ಕುಡ್ಲದ ದಸರಾಕ್ಕೆ ನಗರವೆಲ್ಲವೂ ಶೃಂಗಾರಗೊಂಡು ಪ್ರವಾಸಿಗರಿಗಾಗಿ ಕಾಯುತ್ತಿದೆ. ಆದರೆ ಈ ಪ್ರವಾಸಿಗರು ಕುಡ್ಲದ ಪ್ರವಾಸಿ ತಾಣಕ್ಕೆ ಭೇಟಿ ನೀಡಿದರೆ ಅದರ ಪೂರ್ಣ ಮಾಹಿತಿ ನೀಡಬೇಕಾದ ಕೆಲವೊಂದು ಮಾಹಿತಿ ಫಲಕದ ಬರಹವೇ ನಾಪತ್ತೆಯಾಗಿದೆ. ಒಂದೆಡೆ ಕುಡ್ಲಕ್ಕೆ ಟೂರಿಸ್ಟ್ ಗೈಡ್‌ಗಳಿಲ್ಲ ಮತ್ತೊಂದೆಡೆ ಮಾಹಿತಿ ನೀಡುವ ಫಲಕದ ಬರಹವೇ ಮಾಯವಾಗಿದೆ.
ಹೌದು. ಮಂಗಳೂರು ನಗರದ 38 ಕಡೆಗಳಲ್ಲಿ ಪ್ರವಾಸಿಗಳ ತಾಣಗಳ ಮಾಹಿತಿ ನೀಡುವ ಫಲಕಗಳನ್ನು ಹಾಕಲಾಗಿತ್ತು. ಇನ್ನು ಆರು ಕಡೆಯಲ್ಲಿ ಇನ್ನು ಆಳವಡಿಕೆ ಮಾಡುವ ಕೆಲಸ ಬಾಕಿಯಿದೆ. ಒಟ್ಟು 100 ಕಡೆಯಲ್ಲಿ ಫಲಕದಲ್ಲಿ ಮಾಹಿತಿ ಹಾಕುವ ಯೋಜನೆನೂ ಇದೆ. ಒಂದೊಂದು ಫಲಕಗಳಿಗೆ ಸರಿಸುಮಾರು 13 ಸಾವಿರ ರೂ. ಖರ್ಚು ಮಾಡಲಾಗಿದೆ.
ಈಗಾಗಲೇ ಇಷ್ಟು ಫಲಕಗಳಿಗೆ 6,40,250 ರೂ. ದ.ಕ.ನಿರ್ಮಿತಿ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ವಿಶೇಷವಾಗಿ ಇಷ್ಟೊಂದು ಖರ್ಚು ಮಾಡಿದ್ರು ಕೂಡ ನಗರದ ಕೆಲವೊಂದು ಪ್ರವಾಸಿ ಫಲಕಗಳಲ್ಲಿ ಮಾಹಿತಿ ಬರಹವೇ ಕಣ್ಮರೆಯಾಗಿದೆ ಎನ್ನುವುದು ಬೇಸರದ ವಿಚಾರ.
tgas: kudla, tourism, ctravi,kudlacity,lifecity,mangalorecity, tourism dept, vedavyaskamat,mla,mangalore south