ಮಾನ್ಸೂನ್ ಮಳೆ ಆರಂಭವಾಗುತ್ತಿದ್ದಂತೆ ಚಿಟ್ಟೆಗಳ ರಂಗೀನ್ ಬದುಕು ತೆರೆದು ಬಿಡುತ್ತದೆ. ಪುಟ್ಟ ಪುಟ್ಟ ಬಣ್ಣದ ಚಿಟ್ಟೆಗಳು ರೆಕ್ಕೆ ಬಿಚ್ಚಿಕೊಂಡು ಹೂವಿನಿಂದ ಹೂವಿಗೆ ಹಾರುವ ದೃಶ್ಯ ವನ್ನು ಕಣ್ಣಾರೆ ಕಾಣಬೇಕು.
ಚಿಟ್ಟೆಗಳ ಬದುಕಿನ ಶೈಲಿ, ವಿಧಾನ ಗಳನ್ನು ತಿಳಿದು ಕೊಳ್ಳುವ ಆಸಕ್ತಿ ಇಟ್ಟುಕೊಂಡವರು ಕಡ್ಡಾಯವಾಗಿ ಮೂಡುಬಿದಿರೆ ಯಿಂದ ಬೆಳುವಾಯಿ ಕಡೆಗೆ ಸಾಗುವಾಗ ಸಮ್ಮಿಲನ್ ಶೆ ಟ್ಟಿ ಅವರ ಚಿಟ್ಟೆ ಪಾರ್ಕ್ ಗೆ ಭೇಟಿ ನೀಡಲೇ ಬೇಕು. ಬೆಳಗ್ಗೆ 8 ರಿಂದ ಮಧ್ಯಾಹ್ನ1 ರ ವರೆಗೆ ಭೇಟಿ ನೀಡಬಹುದು…ಹೆಚ್ಚಿನ ಮಾಹಿತಿಗೆ ಸಮ್ಮಿಲನ್ ಶೆಟ್ಟಿ ಅವರನ್ನು ಸಂಪರ್ಕಿಸಿ 9845993292
Tagged: kudlacity
ಶ್ರೀಕೃಷ್ಣ ನಿಗೆ ಅರ್ಪಿಸಿದ ತುಳಸಿಯೇ ಮೆಡಿಸಿನ್
ಉಡುಪಿ ಶ್ರೀ ಕೃಷ್ಣ ನಿಗೆ ನಿತ್ಯವೂ ಅರ್ಪಿಸುವ ಲಕ್ಷ ಲಕ್ಷ ತುಳಸಿ ಈಗ ಆಯುರ್ವೇದ ಕಂಪನಿಯೊಂದು ಔಷಧವಾಗಿ ಬದಲಾಯಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ತುಳಸಿಯ ಕಫ ಸಂಬಂಧಿಸಿದ ಔಷಧ,ನಶ್ಯ,ಸಿರಪ್ ಗಳನ್ನು ಮಾಡುತ್ತಿದೆ. ದಿನಕ್ಕೆ 10 ಕೆಜಿ ತುಳಸಿಯನ್ನು ನಾನಾ ವಿಧಾನವನ್ನು ಬಳಸಿಕೊಂಡು ಮಾಡುವ ಮೂಲಕ ದೇವರಿಗೆ ಬಳಸಿದ ತುಳಸಿಯನ್ನು ಔಷಧೀಯವಾಗಿ ಯೂ ಬಳಸಿಕೊಳ್ಳುವ ಕೆಲಸ ಬಹಳ ಒಳ್ಳೆಯದು.
