ಉಡುಪಿ ಶ್ರೀ ಕೃಷ್ಣ ನಿಗೆ ನಿತ್ಯವೂ ಅರ್ಪಿಸುವ ಲಕ್ಷ ಲಕ್ಷ ತುಳಸಿ ಈಗ ಆಯುರ್ವೇದ ಕಂಪನಿಯೊಂದು ಔಷಧವಾಗಿ ಬದಲಾಯಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ತುಳಸಿಯ ಕಫ ಸಂಬಂಧಿಸಿದ ಔಷಧ,ನಶ್ಯ,ಸಿರಪ್ ಗಳನ್ನು ಮಾಡುತ್ತಿದೆ. ದಿನಕ್ಕೆ 10 ಕೆಜಿ ತುಳಸಿಯನ್ನು ನಾನಾ ವಿಧಾನವನ್ನು ಬಳಸಿಕೊಂಡು ಮಾಡುವ ಮೂಲಕ ದೇವರಿಗೆ ಬಳಸಿದ ತುಳಸಿಯನ್ನು ಔಷಧೀಯವಾಗಿ ಯೂ ಬಳಸಿಕೊಳ್ಳುವ ಕೆಲಸ ಬಹಳ ಒಳ್ಳೆಯದು.
Tagged: health
ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ರೋಗಕ್ಕೆ ಪೂರ್ಣ ಪರಿಹಾರ
ಆಧುನಿಕ ಬದುಕಿನಲ್ಲಿ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಎಲ್ಲ ಕಾಯಿಲೆಗಳಿಗೂ ಪರಿಪೂರ್ಣ ರೀತಿಯಲ್ಲಿ ದೇಹ ಪ್ರಕೃತಿಗೆ ತಕ್ಕಂತಹ ಚಿಕಿತ್ಸೆ ನೀಡುವುದು ವೈದ್ಯಲೋಕಕ್ಕೆ ಸವಾಲು.
ಆದ್ರೆ ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಚಿಕಿತ್ಸೆ ನೀಡುವ ಮೂಲಕ ರೋಗಿಗಳಿಗೂ ತಮ್ಮ ಬಹುಕಾಲದ ರೋಗದಿಂದ ಮುಕ್ತಿ ಪಡೆದ ಭಾವ ಮೂಡಿಸುವ ಕೆಲಸವನ್ನು ಆಯುರ್ ಹೆಲ್ತ್ ಕ್ಲಿನಿಕ್ ಮಾಡುತ್ತಿದೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.
ಆರೋಗ್ಯ ಸಮಸ್ಯೆಗಳಿಗೆ ಆಯುರ್‌ನಲ್ಲಿ ಪರಿಪೂರ್ಣ ಚಿಕಿತ್ಸೆ
ಮನುಷ್ಯರಿಗೆ ಕಾಯಿಲೆ ಬರುವುದು ಸರ್ವೆ ಸಾಮಾನ್ಯ. ಆದರೆ ಮನುಷ್ಯರ ದೇಹ ಪ್ರಕೃತಿಗೆ ತಕ್ಕಂತೆ ಯಾವ ವಿಧಾನದಲ್ಲಿ ಯಾವ ಚಿಕಿತ್ಸೆ ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತೇ ಇರುವುದಿಲ್ಲ.
ಇದೇ ಕಾರಣದಿಂದ ವೈದ್ಯರ ಬಳಿಗೆ ರೋಗಿ ಹೋಗಿ ತನ್ನ ಕಾಯಿಲೆಗೆ ಚಿಕಿತ್ಸೆ ಪಡೆದರೂ ಕೂಡ ಪೂರ್ಣ ರೂಪದಲ್ಲಿ ಗುಣವಾಗುವುದಿಲ್ಲ. ಒಂದು ವೇಳೆ ಗುಣವಾದರೂ ಕೂಡ ಅದರ ಸೈಡ್ ಎಫೆಕ್ಟ್‌ಗಳನ್ನು ಅನುಭವಿಸಿಕೊಂಡು ಬದುಕು ದೂಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಆದರೆ ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.
