Tagged: Mangaluru

ಕುಡ್ಲದ ಫಿಮೇಲ್ ಫೋಟೋಗ್ರಾಫರ್ ಗೆದ್ದ ಫ್ರೈಜ್

ಪುರುಷರೇ ಪ್ರಾಧಾನ್ಯತೆ ವಹಿಸಿರುವಂತಹ ಸೃಜನಶೀಲ ಕಲೆ ಛಾಯಾಗ್ರಹಣ. ಇದರಲ್ಲಿ ಈಗೀಗೀಲಷ್ಟೆ ಮಹಿಳೆಯರು ವೈವಾಹಿಕ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇದರ ನಡುವೆ ನಮ್ಮ ಕುಡ್ಲದ ಛಾಯಾಗ್ರಾಹಕಿ ರೊವಿನಾ ಬ್ರಿಟ್ಟೊ ಪ್ರತಿಷ್ಟಿತ ವೆಡ್ಡಿಂಗ್ ಸೂತ್ರ ಫೋಟೊಗ್ರಫಿ ಅವಾರ್ಡ್ 2019 ಪಡೆದಿದ್ದಾರೆ. ಹೌದು ಮಂಗಳೂರಿನ ಕ್ಯಾಮರೋನ್ ಸ್ಟುಡಿಯೋ ರೊವಿನಾ ಬ್ರಿಟ್ಟೊ ಪ್ರಿ ವೆಡ್ಡಿಂಗ್ ಫಿಲಂಸ್ ಆ್ಯಂಡ್ ಆಲ್ಬಂ ಡಿಸೈನ್ ವಿಭಾಗದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವುದರ ಮೂಲಕ ಈ ಸಾಧನೆ ಮಾಡಿದ್ದಾರೆ.
ಅಂದಹಾಗೆ ಕುಡ್ಲದ ರೊವಿನಾ ಬ್ರಿಟ್ಟೋ ಬೇಸಿಕಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ವಾಮಂಜೂರಿನ ಸಂತ ಜೋಸೆಫ್‌ನಲ್ಲಿ ಎಂಜಿನಿಯರ್ ಮುಗಿಸಿಕೊಂಡು ತಮ್ಮ ಹವ್ಯಾಸವಾದ ಫೋಟೋಗ್ರಾಫಿಯಲ್ಲಿಯೇ ಮಿಂಚಿದವಳಿಗೆ ಈಗ ಪ್ರಶಸ್ತಿ ಸಿಕ್ಕಿದೆ. ಇದು ಕುಡ್ಲದ ಹುಡುಗಿಯ ಸಾಧನೆಗೆ ಸಿಕ್ಕ ಪ್ರಶಸ್ತಿ.

ನೂರು ದಾಟಿದರೂ ಇವರು ಕುಡ್ಲದ ಟ್ರಾಫಿಕ್ ವಾರ್ಡನ್

ಮಂಗಳೂರು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಜತೆಗೆ ಅವರ ಸಿಬ್ಬಂದಿಗಳು ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ.
ಆದರೆ ಮಂಗಳೂರಿನಲ್ಲಿ ಹಿರಿಯ ಜೀವವೊಂದು ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹೌದು. 100 ವರ್ಷದಲ್ಲಿರುವ ಜೋಯ್ ಗೊನ್ಸಾಲ್ವೀಸ್ ಅವರು ನಗರದ ಪ್ರಮುಖ ಸರ್ಕಲ್‌ಗಳಾದ ನಂತೂರು, ಕೆಪಿಟಿ ಸರ್ಕಲ್ ಬಳಿಯಲ್ಲಿ ಟ್ರಾಣ ಮಾಡುವ ಕೆಲಸ ಮಾಡುತ್ತಾರೆ.
ಅವರೇ ಟ್ರಾಫಿಕ್ ವಾರ್ಡನ್ ಸ್ಕ್ವಾಡ್ ಹುಟ್ಟುಹಾಕುವಲ್ಲಿ ಕೆಲಸ ಮಾಡಿದವರು. ಅಂದಹಾಗೆ ಜೋಯ್ ಅವರು ಇದು ಸಂಬಳಕ್ಕೆ ಮಾಡುತ್ತಿರುವ ಕೆಲಸವಲ್ಲ ಬದಲಾಗಿ ತಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡುತ್ತಿದ್ದಾರೆ.
ಟ್ರಾಫಿಕ್ ಪೊಲೀಸರಿಗೆ ದಣಿವಾದಾಗ ಜ್ಯೂಸ್ ಸೇರಿದಂತೆ ಇತರ ಉಪಚಾರದಲ್ಲೂ ಜೋಯ್ ಅವರು ಎತ್ತಿದ ಕೈ. ಇವರ ಸೇವೆಯನ್ನು ಇಲಾಖೆ ಕೂಡ ಗಮನಿಸಿಕೊಂಡು ಸನ್ಮಾನಿಸಿದೆ.

