ಮಂಗಳೂರಿನ ಎಲ್ಲ ಬೀಚ್‌ಗಳು ಸುಂದರ ಎನ್ನುವ ಮಾತಿನಿಂದ ಆರಂಭಿಸುವುದಾದರೆ ತಣ್ಣೀರು ಬಾವಿ ಬೀಚ್ ಎಲ್ಲಕ್ಕಿಂತ ಹೆಚ್ಚು ಸುಂದರ ಎನ್ನುವುದು ಲೋಕಲ್ ಜತೆಗೆ ವಿದೇಶಿ ಪ್ರವಾಸಿಗರ ಮಾತು.
ಇಲ್ಲಿನ ಸೌಂದರ್ಯತೆಗೆ ಬಹುಮುಖ್ಯವಾದ ಕಾರಣಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲದೇ ಹೋದರೂ ಪ್ರೇಮಿಗಳಿಂದ ಹಿಡಿದು ಕುಟುಂಬ ವರ್ಗಕ್ಕೂ ಈ ಬೀಚ್ ಇಷ್ಟವಾಗುವಂತಿದೆ.
ತಣ್ಣನೆಯ ಗಾಳಿ ಅಲೆಗಳ ಅಬ್ಬರದೊಳಗೆ ಮುಳುಗುವ ಸೂರ್ಯನ ಬಿಂಬವನ್ನು ಕಾಣಬೇಕಾದರೆ ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡಿ. ವಿಶೇಷವಾಗಿ ಬಸ್‌ಗಳ ಸೌಕರ್ಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೇ ಹೋದರೂ ಕೂಡ ಸುಲ್ತಾನ್ ಬತ್ತೇರಿಯ ಮೂಲಕ ಪ್ರಯಾಣಿಕರ ಹಡಗಿನ ಮೂಲಕ ಹೋಗಬಹುದು. ಸ್ವಂತ ವಾಹನ ಇದ್ದರೆ ಕೂಳೂರು ಕಡೆಯಿಂದ ತಣ್ಣೀರು ಬಾವಿ ಬೀಚ್‌ಗೆ ಪ್ರಯಾಣ ಬೆಳೆಸಬಹುದು.
Tagged: kudlanews
ಪಿಲಿಕುಳದ ಪ್ರಾಣಿ, ಪಕ್ಷಿಗಳಿಗೆ ಫ್ಯಾನ್ ಟ್ರೀಟ್‌ಮೆಂಟ್
ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈಗ ಪ್ರಾಣಿ, ಪಕ್ಷಿಗಳಿಗೆ ಈಗ ಯಾಂತ್ರೀಕೃತ ಫ್ಯಾನ್‌ಗಳ ಆಹ್ಲಾದಕರ ಗಾಳಿ, ಜತೆಗೆ ಅಲ್ಲಲ್ಲಿ ತಣ್ಣೀರ ಸಿಂಚನದ ಖುಷಿ… ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮನುಷ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸೆಕೆ ತಡೆಯಲಾಗುತ್ತಿಲ್ಲ. ಹೀಗಾಗಿ ಪಿಲಿಕುಳ ಉದಾನವನದಲ್ಲಿರುವ ಪ್ರಾಣಿಗಳಿಗೆ ಬಿಸಿಲಿನ ತಾಪ ತಣಿಸಲು ಫ್ಯಾನ್, ನೀರು ಸಿಂಪಡಣೆ, ಜತೆಯಲ್ಲಿ ಶೀಟ್‌ಗಳಿಗೆ ಬಿಳಿ ಪೈಂಟ್ ಬಳಿಯುವ ಮೂಲ ಹೊಸ ಪ್ರಯತ್ನವನ್ನು ಮಾಡಲಾಗುತ್ತಿದೆ.
ಕದ್ರಿ ಬ್ರಹ್ಮಕಲಶಕ್ಕೆ ರಿಕ್ಷಾ ಚಾಲಕರ ವಿಶಿಷ್ಟ ಸೇವೆ
ವಿಶ್ವಹಿಂದೂ ಪರಿಷತ್ ಬಜರಂಗದಳ ಆಟೋ ಚಾಲಕರ ಮಾಲಕರ ಘಟಕ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ಬ್ರಹ್ಮಕಲಶದ ಅಂಗವಾಗಿ ಮೇ 9 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಉಚಿತ ಆಟೊರಿಕ್ಷಾ ಸೇವೆ ಸಿಗಲಿದೆ.
ಘಟಕದ ನೂರು ರಿಕ್ಷಾ ಚಾಲಕರು ಕೆಪಿಟಿ ಬಳಿಯಿಂದ, ಬಂಟ್ಸ್ ಹಾಸ್ಟೆಲ್‌ನಿಂದ, ಮಲ್ಲಿಕಟ್ಟೆಯಿಂದ ದೇವಸ್ಥಾನಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುವ ಹಾಗೂ ದೇವಸ್ಥಾನದಿಂದ ಸಮೀಪದ ಬಸ್ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.
