Tagged: karnataka

ಕುಡ್ಲದ ಹುಡುಗಿ ಪ್ರಿಯಾರ ಮುಡಿಗೆ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಆಸೀಸ್ ನೆಲದಲ್ಲಿ ಕುಡ್ಲದ ಹುಡುಗಿಯೊಬ್ಬರು ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಗೆದ್ದುಕೊಳ್ಳುವುದೇ ಹೆಮ್ಮೆಯ ವಿಚಾರ. ಆಸ್ಟ್ರೇಲಿಯಾದ ವಿಕ್ಟೋರಿಯಾ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ಕಾರ್ಕಳ ಬೇಸಿಕಲಿ ಬೆಳ್ಮಣ್ಣುವಿನ ಪ್ರಿಯಾ ಅವರು ಪ್ರಶಸ್ತಿ ಗೆದ್ದು ಬಂದಿದ್ದಾರೆ. ಅವರು ಹುಟ್ಟಿದ್ದು ಬೆಳ್ಮಣ್ಣು ಪ್ರದೇಶ ಓದು, ಬೆಳವಣಿಗೆ ಎಲ್ಲವೂ ಮಸ್ಕತ್, ಮೆಲ್ಬೋರ್ನ್‌ನಲ್ಲಿ ನಡೆದಿದೆ. ತಂದೆ, ತಾಯಿ ಇಬ್ಬರು ಕುಡ್ಲದವರು.

ಪಿಜಿ, ಹೋಮ್‌ಸ್ಟೇಗೆ ಸರಕಾರದ ಹೊಸ ರೂಲ್ಸ್ !

ರಾಜ್ಯದ ನಗರ ಪ್ರದೇಶದಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ) ಮತ್ತು ಹೋಮ್ ಸ್ಟೇಗಳಿಗೆ ಏಕರೂಪದ ಹೊಸ ಪಾಲಿಸಿಯನ್ನು ತರುವ ಕುರಿತು ಈಗಾಗಲೇ ಕರಡು ಸಿದ್ಧವಾಗಿದೆ. ರಾಜ್ಯ ಸರಕಾರ ಅದನ್ನು ಶೀಘ್ರದಲ್ಲಿಯೇ ಜಾರಿಗೆ ತರುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರ ಪ್ರದೇಶದಲ್ಲಿ ಸಾಕಷ್ಟು ಪಿಜಿಗಳು ನಡೆಯುತ್ತಿದೆ. ಆದರೆ ಅದಕ್ಕೆ ಯಾವುದೇ ರೀತಿಯ ನೀತಿ-ನಿಯಮಗಳು ಇಲ್ಲ. ಭದ್ರತೆ ವಿಚಾರದಲ್ಲೂ ಅಷ್ಟೇ ಈ ಕಾರಣದಿಂದ ಪಿಜಿ ಹಾಗೂ ಹೋಮ್ ಸ್ಟೇಗೆ ಸೂಕ್ತವಾದ ನೀತಿ- ನಿಯಮಗಳನ್ನು ತರುವ ಕುರಿತು ಪಾಲಿಸಿ ಮಾಡಲಾಗುತ್ತದೆ. ಈ ಮೂಲಕ ಅಲ್ಲಿನವರಿಗೆ ಭದ್ರತೆ, ಕನಿಷ್ಟ ಮೂಲಭೂತ ಸವಲತ್ತು ನೀಡುವ ಕುರಿತು ಅದರಲ್ಲಿ ಉಲ್ಲೇಖವಾಗುತ್ತದೆ.

ನಗರದ ಪ್ರದೇಶ ವ್ಯಾಪ್ತಿಯಲ್ಲಿ ಮಾದರಿ ಪಾಲಿಸಿಯನ್ನು ತರುವ ಮೂಲಕ ಭದ್ರತೆ, ಸ್ಥಳೀಯ ಸಂಸ್ಥೆಗಳಿಗೆ ಅದರ ಮಾಹಿತಿ, ಎಷ್ಟು ಪಿಜಿಗಳಿವೆ, ಮಹಿಳಾ ಪಿಜಿಗಳಿಗೆ ಇರುವ ಭದ್ರತೆ, ರೋಡ್ ಸೈಡ್‌ನಿಂದ ಎಷ್ಟು ಒಳಭಾಗದಲ್ಲಿದೆ. ಯಾವ ಪ್ರದೇಶದಲ್ಲಿ ಪಿಜಿಗಳು ಇರಕೂಡದು, ಆರೋಗ್ಯ ವಿಚಾರ, ಪಿಜಿ ಮಾಡುವವರಿಗೆ ಇತರರ ನೀಡುವ ಕಿರುಕುಳಕ್ಕೆ ಕ್ರಮ ಹೀಗೆ ಹತ್ತಾರು ವಿಚಾರಗಳು ಇದರಲ್ಲಿ ಅಡಕವಾಗಿರುತ್ತದೆ.

