ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೊರ್ಯನೊಳಗೆ ನೆಲೆಸುವಷ್ಟು ಪ್ರಖರವಾದ ದೇವತೆಯಾಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರದ ಜಿಲ್ಲೆಯ ಘಟಾಂಪುರದಲ್ಲಿದೆ.
Tagged: kudlacity
ನವದೇವತೆ 1- ಶೈಲಪುತ್ರಿ
ಶೈಲಪುತ್ರಿ ಎಂದರೆ ಪರ್ವತನ ಪುತ್ರಿ ಪಾರ್ವತಿ. ಪರ್ವತರಾಜನ ಮಗಳಾದ ಈಕೆಗೆ ಸತಿ,ಭವಾನಿ, ಹೇಮಾವತಿ ಎಂದು ಹೆಸರಿದೆ. ಇವರು ಪ್ರಕೃತಿಯ ಮಗಳು. ಎರಡು ಹಸ್ತಗಳನ್ನು ಹೊಂದಿರುವ ಈಕೆಗೆ ಒಂದು ಕೈಲಿ ತ್ರಿಶೂಲವನ್ನು, ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದುಕೊಂಡಿದ್ದಾರೆ. ನಂದಿ ಆಕೆಯ ವಾಹನ.
ಹಣೆಯಲ್ಲಿ ಚಂದ್ರನಿದ್ದಾನೆ. ಶೈಲಪುತ್ರಿಯ ಪ್ರಸಿದ್ಧ ದೇವಸ್ಥಾನ ವಾರಣಾಸಿಯ ಮರ್ಹಿಯಾ ಘಾಟ್‌ನಲ್ಲಿರುವ ಮಾ ಶೈಲಪುತ್ರಿ ದೇವಸ್ಥಾನ ಹಾಗೂ ಮುಂಬಯಿಯ ವಾಶಿಯಲ್ಲಿರುವ ಹೆಡ್ಡಾವೆ ಮಹಾಲಕ್ಷ್ಮಿ ದೇವಸ್ಥಾನ.
ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.
ರಸ್ತೆ ಸರಿಪಡಿಸಲು ಮೂನ್‌ವಾಕ್ ಮಾಡಿದಳು ಕುಡ್ಲದ ಹುಡುಗಿ
ಮಂಗಳೂರು: ಬೆಂಗಳೂರಿನಲ್ಲಿ ಬಾದಲ್ ನಂಜುಂಡಸ್ವಾಮಿ ಎಂಬ ಕಲಾವಿದ ಗಗನ ಯಾತ್ರಿಯಂತೆ ವೇಷಧರಿಸಿ ಹೊಂಡದಿಂದ ಕೂಡಿದ ರಸ್ತೆಯಲ್ಲಿ ಮೂನ್ ವಾಕ್ ಮಾಡಿದಂತೆ ಮಂಗಳೂರಿನಲ್ಲೂ 6 ತರಗತಿ ವಿದ್ಯಾರ್ಥಿನಿಯೊಬ್ಬಳು ಮೂನ್‌ವಾಕ್ ಮಾಡಿ ಪಾಲಿಕೆ ಗಮನ ಸೆಳೆಯಲು ಪ್ರಯತ್ನಿಸಿದ್ದಾಳೆ.
ನಗರದಲ್ಲಿ ಪ್ರಸಿದ್ಧಿ ಪಡೆದ ಎಂಸಿಸಿ ಸಿವಿಕ್ ಗ್ರೂಪ್ ಮಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಆದರೆ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರೂಪ್‌ನ ಪ್ರಮುಖರಾದ ಅರ್ಜುನ್ ಮಸ್ಕರೇನ್ಹಸ್ ಹಾಗೂ ಅಜೊಯ್ ಡಿಸಿಲ್ವ ಅವರು ಮೂನ್‌ವಾಕ್ ಪ್ರತಿಭಟನೆಗೆ ನಿರ್ಧರಿಸಿದ್ದರು.
