಳ್ತಂಗಡಿಯವರು ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಜಾನ್ ವೃತದಲ್ಲಿರವ ಪಕೀರಬ್ಬರಿಗೆ ಮೋದಿ ಮೇಲೆ ಅಪಾರ ನಂಬಿಕೆ.
ಕುಡ್ಲದವರಿಗೆ ಮಾತ್ರ ಗೊತ್ತು ಎಂಕುನ ಕತೆ !
ತುಳುನಾಡಿನ ಪ್ರತಿಯೊಬ್ಬನಲ್ಲಿಯೂ ಕೇಳಿ ನೋಡಿ. ಎಂಕು ಯಾಕೆ ಪಣಂಬೂರಿಗೆ ಹೋದ ಅರ್ಥಾತ್ ಎಂಕು ಪಣಂಬೂರು ಹೋದ ಕತೆಯನ್ನು ಪೂರ್ತಿಯಾಗಿ ಕೇಳಬೇಕಾದರೆ ಕುಡ್ಲದ ವ್ಯಕ್ತಿಗಳನ್ನು ಹಿಡಿದು ಕೇಳಿ ಎಂಕು ನ ಪೂರ್ತಿ ಕತೆ ಹೊರಬರುತ್ತದೆ.
ಕುಡ್ಲದ ಮಂದಿ ಜಾಸ್ತಿಯಾಗಿ ಈ ಪದವನ್ನು ಪದೇ ಪದೇ ಪ್ರಯೋಗ ಮಾಡುತ್ತಾರೆ. ಯಾಕೆ ಅಂತಾ ಅವರಲ್ಲಿ ಕೇಳಿ ತಿಳಿದುಕೊಳ್ಳಿ.
ಶಾಸಕರ ತಂದೆಯ ಸರಳತೆಗೆ ಎಲ್ಲರೂ ಫಿದಾ !
ಬಿಳಿ ಶರ್ಟ್ ತೊಟ್ಟು, ಲುಂಗಿಯನ್ನು ಮಡಚಿ ಮೊಣಕಾಲಗುಂಟ ಕಟ್ಟಿಕೊಂಡು, ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ವಯೋವೃದ್ಧರೊಬ್ಬರು ಕೆಲದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರ ಫೋಟೋ ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಇಷ್ಟಕ್ಕೂ ಅವರು ಯಾರು?
ಬೆಳ್ತಂಗಡಿ ಶಾಸಕ , ಬಿಜೆಪಿ ನಾಯಕ ಹರೀಶ್ ಪೂಂಜಾತಂದೆ ಇವರು. ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಮುತ್ತಣ್ಣಪೂಂಜಾ, 74 ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಮಗ ಶಾಸಕನಾದರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳದೆ ಹಿಂದಿನಂತೆ ಸರಳತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಮುತ್ತಣ್ಣ ಅವರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಹಿಂದೆ ಬೀಡಿ ತಯಾರಿಕಾ ಘಟಕವನ್ನು ಹೊಂದಿದ್ದೆವು. ಆಗ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದೆ. ಡೈರಿಗೆ ಹಾಲು ಹಾಕಿ ಬರಲು ಇತ್ತೀಚಿನವರೆಗೆ ಸೈಕಲ್ ಮೇಲೆ ಹೋಗುತ್ತಿದ್ದೆ. ಕೆಲ ದಿನಗಳಿಂದ ನೆರೆಮನೆಯವರು ಸ್ಕೂಟಿಯಲ್ಲಿ ಡ್ರಾಫ್ ಕೊಡುತ್ತಾರೆ ಎನ್ನುತ್ತಾರೆ ಮುತ್ತಣ್ಣ.