ಈ ಮೂಲಕ ಮಂಗಳೂರಿನ ರಿಕ್ಷಾ ಚಾಲಕರು ಕದ್ರಿ ಶ್ರೀಮಂಜುನಾಥ ದೇವರ ಭಕ್ತರಿಗೆ ಪ್ರೀತಿಯ ಸೇವೆ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿದ್ದಾರೆ.
ಕುಡ್ಲದ ಫಿಮೇಲ್ ಫೋಟೋಗ್ರಾಫರ್ ಗೆದ್ದ ಫ್ರೈಜ್
ಪುರುಷರೇ ಪ್ರಾಧಾನ್ಯತೆ ವಹಿಸಿರುವಂತಹ ಸೃಜನಶೀಲ ಕಲೆ ಛಾಯಾಗ್ರಹಣ. ಇದರಲ್ಲಿ ಈಗೀಗೀಲಷ್ಟೆ ಮಹಿಳೆಯರು ವೈವಾಹಿಕ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇದರ ನಡುವೆ ನಮ್ಮ ಕುಡ್ಲದ ಛಾಯಾಗ್ರಾಹಕಿ ರೊವಿನಾ ಬ್ರಿಟ್ಟೊ ಪ್ರತಿಷ್ಟಿತ ವೆಡ್ಡಿಂಗ್ ಸೂತ್ರ ಫೋಟೊಗ್ರಫಿ ಅವಾರ್ಡ್ 2019 ಪಡೆದಿದ್ದಾರೆ. ಹೌದು ಮಂಗಳೂರಿನ ಕ್ಯಾಮರೋನ್ ಸ್ಟುಡಿಯೋ ರೊವಿನಾ ಬ್ರಿಟ್ಟೊ ಪ್ರಿ ವೆಡ್ಡಿಂಗ್ ಫಿಲಂಸ್ ಆ್ಯಂಡ್ ಆಲ್ಬಂ ಡಿಸೈನ್ ವಿಭಾಗದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವುದರ ಮೂಲಕ ಈ ಸಾಧನೆ ಮಾಡಿದ್ದಾರೆ.
ಅಂದಹಾಗೆ ಕುಡ್ಲದ ರೊವಿನಾ ಬ್ರಿಟ್ಟೋ ಬೇಸಿಕಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ವಾಮಂಜೂರಿನ ಸಂತ ಜೋಸೆಫ್‌ನಲ್ಲಿ ಎಂಜಿನಿಯರ್ ಮುಗಿಸಿಕೊಂಡು ತಮ್ಮ ಹವ್ಯಾಸವಾದ ಫೋಟೋಗ್ರಾಫಿಯಲ್ಲಿಯೇ ಮಿಂಚಿದವಳಿಗೆ ಈಗ ಪ್ರಶಸ್ತಿ ಸಿಕ್ಕಿದೆ. ಇದು ಕುಡ್ಲದ ಹುಡುಗಿಯ ಸಾಧನೆಗೆ ಸಿಕ್ಕ ಪ್ರಶಸ್ತಿ.
ಅಕ್ಷಯ ತೃತೀಯದಲ್ಲಿ ಚಿನ್ನಕ್ಕೆ ಯಾಕೆ ಡಿಮ್ಯಾಂಡ್ ?
ಅಕ್ಷಯ ತೃತೀಯ ಎಂಬುದು ಹೆಸರೇ ತಿಳಿಸುವಂತೆ ಆ ದಿನ ಕೈಗೊಂಡ ಕಾರ್ಯ ಅಕ್ಷಯ ಆಗುತ್ತದೆ. ಅಂದರೆ ಆ ದಿನದಂದು ಶಕ್ತ್ಯಾನುಸಾರ ಸುವರ್ಣವನ್ನು ದಾನ ಮಾಡಬೇಕು. ಯಾರಿಗೆ ದಾನ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು.
ಆ ದಿನ ನಾವು ಚಿನ್ನ ಖರೀದಿಸಿ, ನಾವೇ ಧರಿಸಬೇಕು ಎಂಬ ಉಲ್ಲೇಖ ಏನಿಲ್ಲ. ಅಂದು ದೇವತಾ ಕಾರ್ಯಗಳಿಗೆ, ದಾನಗಳಿಗೆ ಬಹಳ ಪ್ರಾಶಸ್ತ್ಯ. ಎಷ್ಟು ಶ್ರದ್ಧೆ-ಭಕ್ತಿಯಿಂದ ಅವೆಲ್ಲವನ್ನೂ ಮಾಡುತ್ತೀರೋ ಆ ಫಲಗಳು ಅಷ್ಟು ಅಕ್ಷಯ ಆಗುತ್ತವೆ.