ಅದರಂದತೆ ಸೆ. 20 ರಂದು ರಂದು ರಾತ್ರಿ 10 ಗಂಟೆ ವೇಳೆಗೆ 6 ನೇ ತರಗತಿ ವಿದ್ಯಾರ್ಥಿನಿ ಆಡ್ಲಿನ್ ಡಿಸಿಲ್ವ ಅವರು ಬಾಹ್ಯಾಕಾಶದಲ್ಲಿ ನಡೆಯುವಾಗ ಧರಿಸುವ ಬಟ್ಟೆ ಹಾಗೂ ಇತರ ಪರಿಕರಗಳನ್ನು ಧರಿಸಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮುಂದಿನ ಹೊಂಡ ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಅದರನ್ನು ವಿಡಿಯೋ ಚಿತ್ರೀಕರಣ ನಡೆಸಿದ್ದರು. ಬಳಿಕ 33 ಸೆಕೆಂಡ್‌ನ ವಿಡಿಯೋವನ್ನು ವಾಟ್ಸಾಪ್-ಫೇಸ್‌ಬುಕ್‌ನಲ್ಲಿ ವೈರಲ್ ಮಾಡಿ ಪಾಲಿಕೆಯ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಕೂದಲು ದಾನ
ಮಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಮರುಗಿದ ನಗರದ ವಿದ್ಯಾರ್ಥಿನಿಯೊಬ್ಬರು ತನ್ನ ಕೇಶಯನ್ನೇ ದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಎ ಎಲ್‌ಲ್‌ಬಿ ಕಲಿಯುತ್ತಿರುವ ಪವಿತ್ರಾ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸುವುದಕ್ಕಾಗಿ ತನ್ನ ಕೂದಲು ದಾನ ಮಾಡಿದ್ದಾರೆ. ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರದ ಪವಿತ್ರಾ ವ್ಯಾಸಂಗಕ್ಕಾಗಿ ನಗರದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯದ ಚಿಕಿತ್ಸೆಗೆಂದು ಪವಿತ್ರಾ, ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.
ಅಲ್ಲಿ ವೈದ್ಯರಿಗೆ ಕಾಯುತ್ತಿದ್ದ ವೇಳೆ ಕೀಮೋಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ನಿಮ್ಮ ಕೂದಲು ಚೆನ್ನಾಗಿದೆ ಎಂದು ಮುಟ್ಟಿದ್ದಾರೆ. ಇದರಿಂದ ಪವಿತ್ರಾ ಅವರಿಗೆ ತುಂಬಾ ನೋವುಂಟಾಯಿತು, ಮಕ್ಕಳ ಮುಖದಲ್ಲಿದ್ದ ಅಸಹಾಯಕತೆಯ ನೋವಿನಿಂದ ಬೇಸರವಾದರೂ ಮಕ್ಕಳ ಮುಂದೆ ನಸುನಗುತ್ತಾ ವೈದ್ಯರನ್ನು ಭೇಟಿಯಾಗಿ ವಾಪಸ್ ಬಂದಿದ್ದರು.
ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಕೇಶದಾನ ಬಗ್ಗೆ ಚರ್ಚಿಸಿ ಕಳೆದ ವಾರ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದರು. ಕೂದಲು ಮಹಿಳೆಯರ ಸೌಂದರ್ಯ ಕ್ಕೆ ಮುಖ್ಯ ಹೌದು, ಆದರೆ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿರುವ ಖುಷಿ ಬೇರಿಲ್ಲ. ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂದು ಪವಿತ್ರಾ ಹೇಳುತ್ತಾರೆ.
