ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 111 ರನ್ ಗಳನ್ನು ಸಿಡಿಸುವ ಮೂಲಕ ವಿಶ್ವ ಕಪ್ ನಲ್ಲಿ ತನ್ನ ಮೊದಲ ಶತಕ ದಾಖಲಿಸಿಕೊಂಡರು. ಅವರು ಬೇಸಿಕಲಿ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಶತಕದ ಮೂಲಕ ವಿಶ್ವಕಪ್ ನಲ್ಲಿ ಭಾರತಕ್ಕೆ ಗೆಲುವಿನ ದಡ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
Tagged: Kudla
ಕುಡ್ಲದ ಜನರಿಗೆ ಮಾತ್ರ ಗೊತ್ತು ಈ ಎಣ್ಣೆ
ಯಾವುದೇ ಕೈ ಕಾಲು ನೋವು ಇರಲಿ ಕಡೆಂಜಿ ತ್ಯಾಂಪಣ್ಣ ಭಂಡಾರಿ ಅವರ ಎಣ್ಣೆಯನ್ನು ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ನಿಧಾನವಾಗಿ ಬಿಸಿ ನೀರಿನ ಶಾಕ ಕೊಡುತ್ತಾ ಹೋದರೆ ಸಾಕು ನೋವು ಮಂಗ ಮಾಯವಾಗಿ ಬಿಡುತ್ತದೆ. ಇದೇ ಕಾರಣದಿಂದ ಈ ಎಣ್ಣೆಯ ಕುರಿತು ಕುಡ್ಲದ ಜನರಿಗೆ ಬಹಳಷ್ಟು ತಿಳಿದಿದಿದೆ.
ಕುಡ್ಲದ ಮಳೆಗಾಲದ ಡಿಶ್ ಪತ್ರೊಡೆ
ಕುಡ್ಲ ಅದರಲ್ಲೂ ಕರಾವಳಿಯಲ್ಲಿ ಮಳೆರಾಯನ ಎಂಟ್ರಿಯಾಗುತ್ತಿದ್ದಂತೆ ಕೆಸುವಿನ ಎಲೆಯ ಪತ್ರೊಡೆ ನೆನಪಿಗೆ ಬರುತ್ತದೆ. ಕರಾವಳಿ ಎಲ್ಲರಿಗೂ ಇದನ್ನು ಮಾಡುವ ಹಾಗೂ ತಿನ್ನುವ ವಿಚಾರ ಗೊತ್ತಿದೆ. ಕರಾವಳಿಯ ಒಂದೊಂದು ಊರಿನವರು ಒಂದೊಂದು ರೀತಿಯಲ್ಲಿ ಪತ್ರೊಡೆ ಮಾಡುತ್ತಾರೆ ಎಲ್ಲಕ್ಕೂ ಒಂದೇ ರೀತಿಯ ಟೇಸ್ಟ್ ಮಾರಾಯ್ರೆ. ಮಳೆಗಾಲದ ಎಂಟ್ರಿ ಅಗುತ್ತಾ ಕೆಸುವಿನ ಎಲೆಗಳು ಸಮೃದ್ಧ ವಾಗಿ ಬೆಳೆಯುತ್ತದೆ. ಇದು ಬರೀ ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯದ ಮಲೆನಾಡಿನಲ್ಲೂ ಇದನ್ನು ಮಾಡುತ್ತಾರೆ. ಮಂಗಳೂರಿನ ಕೆಲವು ಖ್ಯಾತ ಹೋಟೆಲ್ ಗಳು ಇದನ್ನು ವರ್ಷವಿಡೀ ಮಾಡುವ ಮೂಲಕ ಗ್ರಾಹಕರಿಗೆ ವರ್ಷಪೂರ್ತಿ ಪತ್ರೊಡೆ ತಿನ್ನಿಸುವ ಕೆಲಸ ಮಾಡುತ್ತಿದೆ ಆದರೆ ಮಳೆ ಬಂದಾಗ ಮನೆಯ ಅಡುಗೆ ಕೋಣೆಯಲ್ಲಿ ಸಿದ್ದವಾಗುವ ಪತ್ರೊಡೆ ಮುಂದೆ ಯಾವುದು ಲೆಕ್ಕಕ್ಕೆ ಇಲ್ಲ ಬಿಡಿ.
20 ದಿನದಲ್ಲಿ 77,475 ಗಿಡ ನೆಟ್ಟವರ ಕತೆಯಿದು !
ಒಂದಲ್ಲ ಎರಡಲ್ಲ ಬರೋಬರಿ 20 ದಿನಗಳಲ್ಲಿ 77,475 ಗಿಡಗಳನ್ನು ನೆಟ್ಟು ಹಸಿರು ಇಳೆಗೆ ಸಾಕ್ಷಿಯಾದರು. ಹೌದು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 124 ಚರ್ಚ್ ಗಳಲ್ಲಿ ನಡೆದ ಕಾರ್ಯಕ್ರಮ ವಿದು.
ಲಾವ್ದಾತೋ ಸಿ ಭಾನುವಾರ ಜೂ.30 ರಂದು ನಡೆಯಿತು. ಅದಕ್ಕೂ ಮೊದಲು ಅಂದರೆ ಜೂ.10 ರಿಂದ ಭಾನುವಾರದ ವರೆಗೆ ಈ ಹಸಿರಿನ ಅಭಿಯಾನ ನಡೆದಿದೆ.
ವಿಶ್ವದಲ್ಲಿಯೇ ಕುಡ್ಲ ಸೇಫ್ ಸಿಟಿ
ಅಮೆರಿಕದ ಚಿಕಾಗೊ ಮೂಲದ ’ಟ್ರಿಬ್ಯೂನ್’ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೈಲಿ ಮೇಲ್’ ಎಂಬ ಪ್ರವಾಸ ಹಾಗೂ ಆಹಾರ ಕುರಿತ ವೆಬ್‌ಸೈಟ್ 2018ರ ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದಲ್ಲಿ ಮಂಗಳೂರು 31ನೇ ಸ್ಥಾನ ಪಡೆದಿದೆ. ವೆಬ್‌ಸೈಟ್ ಪ್ರಕಾರ ಸುರಕ್ಷತೆಯ ವಿಷಯದಲ್ಲಿ ಕಡಲ ನಗರಿ ಮಂಗಳೂರು ಎಂದಿಗೂ ಸೇಫ್ ಸಿಟಿ ಎನ್ನುವ ಖ್ಯಾತಿ ಪಡೆದುಕೊಂಡಿದೆ. ವಿಶೇಷವಾಗಿ ವಿಶ್ವದ 50 ಪಟ್ಟಿಯಲ್ಲಿ ಮಂಗಳೂರು ಬಂದಿರೋದು ಇಲ್ಲಿನ ಮಂದಿಗೆ ಹೆಮ್ಮೆಯ ವಿಚಾರ ಎನ್ನಬಹುದು.