Author: Team Kudla City

ಎರಡು ಗಂಟೆಯ ಮಳೆ ಕುಡ್ಲಕ್ಕೆ ಭಯ ಹುಟ್ಟಿಸಿತು !

ಬರೀ ಎರಡು ಗಂಟೆಯ ಮಳೆ ಮಂಗಳೂರಿಗೆ ಈ ಹಿಂದಿನ ರುದ್ರ ಮಳೆಯ ನೆನಪು ಮಾಡಿಕೊಟ್ಟಿದೆ. ಬೆಳಗ್ಗೆ 8.30ರ ಹೊತ್ತಿಗೆ ಗಟ್ಟಿಯಾಗಿ ಹಿಡಿದ ಮಳೆ ಸುಮಾರು 10ರ ತನಕನೂ ಬಿಟ್ಟು ಬಿಡದೆ ಸುರಿದಿದೆ. ಇದರ ಪರಿಣಾಮ ಮಂಗಳೂರು ಸಿಟಿಯ ಯಾವ ಮೂಲೆಯಲ್ಲೂ ಹೋದರೂ ನೀರೇ ನೀರು. ಮಳೆಯ ನಿರೀಕ್ಷೆ ಇಟ್ಟುಕೊಳ್ಳದೇ ಮೋಟಾರ್ ಸೈಕಲ್‌ನಲ್ಲಿ ಬಂದವರು ಬಸ್ ನಿಲ್ದಾಣದಲ್ಲಿ ಮಳೆ ಬಿಡಲು ಕಾದು ಕೂತ ದೃಶ್ಯಗಳು ಮಜಬೂತಾಗಿತ್ತು. ರಸ್ತೆಯ ಎಲ್ಲ ನೀರೇ ನೀರಿಗೆ ವಾಹನಗಳ ಸಂಚಾರ ಎಲ್ಲವೂ ವ್ಯತ್ಯಯ ಕಾಣಿಸಿಕೊಂಡಿತ್ತು.
tgas: rain,mangalore,kudla,citykudla,kudlacity, two whellers

ಕರಾವಳಿ ಸ್ವಾಮೀಜಿಗೆ ನಮೋ ಗುರುವಂದನೆ

ಉಡುಪಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಗುರು ಪೂರ್ಣಿಮಾ ದ ಅಂಗವಾಗಿ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ಉಡುಪಿ ಕೃಷ್ಣ ನ ಪ್ರತಿಮೆ ಪ್ರಭಾವಳಿಯನ್ನು ನೀಡುವ ಮೂಲಕ ಉತ್ತಮ ಸರಕಾರಕ್ಕೆ ಶುಭ ಹಾರೈಸಿದರು.

ಮಳೆ, ಚಳಿಗೆ ಕಾಡುವ ಅಸ್ತಮಾಕ್ಕೆ ಆಯುರ್‌ನಲ್ಲಿ ಪೂರ್ಣ ಚಿಕಿತ್ಸೆ

ಚಳಿಗಾಲ,ಮಳೆಗಾಲ ಎರಡು ಕಾಲಗಳು ಅಸ್ತಮಾ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಡೇಂಜರ್. ಅಸ್ತಮಾದಿಂದ ಬಳಲುವ ರೋಗಿಗಳಂತೂ ಬದುಕಿಡಿ ಕಷ್ಟ ಪಡುವ ದೃಶ್ಯಗಳನ್ನು ಅವರ ಬಹಳ ಹತ್ತಿರದ ಮಂದಿ ನೋಡಿರಬಹುದು.

ಆದರೆ ಅಸ್ತಮಾಕ್ಕೆ ಕುದ್ರೋಳಿಯಲ್ಲಿರುವ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಔಷಧಿಯನ್ನು ತೆಗೆದುಕೊಳ್ಳುವ ಮೂಲಕ ವಾಸಿ ಮಾಡಬಹುದು ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ನಿಮ್ಮ ದೇಹ ಪ್ರಕೃತಿಗೆ ಹೊಂದಾಣಿಕೆಯಾಗುವ ಚಿಕಿತ್ಸಾ ವಿಧಾನವನ್ನು ಬಳಸುವುದರ ಮೂಲಕ ಪರಿಪೂರ್ಣ ಚಿಕಿತ್ಸೆಯನ್ನು ಆಯುರ್ ಹೆಲ್ತ್ ಕ್ಲಿನಿಕ್ ನೀಡುತ್ತಿದೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.

ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

ಕುಡ್ಲದ ಹುಡುಗನ ಬಿಸಿನೀರಿನಲ್ಲಿ ಕರಗುವ ಪ್ಲಾಸ್ಟಿಕ್

ಪ್ಲಾಸ್ಟಿಕ್ ಎಂದಾದರೂ ಬಿಸಿನೀರಿನಲ್ಲಿ ಕರಗುತ್ತಾ….ಎಲ್ಲಾದರೂ ಕರಗಿದರು ಅದನ್ನು ನೀರಿನಂತೆ ಕುಡಿಯಬಹುದಾ…? ಈ ಎರಡು ಪ್ರಶ್ನೆಗಳನ್ನು ಕೇಳುವ ಮಂದಿಗೆ ಮಂಡೆ ಸರಿಯಿಲ್ಲ ಎಂದು‌ ನೀವು ಭಾವಿಸಿಕೊಂಡರೆ ಅದು ನಿಮ್ಮ ತಪ್ಪು ಅಭಿಪ್ರಾಯ.

ಹೌದು. ಕುಡ್ಲ ಬಟ್ ಬೇಸಿಕಲಿ ಬೆಳ್ತಂಗಡಿ ಯ ಬಳ್ಳಂಜದ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಅವರ ಎನ್ವೀ ಗ್ರೀನ್ ಎನ್ನುವ ಪ್ಲಾಸ್ಟಿಕ್ ಬಿಸಿ ನೀರಿನಲ್ಲಿ ಕರಗುತ್ತೆ ಜತೆಗೆ ಅದನ್ನು‌ಕುಡಿದರೂ ಏನೂ ಆಗೋಲ್ಲ. ಕಾರಣ ಇದು ತರಕಾರಿ ತ್ಯಾಜ್ಯ ದಿಂದ ಮಾಡಿದ ಪ್ಲಾಸ್ಟಿಕ್. ಇತರ ಪ್ಲಾಸ್ಟಿಕ್ ಗೆ ಹೋಲಿಕೆ ಮಾಡಿದರೆ ರೇಟು ಮಾತ್ರ ಜಾಸ್ತಿ ಆದರೆ ಪರಿಸರಕ್ಕೆ ಈ ಪ್ಲಾಸ್ಟಿಕ್ ಪೂರಕವಾಗಿದೆ. ಮಂಗಳೂರಿನ ಮೀನು ಮಾರಾಟದ ಮಹಿಳೆಯೊಬ್ಬರು ನೀಡಿದ ಅಭಿಪ್ರಾಯ ಈಗ ಈ ಪ್ಲಾಸ್ಟಿಕ್ ರೂಪುಗೊಳ್ಳಲು ಕಾರಣವಾಯಿತು ಎನ್ನುವುದು ಅಶ್ವಥ್ ಅವರ ಮಾತು.

ಚಿಟ್ಟೆಗಳಿಗೊಂದು ಸುಂದರ ಬಟರ್ ಪ್ಲೈ ಪಾರ್ಕ್

ಮಾನ್ಸೂನ್ ಮಳೆ ಆರಂಭವಾಗುತ್ತಿದ್ದಂತೆ ಚಿಟ್ಟೆಗಳ ರಂಗೀನ್ ಬದುಕು ತೆರೆದು ಬಿಡುತ್ತದೆ. ಪುಟ್ಟ ಪುಟ್ಟ ಬಣ್ಣದ ಚಿಟ್ಟೆಗಳು ರೆಕ್ಕೆ ಬಿಚ್ಚಿಕೊಂಡು ಹೂವಿನಿಂದ ಹೂವಿಗೆ ಹಾರುವ ದೃಶ್ಯ ವನ್ನು ಕಣ್ಣಾರೆ ಕಾಣಬೇಕು.
ಚಿಟ್ಟೆಗಳ ಬದುಕಿನ ಶೈಲಿ, ವಿಧಾನ ಗಳನ್ನು ತಿಳಿದು ಕೊಳ್ಳುವ ಆಸಕ್ತಿ ಇಟ್ಟುಕೊಂಡವರು ಕಡ್ಡಾಯವಾಗಿ ಮೂಡುಬಿದಿರೆ ಯಿಂದ ಬೆಳುವಾಯಿ ಕಡೆಗೆ ಸಾಗುವಾಗ ಸಮ್ಮಿಲನ್ ಶೆ ಟ್ಟಿ ಅವರ ಚಿಟ್ಟೆ ಪಾರ್ಕ್ ಗೆ ಭೇಟಿ ನೀಡಲೇ ಬೇಕು. ಬೆಳಗ್ಗೆ 8 ರಿಂದ ಮಧ್ಯಾಹ್ನ1 ರ ವರೆಗೆ ಭೇಟಿ ನೀಡಬಹುದು…ಹೆಚ್ಚಿನ ಮಾಹಿತಿಗೆ ಸಮ್ಮಿಲನ್ ಶೆಟ್ಟಿ ಅವರನ್ನು ಸಂಪರ್ಕಿಸಿ 9845993292