ರುಕ್ಮಯ್ಯ ಮೂಲ್ಯ ಅವರು ಮಂಗಳೂರು ಸುರತ್ಕಲ್ ನ ಪಾವಂಜೆ ಅವರು ಈಗ ಅವರಿಗೆ 9೦ರ ಹರೆಯ ಇನ್ನು ಅವರ ಕೃಷಿ ಪ್ರೀತಿ ಕುಗ್ಗಿಲ್ಲ. ಈಗಲೂ ಮುಂಜಾನೆ 4ಕ್ಕೆ ಎದ್ದು ಗದ್ದೆಯ ಕೆಲಸದಲ್ಲಿ ತಲ್ಲೀನರಾಗುತ್ತಾರೆ. ಇವರ ಕೃಷಿ ಪ್ರೀತಿಗೊಂದು ಸಲಾಂ
Tagged: kudla news
ಜಗತ್ತಿನ ಒಂದೇ ಚರ್ಚ್ ನಲ್ಲಿ ತುಳುವಿನಲ್ಲಿ ಪ್ರಾರ್ಥನೆ
ಕರಾವಳಿಯಲ್ಲಿ ಅದರಲ್ಲೂ ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಪೂಜಾ ವಿಧಿಗಳು ಸಾಮಾನ್ಯವಾಗಿ ಕೊಂಕಣಿ ಭಾಷೆಯಲ್ಲೇ ನಡೆಯುವುದು ಹೆಚ್ಚು. ಕೆಲವೊಂದು ಸಲ ಕನ್ನಡ, ಇಂಗ್ಲೀಷ್ ಭಾಷೆಯಲ್ಲೂ ಪೂಜಾವಿಧಿ ನಡೆಯುವುದಿದೆ.
ಆದರೆ ತುಳು ಭಾಷೆಯಲ್ಲಿ ಮಾತ್ರ ಪೂಜಾ ವಿಧಿ ನಡೆಸುವುದು ಜಗತ್ತಿನ ಯಾವುದೇ ಮೂಲೆಯಲ್ಲೂ ಇಲ್ಲ. ಆದರೆ ಪಾವೂರು ಹೋಲಿ ಕ್ರಾಸ್ ಚರ್ಚ್ ತುಳು ಭಾಷೆಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದು, ಇದು ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ತುಳುವರ ಒತ್ತಾಯಕ್ಕೊಂದು ಬೆಂಬಲದಂತಿದೆ.
ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಹಾಗೂ ತುಳುವೇತರರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕನ್ನಡದಲ್ಲಿ ಪೂಜೆಯ ಹೊರತಾಗಿ ಉಳಿದಂತೆ ವರ್ಷವಿಡೀ, ವಾರದ ಪೂಜೆ, ಸಭೆ, ಸಮಾರಂಭ, ಮದುವೆ, ಸಾವು, ತಿಂಗಳ ಪೂಜೆ, ವರ್ಷದ ಪೂಜೆ, ಬಲಿ ಪೂಜೆ ಎಲ್ಲವೂ ಪಾವೂರು ಚರ್ಚ್‌ನಲ್ಲಿ ತುಳುವಿನಲ್ಲೇ ನಡೆಯುತ್ತಿದೆ.
ಹೀಗೆ ಸ್ಥಳೀಯ ಭಾಷೆಯೊಂದರಲ್ಲಿ ಪೂಜಾ ವಿಧಿ ವಿಧಾನ ನಿರ್ವಹಿಸುವ ಈ ಪದ್ಧತಿ ನಿನ್ನೆ ಮೊನ್ನೆ ಅಥವಾ ಕೆಲ ವರ್ಷಗಳ ಹಿಂದಿನಿಂದ ನಡೆದು ಬಂದ ಸಂಪ್ರದಾಯವಲ್ಲ. ಈ ಪರಿಪಾಠ ಬರೋಬರಿ 100 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ .
ಉತ್ತಮ ವಿದ್ಯಾರ್ಥಿಯ ಆಯ್ಕೆಗೆ ರೊಸಾರಿಯೋ
ರೊಸಾರಿಯೋ ಕಾಲೇಜು ಬರೀ ಉತ್ತಮ ಶಿಕ್ಷಣ ನೀಡುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ವಿಚಾರಕ್ಕಾಗಿ ರೆಡ್‌ಕ್ರಾಸ್, ಎನ್ನೆಸ್ಸೆಸ್ ಸೇರಿದಂತೆ ಹತ್ತಾರು ಕಾಲೇಜಿನಲ್ಲಿರುವ ವಿಭಾಗಗಳು ವಿದ್ಯಾರ್ಥಿಗಳು ಸಮಾಜದ ಉತ್ತಮ ಶಕ್ತಿಯಾಗಿ ಹೊರಬರಲು ಶ್ರಮ ವಹಿಸುತ್ತಿದೆ.
ಅದರಲ್ಲೂ ಮುಖ್ಯವಾಗಿ ಕಾಲೇಜಿನಲ್ಲಿರುವ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್ ಸೆಂಟರ್ ವಿದ್ಯಾರ್ಥಿಗಳ ಐಟಿ ಕನಸ್ಸಿಗೆ ಬಲ ನೀಡುವಂತಿದೆ. ಹೆಚ್ಚಿನ ಮಾಹಿತಿಗೆ ರೊಸಾರಿಯೋ ಕಾಲೇಜನ್ನು ಸಂಪರ್ಕಿಸಬಹುದು.