Tagged: mangalorecity

ಅಕ್ಷಯ ತೃತೀಯದಲ್ಲಿ ಚಿನ್ನಕ್ಕೆ ಯಾಕೆ ಡಿಮ್ಯಾಂಡ್ ?

ಅಕ್ಷಯ ತೃತೀಯ ಎಂಬುದು ಹೆಸರೇ ತಿಳಿಸುವಂತೆ ಆ ದಿನ ಕೈಗೊಂಡ ಕಾರ್ಯ ಅಕ್ಷಯ ಆಗುತ್ತದೆ. ಅಂದರೆ ಆ ದಿನದಂದು ಶಕ್ತ್ಯಾನುಸಾರ ಸುವರ್ಣವನ್ನು ದಾನ ಮಾಡಬೇಕು. ಯಾರಿಗೆ ದಾನ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು.
ಆ ದಿನ ನಾವು ಚಿನ್ನ ಖರೀದಿಸಿ, ನಾವೇ ಧರಿಸಬೇಕು ಎಂಬ ಉಲ್ಲೇಖ ಏನಿಲ್ಲ. ಅಂದು ದೇವತಾ ಕಾರ್ಯಗಳಿಗೆ, ದಾನಗಳಿಗೆ ಬಹಳ ಪ್ರಾಶಸ್ತ್ಯ. ಎಷ್ಟು ಶ್ರದ್ಧೆ-ಭಕ್ತಿಯಿಂದ ಅವೆಲ್ಲವನ್ನೂ ಮಾಡುತ್ತೀರೋ ಆ ಫಲಗಳು ಅಷ್ಟು ಅಕ್ಷಯ ಆಗುತ್ತವೆ.

ಸ್ವಚ್ಛ ಮನಸ್ಸಿನಿಂದ ಮೂಡಿತು ಮಕ್ಕಳ ಪಾರ್ಕ್

ಪಾಂಡೇಶ್ವರ ಪೋಲಿಸ್ ಲೇನ್ ನಲ್ಲಿರುವ ಚಿಣ್ಣರ ಪಾರ್ಕ್ ಹಲವು ದಿನಗಳಿಂದ ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದ ಸ್ಥಿತಿಯಲ್ಲಿತ್ತು.
ಇದೀಗ ಅದನ್ನು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಡಿಯಲ್ಲಿ ಇದನ್ನು ನವೀಕರಣಗೊಳಿಸಲಾಗಿದೆ. ಇಲ್ಲಿ ಒಂದು ಕಾಲದಲ್ಲಿ ಕಸವೇ ಹಾಕಿ ಈ ಪ್ಲೇಸ್ ಗಬ್ಬು ನಾರುತ್ತಿತ್ತು. ಈಗ ಅದು ಮಕ್ಕಳ ಪಾರ್ಕ್ ಆಗಿ ಬದಲಾಗಿದೆ. ಮಂಗಳೂರಿನ ಸ್ವಚ್ಛ ಮನಸ್ಸಿನಿಂದ ಈಗ ಉತ್ತಮ ಪಾರ್ಕ್‌ವೊಂದು ನಿರ್ಮಾಣವಾಗಿದೆ ಎನ್ನೋದು ಖುಷಿಯ ವಿಷ್ಯಾ.

ಉಪವಾಸದ ಸಮಯದಲ್ಲಿ ಮುಸ್ಲಿಂಮರು ಯಾಕೆ ಸಮೋಸ ತಿನ್ನುತ್ತಾರೆ ?

ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ತಿಂಗಳು ಆರಂಭವಾಗುತ್ತಿದ್ದಂತೆ ಮತ್ತೊಂದೆಡೆ ಸಮೋಸಗಳಿಗೂ ಬೇಡಿಕೆ ಹುಟ್ಟಿಕೊಳ್ಳುತ್ತದೆ.
ರಂಜಾನ್ ತಿಂಗಳಲ್ಲಿ ಹದಿನಾಲ್ಕುವರೆ ಗಂಟೆ ಉಪವಾಸವಿರುವ ಕಾರಣ ತೂಕ ಗಮನಾರ್ಹವಾಗಿ ಇಳಿಯುತ್ತದೆ ಎನ್ನುವ ನಂಬಿಕೆಯೊಂದು ಇದೆ. ಆದರೆ ನಿಜಕ್ಕೂ ಈ ಸಮಯದಲ್ಲಿ ಸಮತೋಲನ ಆಹಾರಗಳನ್ನು ಸೇವಿಸುವುದು ಅಗತ್ಯ.

ಇದಕ್ಕಾಗಿ ಕಡಿಮೆ ಕ್ಯಾಲೋರಿಗಳ, ದೇಹದಲ್ಲಿ ನಿಧಾನವಾಗಿ ಕರಗುವ ಮತ್ತು ಸ್ವಾದಿಷ್ಟವಾದ ಆಹಾರ ಅಗತ್ಯ. ಇದಕ್ಕೆ ಸಮೋಸ ಉತ್ತಮ ಆಯ್ಕೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳಿದ್ದು ಉಪವಾಸದ ಬಳಿಕ ಬಳಲಿದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ರೊಜಾರಿಯೋ ಕೆಥೆಡ್ರಲ್‌ನಲ್ಲಿ ಮಾಸ್ ಮ್ಯಾರೇಜ್

ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ 45ನೇ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮೇ 5ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.
ಕೆಥೆಡ್ರಲ್‌ನ ಸಮಾಜ ಸೇವಾ ಘಟಕ ಸಂತ ವಿನ್ಸೆಂಟ್ ಪಾವ್ಲ್(ಎಸ್‌ವಿಪಿ) ಸಭಾ ಆಶ್ರಯದಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಮತ್ತು ಕರ್ನಾಟಕದ ವಿವಿಧ ಭಾಗಗಳ 14 ಜೋಡಿಗಳು ಭಾಗವಹಿಸಲಿವೆ. ಕಳೆದ ನಾಲ್ಕೂವರೆ ದಶಕಗಳಿಂದ ಇಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆಯುತ್ತಿದ್ದು, ಇದುವರೆಗೆ 980 ಜೋಡಿಗಳು ಭಾಗವಹಿಸಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಿವೆ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನಾ ವರು ನವ ವಧು ವರರ ವಿವಾಹ ಸಮಾರಂಭದ ಬಲಿಪೂಜೆಯ ನೇತೃತ್ವ ವಹಿಸುವರು. ಬಳಿಕ ಜರುಗುವ ಸಮಾರಂಭದಲ್ಲಿ ಅನಿವಾಸಿ ಉದ್ಯಮಿ ಐವನ್ ಎ. ಫರ್ನಾಂಡೀಸ್, ರೊಜಾರಿಯೋ ಕೆಥೆಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಭಾಗವಹಿಸಲಿದ್ದಾರೆ.

ಕರಾವಳಿಯ ದೇವಸ್ಥಾನಕ್ಕೆ ಗರ್ಭಗುಡಿಯೇ ಇಲ್ಲ !

ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ.

ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ. ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.

ಹೌದು ಇದು ಬೆಳ್ತಂಗಡಿ ಕೊಕ್ಕಡದ ಸೌತಡ್ಕ ಗಣಪತಿ ದೇವಳದ ವಿಶೇಷತೆ. ಇದು ಬರೀ ದೇವಳ ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.