ಕುಡ್ಲ ಸಿಟಿ ದಸರಾ ಮೊಬೈಲ್ ಫೋಟೊ ಗ್ರಾಫರ್ ಕಾಂಟೆಸ್ಟ್
ದಸರಾ ಹಬ್ಬದ ಸಂಭ್ರಮ ಎಂದರೆ ಬರೀ ರಾಜ್ಯಕ್ಕೆ ಮಾತ್ರವಲ್ಲ ಕರಾವಳಿಗೂ ಅದೇ ಸಡಗರ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಮುಂಚೂಣಿಯ ಸ್ಥಾನಗಿಟ್ಟಿಸಿಕೊಂಡಿರುವ ಕುಡ್ಲ ಸಿಟಿ ಫೇಸ್ ಬುಕ್ ಪೇಜ್ ಈ ಬಾರಿ ಕುಡ್ಲ ಸಿಟಿ ದಸರಾ ಮೊಬೈಲ್ ಫೋಟೋಗ್ರಫಿ ಎನ್ನುವ ವಿಶಿಷ್ಟ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ಸ್ ಇರುವುದರಿಂದ ಈ ಸ್ಪರ್ಧೆಗೆ ಸ್ಪರ್ಧಿಸುವುದು ಎಲ್ಲರಿಗೂ ಬಹಳ ಸುಲಭ. ನವರಾತ್ರಿ,ದಸರಾ ಸಮಯದಲ್ಲಿ ತಮಗೆ ತೋಚುವ ಯಾವುದೇ ವೇಷಗಳು,ಆಹಾರ-ವಿಚಾರಗಳು, ಬಣ್ಣದ ಬೆಳಕು, ಸಂಸ್ಕೃತಿ, ದೇವಸ್ಥಾನ, ಉಡುಗೆ- ತೊಡುಗೆ, ಅಲಂಕಾರ ಹೀಗೆ ನಿಮ್ಮ ಆಯ್ಕೆಯ ಯಾವುದೇ ವಸ್ತುಗಳಿರಲಿ ಅದನ್ನು ಮೊಬೈಲ್‌ನಲ್ಲಿ ತೆಗೆದು ಕಳುಹಿಸಿಕೊಡಬಹುದು. ಸ್ಪರ್ಧೆಯ ನಿಯಮಗಳು: * ಮೊಬೈಲ್‌ನಲ್ಲಿ ತೆಗೆದ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. *ಒಬ್ಬರು 5 ಚಿತ್ರಗಳನ್ನು ನಾನಾ ವಿಚಾರಗಳ ಮೇಲೆ ತೆಗೆದು ಒಂದೇ ಬಾರಿಗೆ ಕಳುಹಿಸಬೇಕು. ಬೇರೆ ಬೇರೆಯಾಗಿ ಕಳುಹಿಸಿದರೆ ಪರಿಗಣಿಸಲಾಗುವುದಿಲ್ಲ. * ಕಳುಹಿಸುವ ಮಂದಿ ತಮ್ಮ ಫೇಸ್‌ಬುಕ್ ಐಡಿ, ಇನ್‌ಸ್ಟ್ರಾಗ್ರಾಮ್ ಐಡಿ(ಇದ್ದರೆ ಮಾತ್ರ), ವಿಳಾಸ, ಮೊಬೈಲ್ ಸಂಖ್ಯೆಯನ್ನು ಪೂರ್ಣವಾಗಿ ಚಿತ್ರ ಕಳುಹಿಸುವ ಸಂದರ್ಭದಲ್ಲಿ ಬೇಕು. * ಚಿತ್ರಗಳನ್ನು ಅಕ್ಟೋಬರ್ 8,2019 ರೊಳಗೆ ಕಳುಹಿಸಬೇಕು. *ಕಳುಹಿಸಿದ ಚಿತ್ರಗಳಲ್ಲಿ ಉತ್ತಮವಾದ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಕುಡ್ಲ ಸಿಟಿಯಲ್ಲಿ ಪ್ರಕಟ ಮಾಡಲಾಗುತ್ತದೆ. ಹೀಗೆ ಪ್ರಕಟವಾದ ಚಿತ್ರಗಳನ್ನು ಒಂದು ವಾರದ ಕಾಲ ಅವಕಾಶ ನೀಡಲಾಗುತ್ತದೆ. * ಕಳುಹಿಸಿದವರು ಕುಡ್ಲ ಸಿಟಿ ಪೇಜ್‌ವನ್ನು ಲೈಕ್ ಮಾಡಬೇಕು. * ನಿಮ್ಮ ಚಿತ್ರಗಳನ್ನು ಫೇಸ್‌ಬುಕ್ ಹಾಗೂ ಇನ್ಸ್‌ಸ್ಟ್ರಾಗ್ರಾಮ್ ಐಡಿಗೆ ಟ್ಯಾಗ್ ಮಾಡಲಾಗುತ್ತದೆ. ಅತೀ ಹೆಚ್ಚು ಲೈಕ್, ಶೇರ್ ಪಡೆದ ಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಸಿಗಲಿದೆ. * ಕಳುಹಿಸಬೇಕಾದ ವ್ಯಾಟ್ಸಾಫ್ ನಂಬರ್ : 8073630041