ಪ್ಲಾಸ್ಟಿಕ್ ಬಿಟ್ಟು ಬಾಳೆಲೆಗೆ ಅವಕಾಶ ಕೊಡಿ ಎನ್ನುವ ಕುಡ್ಲ ಸಿಟಿಯ ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಖ್ಯವಾಗಿ ಮಂಗಳೂರಿನ ರವಿಚಂದ್ರ ಎನ್ನುವ ವರು ಬಾಳೆಲೆ ಹಾಗೂ ಅಡಕೆ ಹಾಳೆಯ ಮೂಲಕ ಏನೆಲ್ಲ ಪರಿಸರಪೂರಕವಾದ ವಸ್ತುಗಳನ್ನುಪ್ಲಾಸ್ಟಿಕ್ ಗೆ ಪರ್ಯಾಯ ವಾಗಿ ಬಳಸಬಹುದು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಇದರ ಜತೆಯಲ್ಲಿ ಹಳೆಯ ರದ್ದಿ ಪೇಪರ್ ನಿಂದಲೂ ಬ್ಯಾಗ್ ತಯಾರಿಸುವ ಕುರಿತು ಮಂಗಳೂರಿನ ಸಂತೋಷ್ ಪೂಜಾರಿ ಅವರು ಪ್ರಯೋಗ ಮಾಡಿ ಕಳುಹಿಸಿದ್ದಾರೆ. ಮಂಗಳೂರು ಮಾತ್ರವಲ್ಲ ಇಡೀ ದೇಶದ ಜನತೆ ಪ್ಲಾಸ್ಟಿಕ್ ನಿಂದ ದೂರ ಓಡುತ್ತಿದ್ದಾರೆ. ಪರ್ಯಾಯ ವಸ್ತುಗಳ ಕಡೆಗೆ ಮನಸ್ಸು ಮಾಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಮುಂದಿನ ನಮ್ಮ ಮಕ್ಕಳ ಬದುಕಿಗೆ ಒಳ್ಳೆಯ ಪರಿಸರ ಬಿಟ್ಟು ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕುಡ್ಲಸಿಟಿಯ ಅಭಿಯಾನಕ್ಕೆ ಕೈಜೋಡಿಸಿ..
Tagged: banana
ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಬಾಳೆಲೆ ಬೆಂಬಲಿಸಿ
ಕುಡ್ಲ ಮಾತ್ರವಲ್ಲ ಮೆಟ್ರೋ ಸಿಟಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿಮೀರಿ ನಡೆಯುತ್ತದೆ ಅದನ್ನು ನಿಯಂತ್ರಣ ಮಾಡುವುದೇ ದೊಡ್ಡ ಕಿರಿಕಿರಿ. ನಗರದ ಜನರು ಮಾಲ್ ಸಂಸ್ಕೃತಿಯ ಅಡಿಯಲ್ಲಿ ಇರುವುದರಿಂದ ಮಾಲ್ ಗಳ ಲ್ಲಿ ಪ್ಲಾಸ್ಟಿಕ್ ಬದಲು ಬಾಳೆಲೆ ಬಳಸುವ ವಿಚಾರದಲ್ಲಿ ಗ್ರಾಹಕರೇ ಮಾಲ್ ನ ಮುಖ್ಯಸ್ಥ ರಿಗೆ ಫೀಡ್ ಬ್ಯಾಕ್ ನೀಡುವ ಕೆಲಸ ಮಾಡಬಹುದು. ಇದರಿಂದ ಕೊಂಚ ಮಟ್ಟಿ ನ ಪ್ಲಾಸ್ಟಿಕ್ ನಿಯಂತ್ರಣ ಕ್ಕೆ ಕೊಡುಗೆ ನೀಡಬಹುದು ಜತೆಗೆ ರೈತನಿಗೂ ಆದಾಯ ಮಾಡುವ ಕೆಲಸವಿದು.