ಅಡಕೆ ಹಾಳೆ ಟೋಪಿಯಲ್ಲಿ ಮೆಡಿಸಿನ್ ಪವರ್
ಅಡಕೆ ಹಾಳೆ ಟೋಪಿಗೆ ಅಂತಾರಾಷ್ಟ್ರ ಮಟ್ಟದ ಹೆಸರು ಸಲ್ಲುತ್ತಿದೆ. ಅಡಕೆ ಹಾಳೆ ಟೋಪಿಯಲ್ಲಿ ಔಷಧೀಯ ಗುಣಗಳ ಕುರಿತು ಅಧ್ಯಯನ ನಡೆಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವುದಕ್ಕಾಗಿ ಲಂಡನ್‌ನ ಪ್ರಮುಖ ಪರಿಸರ ವಿಜ್ಞಾನಿ ಗ್ಯಾರಿಡೆ ಲಾ ಪೊಮೆರೊಯಿನ್, ಮಹಾರಾಷ್ಟ್ರದ ಪುಣೆ ನಿವಾಸಿ, ಯುಎಸ್‌ನಲ್ಲಿರುವ ಸೆನ್ನಿವೆಲ್ ಕಂಪನಿ ಮಾಲೀಕ ಮುಗಧಾಮುಲ್ಲ ಅವರನ್ನು ಒಳಗೊಂಡ ತಂಡ ಜೂ. 29 ರಿಂದ ಜು.1ರ ತನಕ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಜಾಲ್ಸೂರಿಗೆಆಗಮಿಸಲಿದೆ.
ಪರಿಸರವಾದಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಡಾ. ಆರ್.ಕೆ.ನಾಯರ್ ಅವರ ಜಾಲ್ಸೂರಿನಲ್ಲಿರುವ ನಿವಾಸಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ದೇಶದ ೯ ರಾಜ್ಯಗಳಲ್ಲಿ 7 ಲಕ್ಷದಷ್ಟು ಸಸಿಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ ಡಾ. ಆರ್. ಕೆ.ನಾಯರ್. ಅವರಿಗೆ ನೇಪಾಳದಲ್ಲಿ ನೀಡಿದ ಸ್ವಾಗತ ಕಾರ‍್ಯಕ್ರಮದಲ್ಲಿ ಗ್ಯಾರಿಡಾ ಲಾ ಪೊಮೆರೊಯಿನ್ ಹಾಗೂ ಮುಗದಮುಲ್ಲಾ ಎಂಬವರ ಪರಿಚಯವಾಗಿದೆ. ಡಾ. ಆರ್.ಕೆ.ನಾಯರ್ ಅವರ ತಲೆಯಲ್ಲಿದ್ದ ಅಡಕೆ ಹಾಳೆಯ ಟೋಪಿಯನ್ನು ಸುಮಾರು 15 ನಿಮಿಷಗಳ ಕಾಲ ತಲೆ ಮೇಲಿಟ್ಟಾಗ ಉಂಟಾದ ಅನುಭವದ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಲು ಪ್ರೇರಣೆಯಾಗಿದೆ.
ಹಾಳೆ ಟೋಪಿ ಧರಿಸಿದರೆ ತಲೆನೋವು, ಕಣ್ಣು ನೋವು, ಸಂಧಿ ನೋವು, ಸ್ನಾಯು ಸೆಳೆತ ನಿವಾರಣೆಯಾಗುತ್ತದೆ ಎಂಬುದನ್ನು ಈಗಾಗಲೇ ನಡೆಸಿದ ಸಂಶೋಧನೆಯಿಂದ ತಿಳಿಯಲಾಗಿದೆ. ಮಾತ್ರವಲ್ಲ ಈ ಟೋಪಿ ಧರಿಸಿದರೆ ಒಳ್ಳೆಯ ನಿದ್ರೆ ಮಾಡಲು ಸಹ ಸಹಾಯವಾಗುತ್ತದೆ ಎಂಬುದೂ ಸಹ ಸಂಶೋಧನೆಯ ಮೂಲಕವೇ ಕಂಡುಕೊಳ್ಳಲಾಗಿದೆ. ಅಲ್ಲದೇ, ಮೊಬೈಲ್ ಟವರ್ ಗಳ ವಿಕಿರಣವನ್ನು ತಡೆಯಲುಈ ಹಾಳೆ ಟೋಪಿ ಧರಿಸಿದರೆ ಸಾಧ್ಯವಾಗುತ್ತದೆ ಎಂಬುದುಸಾಬೀತಾಗಿದೆ. ಮೆದುಳಿನ ಕಾರ‍್ಯಚಟುವಟಿಕೆ ನಿಯಂತ್ರಣದಲ್ಲೂಹಾಳೆಯ ಪರಿಣಾಕಾರಿಯಾಗಿದೆ.
ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹಾಳೆ ಟೋಪಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಬಯಲುಗಳಲ್ಲಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈಗಲೂ ಬಳಸುತ್ತಿದ್ದಾರೆ. ಕೃಷಿ ಸಂಬಂಧಿತ ನಾನಾ ಕಾರ‍್ಯಕ್ರಮಗಳಲ್ಲಿ ಈಗಲೂ ವೇದಿಕೆಯಲ್ಲಿ ಅತಿಥಿಗಳು ಹಾಳೆ ಟೋಪಿ ಧರಿಸುತ್ತಾರೆ.
ಮಾಂಸಹಾರಿಗಳು ಬಂಗುಡೆ ಮೀನನ್ನು ಯಾಕೆ ಜಾಸ್ತಿ ತಿನ್ನುತ್ತಾರೆ ಗೊತ್ತಾ..?
ಬಂಗುಡೆ ಮೀನಿನ ಖಾದ್ಯ, ಫ್ರೈ ಏನೇ ಮಾಡಲಿ ಎಲ್ಲವೂ ರುಚಿಕರ ಆದರೆ ಆರೋಗ್ಯ ವಿಚಾರದಲ್ಲೂ ಇದು ದೀ ಬೆಸ್ಟ್ ಮೆಡಿಸಿನ್ ಎನ್ನುವುದು ಬಹಳ ಮಂದಿ ಬಂಗುಡೆ ತಿನ್ನುವ ಮಂದಿಗೆ ಗೊತ್ತೇ ಇರಲು ಸಾಧ್ಯವಿಲ್ಲ.
ಕರಾವಳಿಯ ಕಡಲೂರಿನ ಮಕ್ಕಳು ಬಂಗುಡೆ, ಬೂತಾಯಿ ಮೀನನ್ನು ಅತೀ ಹೆಚ್ಚು ತಿನ್ನುತ್ತಾರೆ. ಬಂಗುಡೆಯ ಲಾಭ ಇಲ್ಲಿದೆ ನೋಡಿ. ಇದು ಕೂದಲಿನ ಆರೋಗ್ಯ ಕಾಪಾಡುತ್ತದೆ. ಚರ್ಮವನ್ನು ರಕ್ಷಿಸುತ್ತದೆ. ವಯಸ್ಸಿಗೆ ಸಂಬಂಧಿಸಿರುವಂತಹ ಅಕ್ಷಿಪಟಲದ ಅವನತಿ ತಡೆಯುತ್ತದೆ.
ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ದೀರ್ಘಕಾಲದ ಕಾಯಿಲೆಗಳನ್ನು ತಡೆಯುವ ಮತ್ತು ಮೂಳೆಯ ಆರೋಗ್ಯ ವೃದ್ಧಿಸುತ್ತದೆ.




