ಕುಡ್ಲದ ಜನರು ಯಾವುದೇ ಮೂಲೆಗೆ ಹೋದರು ಕೂಡ ಅವರಿಗೆ ಕುಚಲಕ್ಕಿಯ ಊಟ ಇಲ್ಲದೇ ಏನೋ ಒಂಥರ ಸಂಕಟ ಆವರಿಸಿಕೊಂಡು ಬಿಡುತ್ತದೆ. ಊಟದ ತಟ್ಟೆಯಲ್ಲಿ ಬಿರಿಯಾನಿ ಇದ್ರು ಅದನ್ನು ಪಕ್ಕಕ್ಕೆ ಸರಿಸಿ ಕುಚಲಕ್ಕಿ ಊಟ ಉಂಡಾ ಮಾರಾಯ್ರೆ ಎಂದು ಯಾವುದೇ ಮೂಲಾಜು ಇಲ್ಲದೇ ಕೇಳಿ ಬಿಡುತ್ತಾರೆ.
Category: ಹೊಸ ಸುದ್ದಿ
ಆಸ್ಪತ್ರೆಗೆ ಹೋಗುವಾಗ ಜಾಗ್ರತೆ ಮಾರಾಯ್ರೆ !
ಮಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಜತೆಯಲ್ಲಿ ಆಸ್ಪತ್ರೆಗಳು ಕೂಡ ಬೇಕಾದಷ್ಟು ಹುಟ್ಟಿಕೊಳ್ಳುತ್ತಿದೆ. ವಿಶೇಷ ಎಂದರೆ ಕುಡ್ಲದ ಆಸ್ಪತ್ರೆಗಳಿಗೆ ರೋಗಿಗಳು ಬಂದಾಗ ಯಾವ ಚಿಕಿತ್ಸೆಗೆ ಬರುತ್ತಿದ್ದೇವೆ ಎನ್ನುವ ಅರಿವು ರೋಗಿಗಳಿಗೆ ಇದ್ದರೆ ಬಹಳ ಒಳ್ಳೆಯದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.
ಕಾಸರಗೋಡಿನ ಮಹಿಳೆಯೊಬ್ಬರು ಕಾಲುನೋವಿನ ಕಾರಣಕ್ಕೆ ನಗರದ ಖ್ಯಾತ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ತಪಾಸಣೆ ನಡೆಸಿದ ವೈದ್ಯರು ಅವರ ಬಲಕಾಲನ್ನು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡುತ್ತಾರೆ. ಅದರಂತೆ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗುತ್ತದೆ.
ಆದರೆ ಆಪರೇಷನ್ ಮಾಡಿ ಮರಳಿ ಬರುವಾಗ ಎಡಗಾಲಿಗೆ ಆಪರೇಷನ್ ಮಾಡಲಾಗಿತ್ತು. ಈ ಕಾರಣದಿಂದ ಮಂಗಳೂರಿನ ಖ್ಯಾತ ಆಸ್ಪತ್ರೆಯ ವೈದ್ಯರು ಎಡವಟ್ಟು ಮಾಡುವ ಮೂಲಕ ವೈದ್ಯ ಲೋಕದಲ್ಲೂ ಇಂತಹ ಘಟನೆಗಳು ನಡೆಯುತ್ತದೆ ಎನ್ನುವ ಮಾತು ಫ್ರೂವ್ ಆಗಿದೆ. ಮಾಡಿದ ತಪ್ಪಿಗೆ ಆಸ್ಪತ್ರೆಯವರು ಮಹಿಳೆಯ ಪೂರ್ಣ ಖರ್ಚು ವೆಚ್ಚವನ್ನು ಕೊಡುವ ಕೆಲಸಕ್ಕೆ ಮುಂದಾಗಿರುವ ಪರಿಣಾಮ ಪ್ರಕರಣ ರಾಜಿಯಲ್ಲಿ ಮುಗಿದಿದೆ.
ಕುಡ್ಲದಲ್ಲಿ ಸಿಗುವ ಇಂದಿನ ತಾಜಾ ಮಾತು ಎಂಚಿನ ಬರ್ಸಾ ಮಾರಾಯ್ರೆ
ಮಳೆಗಾಲ ಎನ್ನುವ ಮಾತು ಕುಡ್ಲಕ್ಕೆ ಸರಿಯಾಗಿ ಅನ್ವಯವಾಗಲೇ ಇಲ್ಲ. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಕುಡ್ಲದ ಜನರಿಗೆ ರಿಯಲ್ ಮಳೆಗಾಲವನ್ನು ನೆನಪಿಸಿತು. ಬಹಳ ದಿನಗಳ ನಂತರ ಕುಡ್ಲದ ಜನರು ಎಂಚಿನ ಬರ್ಸಾ ಮಾರಾಯ್ರೆ ನನಲಾ ಬೋಡು( ಎಂತಹ ಮಳೆ ಮಾರಾಯ್ರೆ ಇನ್ನಷ್ಟು ಬರಲಿ) ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಲು ಸಿಕ್ಕಿದೆ. ಮಳೆರಾಯನ ಅದ್ಭುತ ಆಟ ಕ್ರಿಕೆಟ್, ರಾಜಕೀಯಕ್ಕಿಂತಲ್ಲೂ ವಿಶೇಷ ದಾಖಲೆಯಾಗಿದೆ.
