ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಕ್ರಮ ಅಥವಾ ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸತ್ಯನಾರಾಯಣ ದೇವರ ಪೂಜೆ ಯಂತೂ ಕಡ್ಡಾಯವಾಗಿ ಇರುತ್ತದೆ.
ವಿಶೇಷ ಎಂದರೆ ಕರಾವಳಿಯ ಭೂತರಾಧನೆ, ನಾಗಾರಾಧನೆಯಂತೇ ಸತ್ಯನಾರಾಯಣ ಪೂಜೆ ಕೂಡ ವಿಶಿಷ್ಟ ಪೂಜೆ,ಆರಾಧನೆಯಾಗಿ ಗಮನ ಸೆಳೆಯುತ್ತದೆ. ಪೂಜೆಯ ಸಮಯದಲ್ಲಿ ಮಾಡುವ ಪ್ರಸಾದವಂತೂ ಎಲ್ಲರಿಗೂ ಬಹಳ ಪ್ರಿಯ.
Kudla City
ಶಾಲೆ,ಕಾಲೇಜಿಗೆ ಮತ್ತೆ ಮಳೆಯ ರಜೆ ಆರಂಭ
ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಜು.23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡೆಂಗೆಗೆ ಅಡುಗೆ ಮನೆಯಲ್ಲಿದೆ ಮದ್ದು !
ಕುಡ್ಲದಲ್ಲಿ ಡೆಂಗೆಯಿಂದ ಈಗಾಗಲೇ ಐವರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ ಆದರೆ ಬಹಳಷ್ಟು ಮಂದಿಗೆ ಈ ರೋಗ ಬರುವುದಕ್ಕಿಂತ ಮೊದಲೇ ಎಚ್ಚರವಾದರೆ ಇದೆಲ್ಲವೂ ನಡೆಯುತ್ತಿರಲಿಲ್ಲ.
ಹೌದು. ಡೆಂಗೆಯ ಸೊಳ್ಳೆ ಯಿಂದ ಪಾರಾಗಲು ಅಡುಗೆಮನೆಯಲ್ಲಿ ಇರುವ ತೆಂಗಿನ ಎಣ್ಣೆ, ಕಹಿಬೇವಿನ ಆಯಿಲ್, ನೀಮ್ ಗ್ರಾಸ್ ಆಯಿಲ್ ಸೇರಿದಂತೆ ಮಾರ್ಕೆಟ್ ನಲ್ಲಿ ಸಿಗುವ ಕ್ರೀಮ್ ಗಳನ್ನು ಕೈ ಕಾಲುಗಳಿಗೆ ಉಜ್ಜಿಕೊಂಡು ನಂತರ ಹೊರಗಡೆ ಹೋದರೆ ಯಾವುದೇ ಸೊಳ್ಳೆ ಕೂಡ ಹತ್ತಿರಕ್ಕೆ ಸುಳಿಯಲಾರದು.
ಕುಡ್ಲ ಸಿಟಿಯೊಳಗೆ ಮೀನು ಹಿಡಿಯುವ ಜಾತ್ರೆ
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ಭಾನುವಾರ ಮೀನುಗಾರಿಕೆ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.
ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‌ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು, ಮುಗಿಯುವ ತನಕ ಸಾರ್ವಜನಿಕ ಹರಾಜು ಹಾಕುವ ಕಾರ‍್ಯನೂ ಜತೆಯಾಗಿ ಸಾಗಿತು. ಸಾಕಷ್ಟು ಉತ್ಸಾಹಭರಿತ ಯುವಕರ ತಂಡಗಳು ಮೀನು ಹಿಡಿಯುವ ಸ್ಪರ್ಧೆಯಲ್ಲೂ ಕಾಣಿಸಿಕೊಂಡು ಭಾನುವಾರದ ವೀಕ್ ಎಂಡ್‌ನ ಪ್ರಯೋಜನ ಪಡೆದರು.
ಕುಡ್ಲದಲ್ಲಿ ಸೊಳ್ಳೆ ಉತ್ಪಾದನೆ ಗೆ ಭರ್ಜರಿ ದಂಡ
ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರಪಾಲಿಕೆ ಅಧಿಕಾರಿಗಳು, ಶನಿವಾರ ಹಳೇ ಟಯರ್‍ಗಳಲ್ಲಿ ನೀರು ನಿಂತು ರೋಗಕ್ಕೆ ನೀಡುತ್ತಿದ್ದ ವ್ಯಕ್ತಿಗೆ ರೂ. 5000 ದಂಡ ವಿಧಿಸಿದೆ.
ಕಣ್ಣೂರಿನ ವ್ಯಕ್ತಿಯೊಬ್ಬರು ತನ್ನ ಆವರಣದಲ್ಲ ಹಳೆಯ ಟಯರ್‍ಗಳನ್ನು ಇಟ್ಟಿದ್ದು, ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ವ್ಯಕ್ತಿಗೆ ರೂ. 5000 ದಂಡ ಸ್ಥಳದಲ್ಲೇ ವಿಧಿಸಿ, ಎಚ್ಚರಿಕೆ ನೀಡಿದರು.