Kudla City

ಕೂಳೂರು ಸೇತುವೆ ಕಮಾನು ಶಿಥಿಲ: ಘನ ವಾಹನ ಫುಲ್ ಸ್ಟಾಪ್

ಮಂಗಳೂರಿನ ಕೂಳೂರು ಪಾಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಮಾನು ಸೇತುವೆ ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವವರೆಗೆ ತಾತ್ಕಾಲಿಕವಾಗಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್‌ಪಿಎಲ್ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳನ್ನು ಪಡುಬಿದ್ರೆ, ಕಾರ್ಕಳ- ಗುರುವಾಯನ ಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸುವುದು.

ಕೇರಳ ರಾಜ್ಯದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆಪಿಟಿ ಯಿಂದ ಕಾವೂರು ಬಜಪೆ ಕಾನ ಸುರತ್ಕಲ್ ಮೂಲಕ ಸಂಚರಿಸುವುದು. ಘನ ವಾಹನಗಳಾದ ಲಾರಿ ಬಸ್ ಟ್ಯಾಂಕರ್‌ಗಳಿಗೆ ಕೂಳೂರು ಹೊಸ ಸೇತುವೆಯ ಮೂಲಕ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಲಘು ವಾಹನಗಳಾದ ಕಾರು ಜೀಪು, ಟೆಂಪೊ, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಹಳೆಯ ಕಮಾನು ಸೇತುವೆಯ ಮೂಲಕ ದ್ವಿಮುಖವಾಗಿ ಸಂಚರಿಸುವ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಯೋಜನಾ ನಿರ್ದೇಶಕರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಅವರಿಗೆ ಸೂಚಿಸಲಾಗಿದೆ. ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಆಯುಕ್ತರು, ಮಂಗಳೂರು ನಗರ ಅವರು ಮತ್ತು ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಅವರು ತಮ್ಮ ವ್ಯಾಪ್ತಿಯಲ್ಲಿ ಮೋಟಾರ್ ವಾಹನ ಕಾಯಿದೆ ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.

ಕ್ರಿಶ್ಚಿಯನ್ ಮದುವೆಯಲ್ಲಿ ಎರಡು ಫುಡ್ ಗ್ಯಾರಂಟಿ

ಕ್ರಿಶ್ಚಿಯನ್ ಅದರಲ್ಲೂ ಮಂಗಳೂರಿನ ಕ್ರೈಸ್ತ ರ ಮದುವೆ ಸಮಾರಂಭ ದಲ್ಲಿ ಎರಡು ರೀತಿಯ ಫುಡ್ ಗಳು ಸಿಕ್ಕೇ ಸಿಗುತ್ತದೆ. ಒಂದು ವೆಜ್ ಹಾಗೂ ಇನ್ನೊಂದು ನಾನ್ ವೆಜ್. ಇತರ ಯಾವುದೇ ಮಂಗಳೂರಿನ ಸಮುದಾಯದ ಮದುವೆಯಲ್ಲಿ ಇಂತಹ ಸಂಸ್ಕೃತಿ ಕಾಣುವುದು ಕಷ್ಟ.

ಹಿಂದೂಗಳಲ್ಲಿ ಧಾರ್ಮಿಕ ವಿಧಿವಿಧಾನಗಳು ಇದ್ದಾಗ ಅಲ್ಲಿ ವೆಜ್ ಮುಖ್ಯ. ಆದರೆ ಧಾರ್ಮಿಕ ಕಾರ್ಯ ಮುಗಿದ ಬಳಿಕ ನಾನ್ ವೆಜ್ ನೀಡುವ ಪರಂಪರೆ ಅಲ್ಲಿದೆ. ಮುಸ್ಲಿಂ ಸಮುದಾಯದಲ್ಲಿ ಜಾಸ್ತಿ ನಾನ್ ವೆಜ್ ಇರುತ್ತದೆ. ವೆಜ್ ಗೆ ಕೆಲವೊಂದು ಸಲ ಅಸ್ಪಧ ನೀಡಲಾಗುತ್ತದೆ.

ಆದರೆ ಕ್ರೈಸ್ತ ರ ಯಾವುದೇ ಮದುವೆ ಸಮಾರಂಭಗಳಿರಲಿ ಅಲ್ಲಿ ವೆಜ್, ನಾನ್ ವೆಜ್ ಎನ್ನುವ ಪ್ರತ್ಯೇಕ ಫುಡ್ ಕೌಂಟರ್ ಇರುತ್ತದೆ. ಜತೆಗೆ ವೈನ್, ಡ್ಯಾನ್ಸ್ ,ಎಂಸಿ ಬೇಕೇ ಬೇಕು.

