Tagged: artist

ರಸ್ತೆ ಸರಿಪಡಿಸಲು ಮೂನ್‌ವಾಕ್ ಮಾಡಿದಳು ಕುಡ್ಲದ ಹುಡುಗಿ

ಮಂಗಳೂರು: ಬೆಂಗಳೂರಿನಲ್ಲಿ ಬಾದಲ್ ನಂಜುಂಡಸ್ವಾಮಿ ಎಂಬ ಕಲಾವಿದ ಗಗನ ಯಾತ್ರಿಯಂತೆ ವೇಷಧರಿಸಿ ಹೊಂಡದಿಂದ ಕೂಡಿದ ರಸ್ತೆಯಲ್ಲಿ ಮೂನ್ ವಾಕ್ ಮಾಡಿದಂತೆ ಮಂಗಳೂರಿನಲ್ಲೂ 6 ತರಗತಿ ವಿದ್ಯಾರ್ಥಿನಿಯೊಬ್ಬಳು ಮೂನ್‌ವಾಕ್ ಮಾಡಿ ಪಾಲಿಕೆ ಗಮನ ಸೆಳೆಯಲು ಪ್ರಯತ್ನಿಸಿದ್ದಾಳೆ.

ನಗರದಲ್ಲಿ ಪ್ರಸಿದ್ಧಿ ಪಡೆದ ಎಂಸಿಸಿ ಸಿವಿಕ್ ಗ್ರೂಪ್ ಮಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಆದರೆ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರೂಪ್‌ನ ಪ್ರಮುಖರಾದ ಅರ್ಜುನ್ ಮಸ್ಕರೇನ್ಹಸ್ ಹಾಗೂ ಅಜೊಯ್ ಡಿಸಿಲ್ವ ಅವರು ಮೂನ್‌ವಾಕ್ ಪ್ರತಿಭಟನೆಗೆ ನಿರ್ಧರಿಸಿದ್ದರು.
ಅದರಂದತೆ ಸೆ. 20 ರಂದು ರಂದು ರಾತ್ರಿ 10 ಗಂಟೆ ವೇಳೆಗೆ 6 ನೇ ತರಗತಿ ವಿದ್ಯಾರ್ಥಿನಿ ಆಡ್ಲಿನ್ ಡಿಸಿಲ್ವ ಅವರು ಬಾಹ್ಯಾಕಾಶದಲ್ಲಿ ನಡೆಯುವಾಗ ಧರಿಸುವ ಬಟ್ಟೆ ಹಾಗೂ ಇತರ ಪರಿಕರಗಳನ್ನು ಧರಿಸಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮುಂದಿನ ಹೊಂಡ ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಅದರನ್ನು ವಿಡಿಯೋ ಚಿತ್ರೀಕರಣ ನಡೆಸಿದ್ದರು. ಬಳಿಕ 33 ಸೆಕೆಂಡ್‌ನ ವಿಡಿಯೋವನ್ನು ವಾಟ್ಸಾಪ್-ಫೇಸ್‌ಬುಕ್‌ನಲ್ಲಿ ವೈರಲ್ ಮಾಡಿ ಪಾಲಿಕೆಯ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಬೊಕ್ಕಪಟ್ಣದಲ್ಲಿ ಬಾಟಲ್‌ಗೊಂದು ಆರ್ಟ್ ಕ್ಯಾಂಪ್

ಮನೆ, ಹೋಟೆಲ್, ಬಾರ್, ಅಂಗಡಿ ಮಳಿಗೆ ಗಳಲ್ಲಿ ದ್ರವ್ಯ ಪದಾರ್ಥಗಳನ್ನು ಖರೀದಿಸಿ ಉಪಯೋಗ ಆದ ನಂತರ ಅದೇ ಬಾಟಲ್‌ಗಳನ್ನು ತ್ಯಾಜ್ಯ ಎಂದು ಬೀದಿ, ನದಿ, ಸಮುದ್ರಕ್ಕೆ ಎಸೆದು ಮಾಲಿನ್ಯ ಗೊಳಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಈ ಬಾಟಲ್ ಗಳು ಅಂತರ್ಜಲ ಮತ್ತು ಜಲಚರ ಜೀವಿಗಳ ನೆಮ್ಮದಿಗೆ ಸಮಸ್ಯೆ ಆಗುತ್ತಿವೆ.

ಮಂಗಳೂರಿನ ಬೊಕ್ಕ ಪಟ್ಣದ ಕಲಾವಿದೆ ಮೇಘ ಮೆಂಡನ್ ಈ ತರದ ತ್ಯಾಜ್ಯ ಬಾಟಲಿಗಳಲ್ಲಿ ಚಿತ್ರ ಬರೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿ ಅದರ ಮೇಲೆ ಹೂ ಇಟ್ಟು ಅದು ಮನೆಯ ಅಂದ ಹೆಚ್ಚಾಗುವ ರೀತಿಯಲ್ಲಿ ಹೊಸ ಒಂದು ಕಲಾ ಆವಿಷ್ಕಾರ ಮಾಡುತ್ತಾರೆ.
ಸ್ವಚ್ಛ ಭಾರತದ ಒಂದು ಪಾತ್ರವಾಗಿ ಮನೆ, ಮನೆಯ ಬಾಟಲ್ ತ್ಯಾಜ್ಯಗಳು ಮನೆ, ಮನೆಯಲ್ಲೇ ಉಪಯೋಗ ಆದರೆ ಬೀದಿ, ನದಿ, ಸಾಗರಕ್ಕೆ ಸೇರುವ ತ್ಯಾಜ್ಯ ಕಡಿಮೆ ಆಗಿ ಪರಿಸರಕ್ಕೆ ನೀಡುವ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂಬ ಹಿತ ದೃಷ್ಟಿಯಲ್ಲಿ ಇದೀಗ ಈ ಬಾಟಲ್ ಚಿತ್ರ ಕಲೆಯ ಶಿಬಿರವನ್ನು ಬೊಕ್ಕ ಪಟ್ಣದ ಫಲ್ಗುಣಿ ನದೀ ಕಿನಾರೆಯಲ್ಲಿ ಆರಂಭಿಸಿದ್ದಾರೆ. ಮೇ 5, 12, 19, 20 ರಂದು ಬೆಳಗ್ಗೆಯಿಂದ ಮಧ್ಯಾನ ತನಕ ಈ ಶಿಬಿರ ಜರುಗಲಿದೆ.