Kudla City

ಮಂಗಳೂರು ಸರ್ಫಿಂಗ್ ಉತ್ಸವ ಈ ಬಾರಿ ಡೌಟ್

ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಜೆಟ್‍ನಲ್ಲೇ ಘೊಷಣೆಯಾಗಿದ್ದ `ಮಂಗಳೂರು ಸರ್ಫಿಂಗ್ ಉತ್ಸವ’ಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಇದುವರೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಸತತ ಎರಡನೇ ವರ್ಷ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ನಿಂತು ಹೋಗಿದ್ದ ಮಂಗಳೂರು ಸರ್ಫಿಂಗ್ ಉತ್ಸವವನ್ನು ಈ ಬಾರಿ ಲೋಕಸಭೆ ಚುನಾವಣೆ ಇದ್ದರೂ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿತ್ತು. ಆದರೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸರ್ಫಿಂಗ್ ಉತ್ಸವ ನಡೆಸಲು ಆಸಕ್ತಿ ವಹಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡುವ ಅವಕಾಶದಿಂದ ಮಂಗಳೂರು ವಂಚಿತವಾಗಿದೆ.

ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಸರ್ಫಿಂಗ್ ಉತ್ಸವ ನಡೆಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾಡಳಿತ ಮೂಲಕ ಕಳೆದ ಜನವರಿಯಲ್ಲೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ ರಾಜ್ಯ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಜಿಲ್ಲಾಡಳಿತಕ್ಕೆ ಬಂದಿಲ್ಲ.

ಕುಡ್ಲದ ರಿಕ್ಷಾ ಚಾಲಕರ ಸಿಟಿ ಇನ್ಪೋ ಟ್ಯಾಬ್ !

ಕುಡ್ಲದ ರಿಕ್ಷಾ ಚಾಲಕರು ಡಿಜಿಟಲ್ ವಿಚಾರದಲ್ಲೂ ಸಾಕಷ್ಟು ಸ್ಮಾರ್ಟ್ ಆಗಿರುವುದು ಗೊತ್ತಿರುವ ವಿಚಾರ. ಈ ಹಿಂದೆ ರಿಕ್ಷಾಗಳಿಗೆ ಪೇಟಿಎಂ ಮಾಡುವ ಮೂಲಕ ಮಾದರಿಯಾದ ಕುಡ್ಲದ ರಿಕ್ಷಾ ಚಾಲಕರು ಟ್ಯಾಬ್ ಅಳವಡಿಸುವ ಕೆಲಸದಿಂದಲ್ಲೂ ದೇಶದಲ್ಲಿ ಮೊದಲ ಟ್ಯಾಬ್ ಅಳವಡಿಸಿದ ಕೆಲಸಕ್ಕೆ ಭಾಜನರಾಗಿದ್ದಾರೆ. ಕುಡ್ಲದ ಕೆಲವು ರಿಕ್ಷಾಗಳು ಈಗಾಗಲೇ ಟ್ಯಾಬ್ ಆಳವಡಿಸಿಕೊಂಡಿದ್ದಾರೆ.
ರಿಕ್ಷಾದಲ್ಲಿ ಅಳವಡಿಸಿಕೊಂಡಿರುವ ಟ್ಯಾಬ್‌ನಲ್ಲಿ ಕರಾವಳಿಯ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್‌ಗಳ ವಿವರ, ಮಾಲ್, ಪ್ರವಾಸಿ ತಾಣಗಳು ಸೇರಿದಂತೆ ಸಂಪೂರ್ಣ ಮಾಹಿತಿಗಳು ಸಿಗಲಿದೆ. ದೇವಸ್ಥಾನ ಕ್ಲಿಕ್ ಮಾಡಿದಾಕ್ಷಣ ದೇವಸ್ಥಾನದ ಇತಿಹಾಸ, ಪ್ರಯಾಣದ ವಿವರ, ತಂಗಲು ಇರುವ ವ್ಯವಸ್ಥೆ, ಪೂಜಾ ಸಮಯದ ಟೈಮ್ ಟೇಬಲ್ ಇತ್ಯಾದಿಗಳನ್ನು ನೀಡಲಾಗಿದೆ.

ಬಿಜಿಎಸ್ ಪದವಿ ಕಾಲೇಜು ಅವಕಾಶ ತಪ್ಪಿಸಬೇಡಿ !

ಕಾವೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರವೇಶಾತಿಯನ್ನು ಆರಂಭಿಸಲಾಗಿದೆ. ವಿಜ್ಞಾನ ವಿಚಾರದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಎಎಸ್, ಇಬಿಎಸಿ ವಿಷಯಗಳು ವಿದ್ಯಾರ್ಥಿಗಳಿಗೆ ಸಿಗಲಿದೆ. ಕಂಪ್ಯೂಟರ್ ಲ್ಯಾಬ್, ಎಲ್ಲ ಸವಲತ್ತುಗಳಿಂದ ಕೂಡಿದ ಉಪನ್ಯಾಸದ ಹಾಲ್, ಡಿಜಿಟಲ್ ಲೈಬ್ರೆರಿಯ ಸವಲತ್ತು, ಜಿಮ್, ವಿದ್ಯಾರ್ಥಿಗಳಿಗೆ (ಪುರುಷ) ಹಾಸ್ಟೆಲ್ ವ್ಯವಸ್ಥೆ ಕೂಡಯಿದೆ.
ಅನುಭವಸ್ಥರಾದ ಉಪನ್ಯಾಸಕ ವರ್ಗ, ರೆಮಿಡಿಯಲ್ ತರಗತಿಗಳ ಜತೆಗೆ ವೈಯಕ್ತಿಕವಾಗಿ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವಂತಹ ಕೋಚಿಂಗ್ ಕ್ಲಾಸ್, ಜೆಇಇ ಮೈನ್ ಹಾಗೂ ಅಡ್ವಾನ್ಸ್, ನೀಟ್ ಕುರಿತಾದ ತರಗತಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯನ್ನು ತೋರಿಸುತ್ತದೆ. ಬಿಜಿಎಸ್‌ನ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಬನ್ನಿ
http://www.bgsec.net/

ಪಿಲಿಕುಳದ ಪ್ರಾಣಿ, ಪಕ್ಷಿಗಳಿಗೆ ಫ್ಯಾನ್ ಟ್ರೀಟ್‌ಮೆಂಟ್

ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈಗ ಪ್ರಾಣಿ, ಪಕ್ಷಿಗಳಿಗೆ ಈಗ ಯಾಂತ್ರೀಕೃತ ಫ್ಯಾನ್‌ಗಳ ಆಹ್ಲಾದಕರ ಗಾಳಿ, ಜತೆಗೆ ಅಲ್ಲಲ್ಲಿ ತಣ್ಣೀರ ಸಿಂಚನದ ಖುಷಿ… ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮನುಷ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸೆಕೆ ತಡೆಯಲಾಗುತ್ತಿಲ್ಲ. ಹೀಗಾಗಿ ಪಿಲಿಕುಳ ಉದಾನವನದಲ್ಲಿರುವ ಪ್ರಾಣಿಗಳಿಗೆ ಬಿಸಿಲಿನ ತಾಪ ತಣಿಸಲು ಫ್ಯಾನ್, ನೀರು ಸಿಂಪಡಣೆ, ಜತೆಯಲ್ಲಿ ಶೀಟ್‌ಗಳಿಗೆ ಬಿಳಿ ಪೈಂಟ್ ಬಳಿಯುವ ಮೂಲ ಹೊಸ ಪ್ರಯತ್ನವನ್ನು ಮಾಡಲಾಗುತ್ತಿದೆ.

ಉದಾಸೀನತೆಗೆ ದೂಡಿದ ಮಳೆರಾಯನ ಆಟ !

ಕರಾವಳಿಯ ನಾನಾ ಭಾಗದಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಒಂಚೂರು ಮಳೆ ಬಂದು ಇಳೆಯನ್ನು ತಣ್ಣಗೆ ಮಾಡಿದ ಪ್ರಸಂಗಗಳು ನಡೆದರೆ ಮಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜತೆಗೆ ಮಳೆರಾಯನ ಆಟ ಮುಂಜಾನೆ ಎದ್ದು ಆಕಾಶ ನೋಡುವ ಜನರಿಗೆ ಉದಾಸೀನತೆಯ ಭಾವವನ್ನು ಮೂಡಿಸಿದೆ.
ಅಷ್ಟಕ್ಕೂ ಮಂಗಳೂರು ಸಿಟಿ ಲಿಮಿಟ್‌ನೊಳಗೆ ಕೆಲವು ಕಡೆಯಲ್ಲಿ ಮಳೆಯಾದರೆ ಕುಡ್ಲದ ಪ್ರಮುಖ ಭಾಗದಲ್ಲಿ ಮಳೆಯ ಹನಿಯೇ ಬಿದ್ದಿಲ್ಲ. ಸಿಟಿ ಜನ ಉರಿಬಿಸಿಲಿಗೆ ಬೆವರು ಸುರಿಸುತ್ತಾ ಮಂಗಳೂರಿನಲ್ಲಿ ಭರ್ಜರಿ ಒಂದು ಮಳೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ದೇವಸ್ಥಾನ, ಚರ್ಚ್‌ಗಳಲ್ಲಿ ಈಗಾಗಲೇ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ. ಆದರೂ ಮಳೆರಾಯ ಮುನಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ.