ಉರ್ವದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರ ವಾರ್ಷಿಕ ಹಬ್ಬ ಮತ್ತೆ ಬಂದಿದೆ. ಡಿ. 8,2019 ರಂದು ಹಬ್ಬದ ಸಂಭ್ರಮದ ಪೂಜೆ, ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿದೆ.
ವಿಶೇಷವಾಗಿ ಮಂಗಳೂರು ನಗರದೊಳಗೆ ಇರುವ ಚರ್ಚ್‌ಗಳಲ್ಲಿ ಈ ಮಾತೆಯ ಪುಣ್ಯಕ್ಷೇತ್ರಕ್ಕೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ. ಅಂದಹಾಗೆ ಪೊಂಪೈ ಮಾತೆ ಯಾರು ಎಂದರೆ ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ.
ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಪರಿವರ್ತನೆಗಾಗಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನ ಪರಿವರ್ತನೆ ಯಾಯಿತು ಮತ್ತು ಊರಿಗೇ ಊರೇ ಸರಿದಾರಿಗೆ ಬಂತು.
ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆಯೆಂಬುದಾಗಿ ಕರೆಯುತ್ತಾರೆ. ಪೊಂಪೈ ಮಾತೆಯ ಭಕ್ತಿ ಪ್ರಪಂಚಾದಾದ್ಯಂತ ಹಬ್ಬಿತು. ಉರ್ವ ಚರ್ಚ್‌ನಲ್ಲಿ ಪೊಂಪೈಮಾತೆಗಾಗಿ 1895 ರಲ್ಲಿ ಒಂದು ಪೀಠವನ್ನು ಸ್ಥಾಪಿಸುವುದರ ಮುಖಾಂತರ ಪೊಂಪೈ ಮಾತೆಯ ಭಕ್ತಿ ಆರಂಭವಾಯ್ತು. 1995 ರಲ್ಲಿ ಈಗಿರುವ ಪುಣ್ಯಕ್ಶೇತ್ರದ ಕಟ್ಟಡವನ್ನು ಕಟ್ಟಲಾಯಿತು.
ಉರ್ವ ಪೊಂಪೈ ಮಾತೆಯ ಹಬ್ಬ
November 30, 2019