ಬಿಜಿಎಸ್ ಎಂದರೆ ಸಂಪೂರ್ಣ ಶಿಕ್ಷಣದ ತಾಣ

ಕಾವೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಪ್ರವೇಶಾತಿ ನಡೆಯುತ್ತಿದೆ. ವಿಜ್ಞಾನ ವಿಚಾರದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಎಎಸ್, ಇಬಿಎಸಿ ವಿಷಯಗಳು ವಿದ್ಯಾರ್ಥಿಗಳಿಗೆ ಸಿಗಲಿದೆ. ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲೈಬ್ರೆರಿಯ ಸವಲತ್ತು, ಜಿಮ್, ವಿದ್ಯಾರ್ಥಿಗಳಿಗೆ (ಪುರುಷ) ಹಾಸ್ಟೆಲ್ ವ್ಯವಸ್ಥೆ ಕೂಡಯಿದೆ. ಅನುಭವಸ್ಥರಾದ ಉಪನ್ಯಾಸಕ ವರ್ಗ, ರೆಮಿಡಿಯಲ್ ತರಗತಿಗಳ ಜತೆಗೆ ವೈಯಕ್ತಿಕವಾಗಿ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವಂತಹ ಕೋಚಿಂಗ್ ಕ್ಲಾಸ್, ಜೆಇಇ ಮೈನ್ ಹಾಗೂ ಅಡ್ವಾನ್ಸ್, ನೀಟ್ ಕುರಿತಾದ ತರಗತಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯನ್ನು ತೋರಿಸುತ್ತದೆ. ಬಿಜಿಎಸ್‌ನ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಬನ್ನಿ http://www.bgsec.net/

ಬಿಜಿಎಸ್‌ನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹೈಟೆಕ್ ಸವಲತ್ತು !

ಕಾವೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಬಹಳ ಮುಖ್ಯವಾದದ್ದು ಗುಣಮಟ್ಟದ ಶಿಕ್ಷಣ ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಬದುಕಿಗೆ ಸಂಬಂಧಪಟ್ಟಂತಹ ಹೈಟೆಕ್ ಸವಲತ್ತು.

ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಾನವೀಯ ಗುಣಗಳಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದಲ್ಲಿ ಬಹಳ ಎತ್ತರಕ್ಕೆ ಸಾಗಿದ ಉದಾಹರಣೆಗಳೇ ಜಾಸ್ತಿ.
ಹೆತ್ತವರಿಗೆ ಮಕ್ಕಳು ಅಮೂಲ್ಯವಾದ ಸಂಪತ್ತು ಎಂದು ಪರಿಗಣಿಸಿದರೆ ಇಂತಹ ಸಂಪತ್ತನ್ನು ಸಮಾಜದಲ್ಲಿ ಉತ್ತಮವಾಗಿ ಬೆಳೆಸುವ ಕೆಲಸವನ್ನು ಕಾವೂರಿನ ಬಿಜಿಎಸ್ ಸಂಸ್ಥೆ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ 0824 -248 4749

ಕರಾವಳಿಯ ಅತೀ ಹೆಚ್ಚು ಚರ್ಚ್ ಗಳ ಹೆಸರು ಸಂತ ಅಂತೋನಿ

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅತೀ ಹೆಚ್ಚು ಚರ್ಚ್ ಗಳಲ್ಲಿ ಸಂತ ಅಂತೋನಿ ಹೆಸರು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಬೆಳ್ತಂಗಡಿ ಯ ನಾರಾವಿ ಹಾಗೂ ಉಜಿರೆಯಲ್ಲಿ ಸಂತ ಅಂತೋನಿ ಚರ್ಚ್ ಗಳಿದ್ದಾರೆ.
ಉಳಿದಂತೆ ಅಲ್ಲಿಪಾದೆ, ಬನ್ನೂರು, ಕೂಳೂರು, ಪೆರ್ಮಾಯಿ ಯಲ್ಲಿ ಸಂತ ಅಂತೋನಿ ಅವರಿಗೆ ಸಮರ್ಪಿತ ವಾದ ಚರ್ಚ್ ಗಳಿವೆ. ಮಂಗಳೂರಿನಲ್ಲ ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಹಾಗೂ ಮಿಲಾಗ್ರಿಸ್ ನಲ್ಲಿ ಪುಣ್ಯಕ್ಷೇತ್ರ ವಿದೆ.
ಕೂಳೂರಿನ ಚರ್ಚ್ ಅತೀ ಪುರಾತನ ಚರ್ಚ್ ಎಂದರೆ 1888 ರಲ್ಲಿ ಸ್ಥಾಪನೆಯಾಯಿತು. ಈ ಬಳಿಕ ಪೆರ್ಮಾಯಿ 2003 ರಲ್ಲಿ ಆರಂಭ ವಾಯಿತು. ಮೇ 31 ರಿಂದ ಈ ಎಲ್ಲ ಚರ್ಚ್ ಗಳಲ್ಲಿ ವಿಶೇಷ ನೊವೆನಾ ಹಾಗೂ ಜೂನ್ 13 ರಂದು ಸಂತ ಅಂತೋನಿ ಅವರ ಹಬ್ಬ ನಡೆಯಲಿದೆ. ಅಂದಹಾಗೆ ಕರಾವಳಿಯಲ್ಲಿ ಈ ಸಂತ ನನ್ನು ಬಿಟ್ಟರೆ ಸಂತ ಲಾರೆನ್ಸ್ ಚರ್ಚ್ ಗಳು ಕೂಡ ಇದೆ.