ಕರಾವಳಿ ಭಾಗದಲ್ಲಿ ಉರಿ ಬಿಸಿಲು ಏರುತ್ತಿದ್ದು, ನದಿಗಳಲ್ಲಿನ ನೀರು ವಾಡಿಕೆಗಿಂತ ಮೊದಲೇ ಬತ್ತುತ್ತಿದೆ. ಕುಡಿಯಲು ನೀರಿಲ್ಲದೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ. ಹೀಗಿರುವಾಗ, ಮಂಗಳೂರಿನ ಪ್ರಾಣಿ ಪ್ರೇಮಿ ತೌಸಿಫ್ ಅಹಮ್ಮದ್ ಅವರು ತನ್ನ ಸ್ವಂತ ಖರ್ಚಿನಲ್ಲಿ ಸಿಮೆಂಟ್ ಮಡಕೆಗಳನ್ನು ಖರೀದಿ ಮಾಡಿ ಪ್ರಾಣಿ, ಪಕ್ಷಿಗಳಿಗೆಂದು ಅದರಲ್ಲಿ ನೀರು ತುಂಬಿಸಿ ನಗರದ ಅಲ್ಲಲ್ಲಿ ಇಡುವ ಪ್ರಯತ್ನಕ್ಕೆ ಮುಂದಾಗಿz್ದÁರೆ.
ಈ ಹೊಸ ಯೋಜನೆಗೆ ಪ್ರಾಜೆಕ್ಟï ಜಲ್ ಎಂದು ಹೆಸರಿಟ್ಟಿz್ದÁರೆ. ಈಗಾಗಲೇ 100 ಮಡಕೆಗಳು ತಯಾರಾಗುತ್ತಿದ್ದು, ಇವು ಹಳದಿ, ಹಸುರು ಮತ್ತು ಕೆಂಪು ಬಣ್ಣದಲ್ಲಿರಲಿವೆ. ಮುಂದಿನ ಎರಡು ವಾರದಲ್ಲಿ ನಗರದ ಅಲ್ಲಲ್ಲಿಗೆ ಮಡಕೆಗಳ ಸರಬರಾಜು ಪ್ರಕ್ರಿಯೆ ಆರಂಭವಾಗಲಿದೆ.
ಮುಖ್ಯವಾಗಿ ನಗರದ ಅಂಗಡಿಗಳ ಬದಿಗಳಲ್ಲಿ, ಮನೆಗಳ ಟೆರೇಸ್‍ನಲ್ಲಿ ಈ ಮಡಕೆ ಇಡಲಾಗುತ್ತದೆ. ಸಾರ್ವಜನಿಕರು ಈ ಮಡಕೆಗೆ ನೀರು ಹಾಕುವಂತೆ ಕೇಳಿಕೊಳ್ಳಲಾಗುತ್ತದೆ. ಇದರಿಂದ ಪಕ್ಷಿಗಳು, ದನ, ಬೀದಿ ನಾಯಿ ಸಹಿತ ಪ್ರಾಣಿಗಳು ಬಾಯಾರಿದಾಗ ನೀರು ಕುಡಿಯಲು ಸಾಧ್ಯ. ನೀರು ಮಡಕೆಯಲ್ಲಿರುವದರಿಂದ ಶುದ್ಧವಾಗಿರುತ್ತದೆ.
Tagged: birds
ಸಿಟಿಯಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಿದ ಹುಡುಗ
ನಗರ ಬೆಳೆಯುತ್ತಾ ಸಾಗುತ್ತಿದ್ದಂತೆ ಪಕ್ಷಿ,ಪ್ರಾಣಿಗಳ ಸಂತತಿ ಇಳಿಮುಖವಾಗುತ್ತಿರುವ ದೃಶ್ಯಗಳು ದಿನನಿತ್ಯನೂ ನಗರವಾಸಿಗಳು ಗಮನಕ್ಕೆ ಬಂದಿರಬಹುದು. ಬೆಳಗ್ಗೆ ಎದ್ದಾಗ ಹಕ್ಕಿಗಳ ಕಲರವ ಕೂಡ ಕಡಿಮೆಯಾಗುತ್ತಿದೆ. ಇಂತಹ ಹತ್ತಾರು ದೃಶ್ಯಗಳನ್ನು ನೋಡಿದ ಕುಡ್ಲ ಸಿಟಿಯ ಹುಡುಗ ತೌಸಿಫ್ ಅಹಮ್ಮದ್ ಅವರು ಪೈಪ್‌ಗಳ ಮೂಲಕ ಗೂಡು ಕಟ್ಟಿ ಪಕ್ಷಿಗಳ ಸಂತತಿ ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಂಗಳೂರು ಅನಿಮಲ್ ಕೇರ್ ಟ್ರಸ್ಟ್‌ನ ಸಕ್ರೀಯ ಸದಸ್ಯ ತೌಸಿಫ್ ಅಹಮ್ಮದ್ ಕುಡ್ಲ ಸಿಟಿಯ ಪಕ್ಷಿಗಳ ಮೇಲೆ ವಿಶೇಷವಾದ ಕಾಳಜಿ ಬೆಳೆಸಿಕೊಂಡಿದ್ದಾರೆ. ತೌಸಿಫ್ ಹೇಳುವಂತೆ ನಗರ ಪ್ರದೇಶದಲ್ಲಿ ಪಕ್ಷಿಗಳಿಗೆ ನೆಮ್ಮದಿಯಿಂದ ಗೂಡು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ.
