ಇವರು ಬೇರೆ ಯಾರು ಅಲ್ಲ. ಬೆಳ್ತಂಗಡಿಯ ತಹಸೀಲ್ದಾರ್ ಗಣಪತಿ ಶಾಸ್ತ್ರಿ. ಇತ್ತೀಚಿಗೆ ಬಂದ ನೆರೆಯಿಂದಾಗಿ ಹಾನಿಗೊಳಗಾದದಂತಹ ಪ್ರದೇಶದಲ್ಲಿ ನೆರೆ ಪರಿಹಾರದ ಕಾರ್ಯದಲ್ಲಿ ನಿರತರಾಗಿರುವ ಬೆಳ್ತಂಗಡಿಯ ತಹಶೀಲ್ದಾರರು ಜನಸಾಮಾನ್ಯರಂತೆ ದಿನನಿತ್ಯದ ವಸ್ತುಗಳನ್ನು ನೆರೆ ಪೀಡಿತ ಪ್ರದೇಶಕ್ಕೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಇಂದು ಸೋಮಾರಿತನ ತೋರಿಸುವ ಅಧಿಕಾರಿಗಳಿಗೊಂದು ಪಾಠ.
Tagged: belthangady
ಕುಡ್ಲದ ಹುಡುಗನ ಬಿಸಿನೀರಿನಲ್ಲಿ ಕರಗುವ ಪ್ಲಾಸ್ಟಿಕ್
ಪ್ಲಾಸ್ಟಿಕ್ ಎಂದಾದರೂ ಬಿಸಿನೀರಿನಲ್ಲಿ ಕರಗುತ್ತಾ….ಎಲ್ಲಾದರೂ ಕರಗಿದರು ಅದನ್ನು ನೀರಿನಂತೆ ಕುಡಿಯಬಹುದಾ…? ಈ ಎರಡು ಪ್ರಶ್ನೆಗಳನ್ನು ಕೇಳುವ ಮಂದಿಗೆ ಮಂಡೆ ಸರಿಯಿಲ್ಲ ಎಂದು ನೀವು ಭಾವಿಸಿಕೊಂಡರೆ ಅದು ನಿಮ್ಮ ತಪ್ಪು ಅಭಿಪ್ರಾಯ.
ಹೌದು. ಕುಡ್ಲ ಬಟ್ ಬೇಸಿಕಲಿ ಬೆಳ್ತಂಗಡಿ ಯ ಬಳ್ಳಂಜದ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಅವರ ಎನ್ವೀ ಗ್ರೀನ್ ಎನ್ನುವ ಪ್ಲಾಸ್ಟಿಕ್ ಬಿಸಿ ನೀರಿನಲ್ಲಿ ಕರಗುತ್ತೆ ಜತೆಗೆ ಅದನ್ನುಕುಡಿದರೂ ಏನೂ ಆಗೋಲ್ಲ. ಕಾರಣ ಇದು ತರಕಾರಿ ತ್ಯಾಜ್ಯ ದಿಂದ ಮಾಡಿದ ಪ್ಲಾಸ್ಟಿಕ್. ಇತರ ಪ್ಲಾಸ್ಟಿಕ್ ಗೆ ಹೋಲಿಕೆ ಮಾಡಿದರೆ ರೇಟು ಮಾತ್ರ ಜಾಸ್ತಿ ಆದರೆ ಪರಿಸರಕ್ಕೆ ಈ ಪ್ಲಾಸ್ಟಿಕ್ ಪೂರಕವಾಗಿದೆ. ಮಂಗಳೂರಿನ ಮೀನು ಮಾರಾಟದ ಮಹಿಳೆಯೊಬ್ಬರು ನೀಡಿದ ಅಭಿಪ್ರಾಯ ಈಗ ಈ ಪ್ಲಾಸ್ಟಿಕ್ ರೂಪುಗೊಳ್ಳಲು ಕಾರಣವಾಯಿತು ಎನ್ನುವುದು ಅಶ್ವಥ್ ಅವರ ಮಾತು.
ಶಾಸಕರ ತಂದೆಯ ಸರಳತೆಗೆ ಎಲ್ಲರೂ ಫಿದಾ !
ಬಿಳಿ ಶರ್ಟ್ ತೊಟ್ಟು, ಲುಂಗಿಯನ್ನು ಮಡಚಿ ಮೊಣಕಾಲಗುಂಟ ಕಟ್ಟಿಕೊಂಡು, ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ವಯೋವೃದ್ಧರೊಬ್ಬರು ಕೆಲದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರ ಫೋಟೋ ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಇಷ್ಟಕ್ಕೂ ಅವರು ಯಾರು?
ಬೆಳ್ತಂಗಡಿ ಶಾಸಕ , ಬಿಜೆಪಿ ನಾಯಕ ಹರೀಶ್ ಪೂಂಜಾತಂದೆ ಇವರು. ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಮುತ್ತಣ್ಣಪೂಂಜಾ, 74 ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಮಗ ಶಾಸಕನಾದರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳದೆ ಹಿಂದಿನಂತೆ ಸರಳತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಮುತ್ತಣ್ಣ ಅವರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಹಿಂದೆ ಬೀಡಿ ತಯಾರಿಕಾ ಘಟಕವನ್ನು ಹೊಂದಿದ್ದೆವು. ಆಗ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದೆ. ಡೈರಿಗೆ ಹಾಲು ಹಾಕಿ ಬರಲು ಇತ್ತೀಚಿನವರೆಗೆ ಸೈಕಲ್ ಮೇಲೆ ಹೋಗುತ್ತಿದ್ದೆ. ಕೆಲ ದಿನಗಳಿಂದ ನೆರೆಮನೆಯವರು ಸ್ಕೂಟಿಯಲ್ಲಿ ಡ್ರಾಫ್ ಕೊಡುತ್ತಾರೆ ಎನ್ನುತ್ತಾರೆ ಮುತ್ತಣ್ಣ.