ಕುಡ್ಲ ಸಿಟಿಯ ಕ್ಲೀನ್ ಗಾಗಿ ದುಡಿಯುವ ಜಗನ್

ಮಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ರಾಮಕೃಷ್ಣ ಮಿಷನ್ ಪ್ರತಿ ಭಾನುವಾರ ಸಿಟಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದೆ.
ವಿಶೇಷವಾಗಿ ಈ ಅಭಿಯಾನದಲ್ಲಿ ಜಗನ್ ಕೋಡಿಕಲ್ ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ. ಬೇಸಿಕಲಿ ತಮಿಳುನಾಡು ಮೂಲದ ಜಗನ್, ಮಂಗಳೂರಿನ ಕೋಡಿಕಲ್‌ನಲ್ಲಿ ವಾಸ.
ವಿಶೇಷ ಅಂದರೆ ಅವರಿಗೆ ಎರಡೂ ಕಾಲುಗಳಿಲ್ಲ. ಆದರೂ ತಮ್ಮ ಮೂರು ಚಕ್ರದ ಸ್ಕೂಟರ್‌ನಲ್ಲಿ ಪ್ರತಿ ಭಾನುವಾರ ಸ್ವಯಂಸ್ಫೂರ್ತಿಯಿಂದ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.

ಕುಡ್ಲ ಸಿಟಿಯ ಕ್ಲೀನ್ ಗಾಗಿ ದುಡಿಯುವ ಜಗನ್

ಮಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ರಾಮಕೃಷ್ಣ ಮಿಷನ್ ಪ್ರತಿ ಭಾನುವಾರ ಸಿಟಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದೆ.
ವಿಶೇಷವಾಗಿ ಈ ಅಭಿಯಾನದಲ್ಲಿ ಜಗನ್ ಕೋಡಿಕಲ್ ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ. ಬೇಸಿಕಲಿ ತಮಿಳುನಾಡು ಮೂಲದ ಜಗನ್, ಮಂಗಳೂರಿನ ಕೋಡಿಕಲ್‌ನಲ್ಲಿ ವಾಸ.
ವಿಶೇಷ ಅಂದರೆ ಅವರಿಗೆ ಎರಡೂ ಕಾಲುಗಳಿಲ್ಲ. ಆದರೂ ತಮ್ಮ ಮೂರು ಚಕ್ರದ ಸ್ಕೂಟರ್‌ನಲ್ಲಿ ಪ್ರತಿ ಭಾನುವಾರ ಸ್ವಯಂಸ್ಫೂರ್ತಿಯಿಂದ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.

ಶಿಲ್ಪಾರ ಮೊಬೈಲ್ ಕ್ಯಾಂಟೀನ್‌ಗೆ ಫಿದಾ ಆದ ಉದ್ಯಮಿ ಮಹೇಂದ್ರ!

ಇವರು ಶಿಲ್ಪಾ ರಾಜಶೇಖರ್. ಮಂಗಳೂರಿನಲ್ಲಿ ಮೊಬೈಲ್ ಕ್ಯಾಂಟೀನ್ ಉದ್ಯಮ ನಡೆಸುತ್ತಿದ್ದಾರೆ. ಮಹೇಂದ್ರ ಎನ್ನುವ ಕಾರ್ಪೊರೇಟ್ ಕಂಪನಿಯ ಮಾಲೀಕ ಮಹೇಂದ್ರ ಅವರೇ ಇವರು ಬಿಸಿನೆಸ್‌ಗೆ ಮನಸೋತು ವ್ಯಾಪಾರ ನಡೆಸಲು ಮಹೇಂದ್ರ ವಾಹನವೊಂದನ್ನು ಗಿಫ್ಟ್ ಆಗಿ ನೀಡಿದ್ದರು.
ಮೂಲತಃ ಹಾಸನ ಜಿಲ್ಲೆಯವರಾದ ಶಿಲ್ಪಾ ತಮ್ಮ ಪತಿ ರಾಜಶೇಖರ್ ಜತೆಯಲ್ಲಿ ಮಂಗಳೂರಿಗೆ ಬಂದಿದ್ದರು. ಆದರೆ ರಾಜಶೇಖರ್ ನಾಪತ್ತೆಯಾದರು. ತಮ್ಮವರು ಎಂದು ಹೇಳುವ ಎಲ್ಲರೂ ಕೈಕೊಟ್ಟರು.
ಮೂರು ವರ್ಷದ ಮಗುವಿನ ಜತೆಯಲ್ಲಿ ಬದುಕಿಗಾಗಿ ಗುದ್ದಾಟ ನಡೆಸಿಕೊಂಡು ಬಂದು ಕೊನೆಗೆ ಹಳ್ಳಿಮನೆ ರೊಟ್ಟೀಸ್ ಎನ್ನುವ ಪುಟ್ಟ ಮೊಬೈಲ್ ಕ್ಯಾಂಟೀನ್ ಹಾಕಿದರು. ಈಗಲೂ ಮಣ್ಣಗುಡ್ಡದ ಗಾಂಧಿನಗರದ ಕಡೆಗೆ ಹೋಗುವಾಗ ಈ ಕ್ಯಾಂಟೀನ್‌ಯಿದೆ.
ಈಗ ಶಿಲ್ಪಾ ಬದುಕು ಗಟ್ಟಿಯಾಗಿದೆ. ಹಳ್ಳಿಮನೆ ಶಿಲ್ಪಾ ಎಂದಾಕ್ಷಣ ಮಂಗಳೂರು ಮಂದಿಗೆ ಅವರ ಪರಿಚಯ ಆಗಿ ಬಿಡುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಸೋತು ಹೋದ ಹೆಣ್ಣು ಮಗಳು ಬದುಕು ಕಟ್ಟಿದ ರೀತಿಯಂತೂ ಅದ್ಬುತ ಎನ್ನಬಹುದು.