ಶಾಲಾ ಮಕ್ಕಳ ವಾಹನ ಚಾಲಕರ ಮೇಲಿನ ಕಿರುಕುಳವನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ಶಾಲಾ ಮಕ್ಕಳ ವಾಹನ ಚಾಲಕರು ಮಂಗಳೂರಿನಲ್ಲಿ ನಡೆಸುತ್ತಿದ್ದ ಸ್ವಯಂಪ್ರೇರಿತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಂದು ಪೂರ್ಣ ವಿರಾಮ ಸಿಕ್ಕಿದೆ. ಈ ಮೂಲಕ ಜು.13 ರಿಂದ ಎಂದಿನಂತೆ ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ರೆಡಿಯಾಗಿದೆ.
ಅಂದಹಾಗೆ ಈ ಎಲ್ಲ ಬೆಳವಣಿಗೆಯ ಹಿಂದೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಭರವಸೆ ಮಾತುಗಳೇ ಮುಷ್ಕರ ಹಿಂತೆಗೆಯುವ ಕೆಲಸಕ್ಕೆ ಸಾಥ್ ಕೊಟ್ಟಿದೆ. ಮುಖ್ಯವಾಗಿ ಶಾಲಾ ವಾಹನ ಚಾಲಕರ ಸಂಘದ ಪದಾಧಿಕಾರಿಗಳ ಜತೆಯಲ್ಲಿ ಮಾತನಾಡಿದ ಶಾಸಕರು ಈ ಬಳಿಕ ಪೊಲೀಸ್ ಕಮೀಷನರ್ ಜತೆಯಲ್ಲೂ ಈ ಕುರಿತು ಮಾತುಕತೆ ನಡೆಸುತ್ತೇನೆ. ಸಮಸ್ಯೆಗೆ ಪರಿಹಾರ ನೀಡುವ ಕಾರ‍್ಯ ಕೈಗೆತ್ತಿಕೊಂಡು ನ್ಯಾಯ ನೀಡುತ್ತೇನೆ ಎನ್ನುವ ಮಾತುಗಳೇ ಮುಷ್ಕರ ಹಿಂತೆಗೆಯಲು ಕಾರಣವಾಗಿದೆ.
ಈ ಮೂಲಕ ಮಂಗಳೂರಿನ ವಿದ್ಯಾರ್ಥಿಗಳು ಹೆತ್ತವರು ಕಳೆದ ಎರಡು ದಿನಗಳಿಂದ ಈ ಶಾಲಾ ವಾಹನಗಳು ಇಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.