Author: Team Kudla City

ಕಂಬಳದ ಚಿನ್ನದ ಓಟಗಾರ ಬೆದ್ರದ ಶ್ರೀನು

ಅಲೆ ಬುಡಿಯೇರ್ ಎನ್ನುವ ತುಳುನಾಡಿನ ಪದವೇ ಕಂಬಳದ ಗತ್ತು ಗೈರತ್ತು ತೋರಿಸಿ ಬಿಡುತ್ತದೆ. ಮೂಡುಬಿದಿರೆ ಯ ಅಶ್ವಥಪುರದ ಕುಡುಬಿ ಸಮುದಾಯದ ಶ್ರೀನಿವಾಸ್ ಗೌಡ ಕಂಬಳದ ಚಿನ್ನದ ಓಟಗಾರ ಎಂದೇ ಖ್ಯಾತಿ ಪಡೆದಿದ್ದಾರೆ.

ಬಾರಾಡಿಬೀಡಿನ ಒಂದೇ ಕಂಬಳದಲ್ಲಿ 4 ಪದಕಗಳನ್ನು ಬಾಚಿದ್ದಾರೆ. ಮೂಡುಬಿದಿರೆ 4, ಹೊಕ್ಕಾಡಿಗೋಳಿ 1, ಮೂಲ್ಕಿ 3, ಕಕ್ಕೇಪದವು 2, ಮಿಯಾರ್ 3 ಸೇರಿದಂತೆ ಒಟ್ಟು 16 ಪದಕಗಳನ್ನು ಶ್ರೀನಿವಾಸ್ ಗೌಡ ಪಡೆದುಕೊಂಡಿದ್ದಾರೆ. ಕಂಬಳದ ಶ್ರೀ ನು ಎಂದು ಕರೆಯುವ ಗೌಡರ ಮುಂದೆ ಇನ್ನು 9 ಕಂಬಳಗಳು ಮುಂದಿದೆ ಅದರಲ್ಲೂ ತಮ್ಮ ಸಾಮರ್ಥ್ಯ ತೋರಿಸುವ ಎಲ್ಲ ಲಕ್ಷಣಗಳು ಇದೆ. ಒಟ್ಟಾರೆ 100ಕ್ಕೂ ಅಧಿಕ ಪದಕಗಳನ್ನು ತಮ್ಮ ಮನೆಯಲ್ಲಿ ನೇತು ಹಾಕಿದ್ದಾರೆ.

ಪಕ್ಷಿಗಳಿಗೆ ನೀರು ಕೊಟ್ಟ ತೌಸಿಫ್‍ರ ಪ್ರಾಜೆಕ್ಟ್ ಜಲ್

ಕರಾವಳಿ ಭಾಗದಲ್ಲಿ ಉರಿ ಬಿಸಿಲು ಏರುತ್ತಿದ್ದು, ನದಿಗಳಲ್ಲಿನ ನೀರು ವಾಡಿಕೆಗಿಂತ ಮೊದಲೇ ಬತ್ತುತ್ತಿದೆ. ಕುಡಿಯಲು ನೀರಿಲ್ಲದೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ. ಹೀಗಿರುವಾಗ, ಮಂಗಳೂರಿನ ಪ್ರಾಣಿ ಪ್ರೇಮಿ ತೌಸಿಫ್ ಅಹಮ್ಮದ್ ಅವರು ತನ್ನ ಸ್ವಂತ ಖರ್ಚಿನಲ್ಲಿ ಸಿಮೆಂಟ್ ಮಡಕೆಗಳನ್ನು ಖರೀದಿ ಮಾಡಿ ಪ್ರಾಣಿ, ಪಕ್ಷಿಗಳಿಗೆಂದು ಅದರಲ್ಲಿ ನೀರು ತುಂಬಿಸಿ ನಗರದ ಅಲ್ಲಲ್ಲಿ ಇಡುವ ಪ್ರಯತ್ನಕ್ಕೆ ಮುಂದಾಗಿz್ದÁರೆ.
ಈ ಹೊಸ ಯೋಜನೆಗೆ ಪ್ರಾಜೆಕ್ಟï ಜಲ್ ಎಂದು ಹೆಸರಿಟ್ಟಿz್ದÁರೆ. ಈಗಾಗಲೇ 100 ಮಡಕೆಗಳು ತಯಾರಾಗುತ್ತಿದ್ದು, ಇವು ಹಳದಿ, ಹಸುರು ಮತ್ತು ಕೆಂಪು ಬಣ್ಣದಲ್ಲಿರಲಿವೆ. ಮುಂದಿನ ಎರಡು ವಾರದಲ್ಲಿ ನಗರದ ಅಲ್ಲಲ್ಲಿಗೆ ಮಡಕೆಗಳ ಸರಬರಾಜು ಪ್ರಕ್ರಿಯೆ ಆರಂಭವಾಗಲಿದೆ.
ಮುಖ್ಯವಾಗಿ ನಗರದ ಅಂಗಡಿಗಳ ಬದಿಗಳಲ್ಲಿ, ಮನೆಗಳ ಟೆರೇಸ್‍ನಲ್ಲಿ ಈ ಮಡಕೆ ಇಡಲಾಗುತ್ತದೆ. ಸಾರ್ವಜನಿಕರು ಈ ಮಡಕೆಗೆ ನೀರು ಹಾಕುವಂತೆ ಕೇಳಿಕೊಳ್ಳಲಾಗುತ್ತದೆ. ಇದರಿಂದ ಪಕ್ಷಿಗಳು, ದನ, ಬೀದಿ ನಾಯಿ ಸಹಿತ ಪ್ರಾಣಿಗಳು ಬಾಯಾರಿದಾಗ ನೀರು ಕುಡಿಯಲು ಸಾಧ್ಯ. ನೀರು ಮಡಕೆಯಲ್ಲಿರುವದರಿಂದ ಶುದ್ಧವಾಗಿರುತ್ತದೆ.