ಕುಡ್ಲದಲ್ಲಿ ಪರಿಚಯವಾದ ಚಾಂದಿನಿ ಮೀನು !
ಮಳೆಗಾಲದಲ್ಲಿ ಮೀನು ಮಾರುಕಟ್ಟೆಯಲ್ಲಿ ಸಮುದ್ರದ ತಾಜಾ ಮೀನು ವಿರಳವಾಗುತ್ತಿದ್ದಂತೆ ಹೊಳೆ ಮೀನುಗಳು ಬರಲಾರಂಭಿಸುತ್ತವೆ. ಈಗ ಉತ್ತರ ಕನ್ನಡ ಕಡೆಯ ಡ್ಯಾಮ್‌ಗಳಲ್ಲಿ ಗಾಳ ಹಾಕಿ ಹಿಡಿಯಲಾಗುವ ಅಪರೂಪದ ಚಾಂದಿನಿ ಮೀನು ಮಾರುಕಟ್ಟೆಗೆ ಬರಲಾರಂಭವಾಗಿದೆ.
ಇದು ನೋಡಲು ಸಮುದ್ರದ ಕೆಂಬೇರಿ ಮೀನಿನ ಮಾದರಿಯದ್ದು. ರುಚಿಯಲ್ಲೂ ಅದೇ ಹೋಲಿಕೆ. ಹಾಗಾಗಿ ತಾಜಾ ಚಾಂದಿನಿ ಮೀನನ್ನು ಗ್ರಾಹಕರು ಇಷ್ಟಪಡುವಂತಾಗಿದೆ. ಹೊಟೇಲುಗಳಲ್ಲಿಯೂ ಈ ಮೀನು ಬೇಡಿಕೆ ಗಳಿಸಿದೆ.
ಕೆಜಿಯೊಂದಕ್ಕೆ 300 ರೂ. ಬೆಲೆ ಇದೆ. ಸುಮಾರು 3 ಕೆಜಿಯಷ್ಟು ತೂಕದ ಮೀನು ಕೂಡ ಮೀನು ಮಾರಾಟ ಮಹಿಳೆಯ ಬಳಿ ಕಾಣಸಿಕ್ಕಿದೆ. ಸಿಹಿ ನೀರಿನ ಬಲು ಅಪರೂಪದ ಈ ಮೀನನ್ನು ಒಳನಾಡಿನ ಕೆಲವೆಡೆ ಕೃಷಿ ಮಾಡುತ್ತಾರೆ. ವ್ಯಾಪಾರಿಗಳು ತರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಒಮ್ಮೆ ಖರೀದಿಸಿದ ಮಂದಿ ಮತ್ತೆ ಕೇಳುತ್ತಿದ್ದಾರೆ ಎನ್ನುವುದು ಫಿಶ್ ಮಾರ್ಕೆಟ್‌ನವರ ಮಾತು.
ಕುಡ್ಲ ಪೊಲೀಸರ ಹೈಟೆಕ್ ಮಂತ್ರ
ಪೊಲೀಸ್ ಎಂದಾಕ್ಷಣ ಏನೋ ಅವರ ಕುರಿತು ಭಾವನೆಯೊಂದು ಬೆಳೆದು ಬಿಡುತ್ತದೆ. ಆದರೆ ಇಂತಹ ಭಾವನೆಗಳನ್ನು ಬದಲಿಸುವ ಜತೆಯಲ್ಲಿ ಜನರು ಕೂಡ ಪೊಲೀಸ್ ರಿಗೆ ನೆರವಾಗಿ ಎನ್ನುವ ಮಾತು ಪದೇ ಪದೇ ಇಲಾಖೆ ಹೇಳುತ್ತಾ ಬಂದಿದೆ.
ಆದರೆ ಕುಡ್ಲದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಸಮಸ್ಯೆಯನ್ನು ನೇರವಾಗಿ ನನಗೆ ತಿಳಿಸಿ ಯಾವುದೇ ಮಾಹಿತಿ ಇದ್ದರೂ ಸಾಮಾಜಿಕ ಜಾಲತಾಣ ವಾದ ವ್ಯಾಟ್ಸಪ್ , ಟ್ವಿಟರ್ ಜತೆಗೆ ಇಮೇಲ್ ಮೂಲಕವೂ ಹಂಚಿಕೊಳ್ಳುವ ಕೆಲಸ ಮಾಡಿ ಎಂದಿದ್ದಾರೆ. ಈ ಮೂಲಕ ಪೊಲೀಸ್ ಕಮೀಷನರ್ ಜನರ ಸಮಸ್ಯೆಗಳಿಗೆ ಕಿವಿ ಯಾಗಿದ್ದಾರೆ.