ಬಿಜಿಎಸ್‌ನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹೈಟೆಕ್ ಸವಲತ್ತು !

ಕಾವೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಬಹಳ ಮುಖ್ಯವಾದದ್ದು ಗುಣಮಟ್ಟದ ಶಿಕ್ಷಣ ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಬದುಕಿಗೆ ಸಂಬಂಧಪಟ್ಟಂತಹ ಹೈಟೆಕ್ ಸವಲತ್ತು.

ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಾನವೀಯ ಗುಣಗಳಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದಲ್ಲಿ ಬಹಳ ಎತ್ತರಕ್ಕೆ ಸಾಗಿದ ಉದಾಹರಣೆಗಳೇ ಜಾಸ್ತಿ.
ಹೆತ್ತವರಿಗೆ ಮಕ್ಕಳು ಅಮೂಲ್ಯವಾದ ಸಂಪತ್ತು ಎಂದು ಪರಿಗಣಿಸಿದರೆ ಇಂತಹ ಸಂಪತ್ತನ್ನು ಸಮಾಜದಲ್ಲಿ ಉತ್ತಮವಾಗಿ ಬೆಳೆಸುವ ಕೆಲಸವನ್ನು ಕಾವೂರಿನ ಬಿಜಿಎಸ್ ಸಂಸ್ಥೆ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ 0824 -248 4749

ಕರಾವಳಿಯ 65 ಸರಕಾರಿ ಶಾಲೆಯಲ್ಲಿ ಇನ್ನು ಫುಲ್ ಇಂಗ್ಲಿಷ್

ಒಂದಲ್ಲ ಎರಡಲ್ಲ ದ.ಕ ಹಾಗೂ ಉಡುಪಿಯ 65 ಶಾಲೆಗಳಲ್ಲಿ ಇನ್ನು ಫುಲ್ ಇಂಗ್ಲೀಷ್ ಕಾಣಿಸಿಕೊಳ್ಳಲಿದೆ. ಮುಖ್ಯವಾಗಿ ದ.ಕದ 43 ಹಾಗೂ ಉಡುಪಿ ಯ 22 ಶಾಲೆಗಳು ಈ ಸರ್ತಿ ಎಲ್ ಕೆಜಿಯಿಂದ ಹತ್ತನೇಯ ತರಗತಿಯ ವರೆಗೆ ಇಂಗ್ಲೀಷ್ ಮಾಧ್ಯಮ ವಾಗಿ ಬದಲಾಗಲಿದೆ. ಈಗಾಗಲೇ 63 ದ.ಕದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಉದ್ಯೋಗ ಹುಡುಕುವ ಮಹಿಳೆಯರಿಗೆ ಫ್ರೀ ಹಾಸ್ಟೆಲ್

208-19ನೇ ಸಾಲಿನ ಆಯವ್ಯಯ ಘೋಷಣೆಯಂತೆ ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ ಪ್ರವೇಶ ಪರೀಕ್ಷೆಗಳಿಗೆ ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನ ಮಿತಿಯಿಲ್ಲದೇ ೩ ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್‌ಗಳಲ್ಲಿ ಕಲ್ಪಿಸಲಾಗುತ್ತದೆ.
ಬೆಂಗಳೂರಿನಲ್ಲಿ ಲಭ್ಯವಿರುವ 13 ಟ್ರಾನ್ಸಿಟ್ ಹಾಸ್ಟೆಲ್‌ಗಳು : ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&23330846, 22925898.
ಶ್ರೀ ಶಾರದಾ ಕುಟೀರ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಶಂಕರಾಪುರ ದೂರವಾಣಿ ಸಂಖ್ಯೆ: 08026674697.
ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&22238574,

ಯುನಿವರ್ಸಿಟಿ ವುಮೆನ್ಸ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&22223314, 26631838, 9845023783.

ಮಹಾತ್ಮಾಗಾಂಧಿ ವಿದ್ಯಾಪೀಠ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26662226,
ಜಯನಗರ ಸ್ತ್ರೀ ಸಮಾಜ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26674697,
ಆಲ್ ಇಂಡಿಯಾ ವುಮೆನ್ಸ್ ಕಾನ್ಫೋರೆನ್ಸ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26349676.
ಬಸವ ಸಮಿತಿ, ಬಸವ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ:080&22723355,
ವಿಶಾಲ್ ವಿದ್ಯಾ ಸಂಸ್ಥೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ:9341289653.
ಕರ್ನಾಟಕ ರೂರಲ್ ಪೂರ್ ಆಂಡ್ ಹ್ಯಾಂಡಿಕ್ಯಾಪ್ಡ್ ಡೆವೆಲಪ್ ಮೆಂಟ್ ಸೊಸೈಟಿ, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್, ಪೀನ್ಯಾ. ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯುನಿವರ್ಸಿಟಿ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&231604331,
ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&25634813,
ರೀಜಿನಲ್ ಇಂಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&23213243, 23218452.