ಕಾಸರಗೋಡಿನ ಸರಕಾರಿ ಶಾಲೆಯಲ್ಲಿ ಒಂಬತ್ತು ಭಾಷೆಗಳ ಕಲರವ

ಸರಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ, ಇಂಗ್ಲಿಷ್ ಕಲಿಯುವುದು ಸಾಮಾನ್ಯ. ಆದರೆ ಕಾಸರಗೋಡು ಸಮೀಪದ ಪಾಂಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ತುಳು, ಕೊಂಕಣಿ, ಮರಾಠಿ ಸೇರಿದಂತೆ ಸುಮಾರು ಒಂಬತ್ತು ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತಿದೆ.

ಹಳ್ಳಿ ಪ್ರದೇಶದಲ್ಲಿರುವ ಪಾಂಡಿ ಶಾಲೆಯಲ್ಲಿ ಅಸೆಂಬ್ಲಿ ವೇಳೆ ತುಳು, ಕನ್ನಡ, ಮರಾಠಿ, ಕೊಂಕಣಿ, ಅರೇಬಿಕ್, ಮಲಯಾಳ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಯ ಸೊಗಡು ಹರಿಯುತ್ತದೆ. ನಾರಾಯಣ ದೇಲಂಪಾಡಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳ ವಿಕಸನಕ್ಕಾಗಿ ಈ ಕ್ಲಾಸ್ ಅಸೆಂಬ್ಲಿ ಎಂಬ ವಿನೂತನ ಯೋಜನೆ ಆರಂಭಿಸಿದ್ದರು.

ಈಗ ವಾರದಲ್ಲಿ ಎರಡು ದಿನ, ಸೋಮವಾರ ಮತ್ತು ಗುರುವಾರ ಶಾಲೆಯಲ್ಲಿ 9ಕ್ಕೂ ಹೆಚ್ಚು ಭಾಷೆಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಇಲ್ಲಿ 12ರ ವರೆಗೆ ತರಗತಿಗಳು ಇವೆಯಾದರೂ ಈ ಚಟುವಟಿಕೆಯನ್ನು 1-10ನೇ ತರಗತಿಯ ಮಕ್ಕಳಿಗೆ ಮಾತ್ರ ನಡೆಸಲಾಗುತ್ತಿದೆ.
ಬೆಳಗ್ಗಿನ ಪ್ರಾರ್ಥನೆ ಸಮಯದಲ್ಲಿ ಸುಮಾರು 12 ವಿದ್ಯಾರ್ಥಿಗಳು ಎದುರು ನಿಂತು ಒಂದೊಂದು ಭಾಷೆಯಲ್ಲಿ ಗೀತಾ ವಾಚನ, ವಾರ್ತೆಗಳು, ಪುಸ್ತಕ ಪರಿಚಯ, ಚಿಂತನೆ, ದಿನ ವಿಶೇಷ ಇತ್ಯಾದಿ ನಡೆಸುತ್ತಾರೆ. ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತೀ ಬಾರಿ ತರಗತಿ, ವಿದ್ಯಾರ್ಥಿಗಳು ಬದಲಾಗುತ್ತಾರೆ.

