Tagged: agricultural

ಹಣಕಾಸು ಸಚಿವರಿಂದ ಪದಕ ಪಡೆದ ಕುಡ್ಲದ ಮಿಶೆಲ್ !

ಕುಡ್ಲದ ನೀರುಡೆ ಕಲ್ಲಮುಂಡ್ಕೂರಿನ ಮಿಶೆಲ್ ಕ್ವೀನಿ ಡಿಕೋಸ್ತಾ ಅವರ ಕೆಲಸವನ್ನು ನೋಡಿ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪದಕ ನೀಡಿ ಗೌರವಿಸಿದ್ದಾರೆ.

ಅರೇ ಯಾರಿದು ಮಿಶೆಲ್ ಎನ್ನುತ್ತೀರಾ..? ಮಿಶೆಲ್ ನೀರುಡೆಯ ಕಲ್ಲಮುಂಡ್ಕೂರಿನ ಲಾಜರಸ್ ಡಿ ಕೋಸ್ತಾ ಮತ್ತು ನ್ಯಾನ್ಸಿ ಡಿ ಕೋಸ್ತಾ ದಂಪತಿಗಳ ಎರಡನೇ ಮಗಳು. ಮೂಲತಃ ಕೃಷಿ ಕುಟುಂಬದಿಂದ ಬೆಳೆದು ಬಂದ ಹುಡುಗಿ ಮಿಶೆಲ್ 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೇ ರ‍್ಯಾಂಕ್‌ಗಳಿಸಿಕೊಂಡು ನಾಗರಿಕ ಸೇವೆಯಲ್ಲಿ ಐಆರ್‌ಎಸ್ ಮಾಡುತ್ತಿದ್ದಾರೆ.

ಇದರ ಪಾಸಿಂಗ್ ಔಟ್ ಕಾರ‍್ಯಕ್ರಮದಲ್ಲಿ ವಿಶೇಸ ಸಾಧನೆ ಮಾಡಿದ ಮಿಶೆಲ್‌ಗೆ ಖುದ್ದು ಹಣಕಾಸು ಸಚಿವರು ಪದಕ ನೀಡಿ ಗೌರವಿಸಿದ್ದಾರೆ. ಇದು ಕುಡ್ಲದ ಪ್ರತಿಯೊಬ್ಬ ಹೆಣ್ಣು ಮಗಳು ಸಾಧನೆಗೆ ಸಂದ ಗೆಲುವು ಎನ್ನಬೇಕು. ಮಿಶೆಲ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಗಿಸಿದವರು.

90ರ ಹರೆಯದ ರುಕ್ಮಯ್ಯ ಮೂಲ್ಯರ ಆದರ್ಶ ಬದುಕು ಈಗ ನೆನಪು ‌ಮಾತ್ರ

ಒಂದಲ್ಲ ಎರಡಲ್ಲ ತಮ್ಮ ಬದುಕಿನ ಕೊನೆಯ ತನಕನೂ ಭೂಮಿ, ಕೃಷಿ,ಪರಿಸರ ಜತೆಗೆ ಇಂದಿನ ಯುವಜನತೆಗೊಂದು ಮಾದರಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಪಾವಂಜೆಯ ರುಕ್ಮಯ್ಯ ಮೂಲ್ಯರು ಇನ್ನು ಮುಂದೆ ಬರೀ ನೆನಪು ಮಾತ್ರ.

90ರ ಹರೆಯದಲ್ಲೂ ಮುಂಜಾನೆ ಯಿಂದ ಸಂಜೆಯ ತನಕ ಗದ್ದೆಯಲ್ಲಿ ದುಡಿಯುತ್ತಾ ಅವರು ಬಹಳಷ್ಟು ಮಂದಿಗೆ ಆದರ್ಶರಾಗಿದ್ದರು. ಎಂದಿನಂತೆ ಕೆಲಸಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಭಾನುವಾರ ವಾಹನವೊಂದು ಡಿಕ್ಕಿಯಾದ ಪರಿಣಾಮ ಅವರು ಮೃತಪಟ್ಟರು.

ವಿಶೇಷ ಎಂದರೆ ಅವರು ಕೃಷಿ ಮೇಲಿಟ್ಟ ಅಪಾರ ಪ್ರೀತಿಯಿಂದ ಅವರು ಎಲ್ಲರ ಮೆಚ್ಚುಗೆಗೆ ಅರ್ಹರಾಗಿದ್ದರು. ಕುಡ್ಲ‌ಸಿಟಿ ಅವರ ಆತ್ಮಕ್ಕೆ ಭಗವಂತನಲ್ಲಿ ಶಾಂತಿ ಕೋರುತ್ತದೆ.