ನಗರದ ಕಾಂಕ್ರೀಟ್ ಬದುಕಿನಿಂದಾಗಿ ಹಕ್ಕಿಗಳು ಎಸಿ ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಬಾಕ್ಸ್‌ಗಳ ನಡುವೆ ಗೂಡು ಕಟ್ಟಿಕೊಂಡು ಬಿಡುತ್ತದೆ. ಈ ಕಾರಣದಿಂದ ಹಕ್ಕಿಗಳು ಸಾಯುವ ಘಟನೆಗಳು ಜಾಸ್ತಿಯಾಗುತ್ತಿದೆ. ಎಲೆಕ್ಟ್ರಾನಿಕ್ ಶಾಕ್‌ನಿಂದಾಗಿ ತಾಯಿ ಹಕ್ಕಿ ಮೃತಪಟ್ಟಿದೆ ಮರಿಗಳು ತಾವು ದಯವಿಟ್ಟು ಕೊಂಡೋಗಿ ಬದುಕು ಕೊಡಿ ಎನ್ನುವ ಮನವಿಗಳೇ ಜಾಸ್ತಿಯಾಗಿ ಬರುತ್ತಿದೆಯಂತೆ.
ಇದಕ್ಕಾಗಿ 20 ಅಡಿ ಉದ್ದದ ಪಿವಿಸಿ ಪೈಪ್‌ವನ್ನು 2.5ಅಡಿ ಉದ್ದಕ್ಕೆ ಕತ್ತರಿಸಿಕೊಂಡು ಎರಡು ಬದಿಗೂ ಕ್ಯಾಪ್ ಹಾಕಿಕೊಂಡು ಮುಚ್ಚಲಾಗುತ್ತದೆ. ಈ ಬಳಿಕ 2.5 ಅಡಿ ಉದ್ದದ ಪೈಪ್‌ಗೆ ಮೂರು ರಂಧ್ರಗಳನ್ನು ಕೊರೆದು ನಂತರ ಅದನ್ನು ಮನೆಯ ಯಾವುದೇ ಭಾಗದಲ್ಲಿ ಇಟ್ಟರೆ ಸಾಕು. ಹಕ್ಕಿಗಳು ಬಂದು ಅಲ್ಲಿ ಗೂಡು ಕಟ್ಟುತ್ತದೆ ಎನ್ನುತ್ತಾರೆ ತೌಸಿಫ್.
ಸಾಕು ಪ್ರಾಣಿಗಳಿಂದ ವಿಶೇಷ ಮಕ್ಕಳಿಗೆ ಭಿನ್ನ ಟ್ರೀಟ್‌ಮೆಂಟ್
ಸಾಕು ಪ್ರಾಣಿಗಳಾದ ಕುದುರೆ, ನಾಯಿ, ಬೆಕ್ಕುಗಳ ಸಹಾಯದಿಂದ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡುವಂಥ ಅನಿಮಲ್ ಅಸಿಸ್ಟೆಡ್ ಥೆರಪಿ ಎಂಬ ಹೊಸ ಪರಿಕಲ್ಪನೆಯೊಂದು ಮಂಗಳೂರಿನಲ್ಲಿ ಮೂಡಿಬರುತ್ತಿದೆ.
ವಿದೇಶ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಇಂತಹ ಚಿಕಿತ್ಸಾ ವಿಧಾನ ಇತ್ತು. ದೇಶದ ನಾನಾ ಕಡೆಯಲ್ಲಿ ಇದು ನಿಧಾನವಾಗಿ ಮೊಳಕೆಯೊಡೆಯುತ್ತಿದೆ. ಆದ್ರೆ ಮಂಗಳೂರಿನಲ್ಲಿ ಈಗ ತಲೆ ಎತ್ತುತ್ತಿರುವ ಚಿಕಿತ್ಸಾ ವಿಧಾನ.
ಈ ಮೂಲಕ ವಿಶೇಷ ಮಕ್ಕಳು ಮಾತ್ರವಲ್ಲ, ಜನಸಮಾನ್ಯರು ಕೂಡಾ ಪ್ರಾಣಿಗಳ ಒಡನಾಟ ಇಟ್ಟುಕೊಂಡು ಬದುಕಿದರೆ, ಶಕ್ತಿ ಸಾಮರ್ಥ್ಯ ಹೆಚ್ಚುವ ಜತೆಗೆ ಭಾವನಾತ್ಮಕ ಸಂಬಂಧಗಳು ವೃದ್ಧಿಯಾಗುತ್ತವೆ ಎನ್ನುವುದು ವೈದ್ಯಲೋಕ ಹೇಳುವ ಮಾತು.