ಕುಡ್ಲದ ಪಿಜಿ,ಹಾಸ್ಟೆಲ್ ಗಳ ಮೇಲೆ ಕಮೀಶನರ್ ಕಣ್ಣು
ಕುಡ್ಲದಲ್ಲಿ ಪಿಜಿ, ಹಾಸ್ಟೆಲ್ ಹಾಗೂ ಬಾಡಿಗೆಗೆ ಮನೆ ಕೊಡುವ ಮಂದಿ ಹಾಗೂ ಅದರಲ್ಲಿ ವಾಸ ಇರುವ ಮಂದಿ ಇನ್ನು ಮುಂದೆ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಅವರ ಪೂರ್ಣ ಮಾಹಿತಿ ನೀಡೋದು ಕಡ್ಡಾಯ ವಾಗಲಿದೆ. ಮಂಗಳೂರು ಪೊಲೀಸ್ ಕಮೀಷನರ್ ಈಗಾಗಲೇ ಈ ಕುರಿತು ಖಡಕ್ ಸೂಚನೆ ನೀಡುವ ಮೂಲಕ ಕುಡ್ಲ ಮತ್ತಷ್ಟು ಸೇಫ್ ಝೋನ್ ಗೆ ಇಳಿಸುವ ಕೆಲಸ ಮಾಡುತ್ತಿದ್ದಾರೆ. ಕಮೀಷನರ್ ಸಂದೀಪ್ ಪಾಟೀಲ್ ಸಾಹೇಬ್ರ ಕೆಲಸಕ್ಕೆ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಕುಡ್ಲದಲ್ಲಿ ಮಾತ್ರ ಸ್ಟೇಟ್ ಬ್ಯಾಂಕ್ ನಲ್ಲಿ ಮೀನು ಸಿಗುತ್ತೆ!
ಕುಡ್ಲದ ವಿಶೇಷ ಗಳಲ್ಲಿ ಒಂದು ಎಂದು ಪರಿಗಣಿಸಿದರೆ ಮಂಗಳೂರಿನ ಮೀನು ಪ್ರಿಯರು ಅರ್ಜೆಂಟ್ ಆಗಿ ಮೀನು ತರಬೇಕಾದರೆ ಸ್ಟೇಟ್ ಬ್ಯಾಂಕ್ ಗೆ ಹೋಗಬೇಕು. ವಿಶ್ವದ ಯಾವ ಭಾಗದಲ್ಲೂ ಇಂತಹ ವಿಚಾರ ಕಾಣಸಿಗದು.
ವಿಶೇಷವಾಗಿ ಕುಡ್ಲದ ಜನರಿಗೆ ಈ ಕುರಿತು ಯಾವುದೇ ಗೊಂದಲ ಇಲ್ಲ. ಕಾರಣ ಈ ವಿಚಾರ ಅವರಿಗೆ ಹೊಸತಲ್ಲ ಆದರೆ ಕುಡ್ಲ ಬಿಟ್ಟು ಉಳಿದ ಮಂದಿಯ ಗಮನಕ್ಕೆ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಅಲ್ಲಿದ್ದ ಕಾರಣ ಅದಕ್ಕೆ ಈ ಹೆಸರು ಹುಟ್ಟಿತು ಎನ್ನಲಾಗುತ್ತಿದೆ. ಇದರ ಮೂಲ ಹೆಸರು ಏನಿತ್ತು ಎನ್ನುವುದು ಇಲ್ಲಿಯ ಹಿರಿಯರಿಗೆ ಗೊತ್ತಿದೆ. ಹೊಸ ಪೀಳಿಗೆಯ ಮಕ್ಕಳಿಗೆ ಅದು ಸ್ಟೇಟ್ ಬ್ಯಾಂಕ್ ಮಾತ್ರ ಅವರಿಗೆ ಅಲ್ಲಿ ಮೀನು ಜತೆಯಲ್ಲಿ ಬಸ್ ಸಿಗುವ ತಾಣವಷ್ಟೇ.
ಕುಡ್ಲದವರಿಗೆ ಕುಚಲಕ್ಕಿ ಊಟವೇ ಮೃಷ್ಟಾನ್ !
ಕುಡ್ಲದ ಜನರು ಯಾವುದೇ ಮೂಲೆಗೆ ಹೋದರು ಕೂಡ ಅವರಿಗೆ ಕುಚಲಕ್ಕಿಯ ಊಟ ಇಲ್ಲದೇ ಏನೋ ಒಂಥರ ಸಂಕಟ ಆವರಿಸಿಕೊಂಡು ಬಿಡುತ್ತದೆ. ಊಟದ ತಟ್ಟೆಯಲ್ಲಿ ಬಿರಿಯಾನಿ ಇದ್ರು ಅದನ್ನು ಪಕ್ಕಕ್ಕೆ ಸರಿಸಿ ಕುಚಲಕ್ಕಿ ಊಟ ಉಂಡಾ ಮಾರಾಯ್ರೆ ಎಂದು ಯಾವುದೇ ಮೂಲಾಜು ಇಲ್ಲದೇ ಕೇಳಿ ಬಿಡುತ್ತಾರೆ.