ಪಾಂಡಿ ಪ್ರೌಢಶಾಲೆಯು ಕಾಸರಗೋಡಿನಿಂದ ಸುಮಾರು 40 ಕಿ.ಮೀ., ಅಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಮುಖ್ಯ ಶಿಕ್ಷಕರಾಗಿದ್ದ ನಾರಾಯಣ ದೇಲಂಪಾಡಿ ಆರಂಭಿಸಿದ ಚಟುವಟಿಕೆಗಳು ಶಾಲೆಯ ಸ್ವರೂಪವನ್ನೇ ಬದಲಾಯಿಸಿವೆ.

ಟೈಪ್-2 ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮದ್ದು !

ಮಧುಮೇಹ ಅರ್ಥಾತ್ ಡಯಾಬಿಟಿಸ್ ಎನ್ನುವುದು ಸಿಟಿಯಿಂದ ಹಿಡಿದು ಗ್ರಾಮೀಣ ಭಾಗದವರೆಗೂ ರೋಗಿಗಳ ವ್ಯಾಪ್ತಿ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇದರಲ್ಲಿ ಟೈಪ್-2 ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್‍ಸ್ಪರ್ಶ ಆರ್ಯುವೇದ ಆಸ್ಪತ್ರೆಯ ವೈದ್ಯರಾದ ಡಾ. ಸತೀಶ್ ಶಂಕರ ತಮ್ಮ ಸಂಶೋಧನೆಯ ಮೂಲಕ ಟೈಪ್-2 ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮದ್ದು `ಮಹಾಮೇಹಾರಿವಟಿ’ ಕಂಡು ಹುಡುಕಿದ್ದಾರೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.

ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9482167168

ಮಕ್ಕಳು ಬೆಳೆಯಲು, ಬೀಳಲು ನಾವೇ ಹೊಣೆ: ಸ್ವಾಮೀಜಿ

ಮಕ್ಕಳು ಬೆಳೆಯಲೂ ನಾವೇ ಕಾರಣ, ಬೀಳಲೂ ನಾವೇ ಕಾರಣ. ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಎಲ್ಲರಿಗೂ ಇರಬೇಕು ಎಂದು ಮಂಗಳೂರು ಬಿಜಿಎಸ್ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮಾತು.
ಅವರು ಶನಿವಾರ ಕಾವೂರಿನ ಬಿಜಿಎಸ್ ಎಜುಕೇಶನ್ ಸೆಂಟರ್‍ನಲ್ಲಿ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಬಿಜಿಎಸ್ ಚುಂಚಾದ್ರಿ ಹಾಗೂ ಬಿಜಿಎಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕುಡ್ಲೋತ್ಸವ 2019 ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಬೆಳವಣಿಗೆಗೆ ಪೂರಕ ಪ್ರಯತ್ನ ಸಂಸ್ಥೆಯಿಂದ ನಡೆಯುತ್ತಾ ಇದೆ. ಶಿಕ್ಷಣದ ಕ್ರಾಂತಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕನಸನ್ನು ನಿಜಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳು ಕೆಡುವುದಿಲ್ಲ ಅವರು ಬಿಳಿ ಹಾಳೆ ಇದ್ದ ಹಾಗೆ ನಾವು ಏನು ಗೀಚುತ್ತೇವೊ ಅದು ಅಚ್ಚಾಗುತ್ತಾ ಹೋಗುತ್ತದೆ. ಸಂಸ್ಕಾರ, ಉತ್ತಮ ಶಿಕ್ಷಣ ಹಾಗೂ ಜೀವನ ಕೌಶಲ್ಯ ಈ ಬಗೆಯಲ್ಲಿ ನಾವೇನು ನೀಡುತ್ತೇವೆಯೊ ಅದು ಎಳೆಯರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಈ ಸಂದರ್ಭ ಮನಪಾ ಕಮೀಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ನಾಗಮಂಗಲ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಎನ್.ಎಸ್.ರಾಮೇಗೌಡ, ಎಜುಕೇಶನ್ ಸೆಂಟರ್‍ನ ವ್ಯವಸ್ಥಾಪಕ ಸುಬ್ಬ ಕಾರಡ್ಕ ಉಪಸ್ಥಿತರಿದ್ದರು.