Author: Team Kudla City

ಡೆಂಗೆಗೆ ಅಡುಗೆ ಮನೆಯಲ್ಲಿದೆ ಮದ್ದು !

ಕುಡ್ಲದಲ್ಲಿ ಡೆಂಗೆಯಿಂದ ಈಗಾಗಲೇ ಐವರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ ಆದರೆ ಬಹಳಷ್ಟು ಮಂದಿಗೆ ಈ ರೋಗ ಬರುವುದಕ್ಕಿಂತ ಮೊದಲೇ ಎಚ್ಚರವಾದರೆ ಇದೆಲ್ಲವೂ ನಡೆಯುತ್ತಿರಲಿಲ್ಲ.

ಹೌದು. ಡೆಂಗೆಯ ಸೊಳ್ಳೆ ಯಿಂದ ಪಾರಾಗಲು ಅಡುಗೆಮನೆಯಲ್ಲಿ ಇರುವ ತೆಂಗಿನ ಎಣ್ಣೆ, ಕಹಿಬೇವಿನ ಆಯಿಲ್, ನೀಮ್ ಗ್ರಾಸ್ ಆಯಿಲ್ ಸೇರಿದಂತೆ ಮಾರ್ಕೆಟ್ ನಲ್ಲಿ ಸಿಗುವ ಕ್ರೀಮ್ ಗಳನ್ನು ಕೈ ಕಾಲುಗಳಿಗೆ ಉಜ್ಜಿಕೊಂಡು ನಂತರ ಹೊರಗಡೆ ಹೋದರೆ ಯಾವುದೇ ಸೊಳ್ಳೆ ಕೂಡ ಹತ್ತಿರಕ್ಕೆ ಸುಳಿಯಲಾರದು.

ಕುಡ್ಲ ಸಿಟಿಯೊಳಗೆ ಮೀನು ಹಿಡಿಯುವ ಜಾತ್ರೆ

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ಭಾನುವಾರ ಮೀನುಗಾರಿಕೆ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‌ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು, ಮುಗಿಯುವ ತನಕ ಸಾರ್ವಜನಿಕ ಹರಾಜು ಹಾಕುವ ಕಾರ‍್ಯನೂ ಜತೆಯಾಗಿ ಸಾಗಿತು. ಸಾಕಷ್ಟು ಉತ್ಸಾಹಭರಿತ ಯುವಕರ ತಂಡಗಳು ಮೀನು ಹಿಡಿಯುವ ಸ್ಪರ್ಧೆಯಲ್ಲೂ ಕಾಣಿಸಿಕೊಂಡು ಭಾನುವಾರದ ವೀಕ್ ಎಂಡ್‌ನ ಪ್ರಯೋಜನ ಪಡೆದರು.

ಕುಡ್ಲದಲ್ಲಿ ಸೊಳ್ಳೆ ಉತ್ಪಾದನೆ ಗೆ ಭರ್ಜರಿ ದಂಡ

ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರಪಾಲಿಕೆ ಅಧಿಕಾರಿಗಳು, ಶನಿವಾರ ಹಳೇ ಟಯರ್‍ಗಳಲ್ಲಿ ನೀರು ನಿಂತು ರೋಗಕ್ಕೆ ನೀಡುತ್ತಿದ್ದ ವ್ಯಕ್ತಿಗೆ ರೂ. 5000 ದಂಡ ವಿಧಿಸಿದೆ.
ಕಣ್ಣೂರಿನ ವ್ಯಕ್ತಿಯೊಬ್ಬರು ತನ್ನ ಆವರಣದಲ್ಲ ಹಳೆಯ ಟಯರ್‍ಗಳನ್ನು ಇಟ್ಟಿದ್ದು, ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ವ್ಯಕ್ತಿಗೆ ರೂ. 5000 ದಂಡ ಸ್ಥಳದಲ್ಲೇ ವಿಧಿಸಿ, ಎಚ್ಚರಿಕೆ ನೀಡಿದರು.

ಮನೆಯ ಕಿಚನ್ ವೇಸ್ಟ್ ಇಲ್ಲಿ ಲಿಕ್ವೀಡ್ ಗೊಬ್ಬರ

ತ್ಯಾಜ್ಯ ನಿರ್ವಹಣೆ ಈಗ ಎಲ್ಲೆಡೆ ಸಮಸ್ಯೆ ಆಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಯಂತೂ ನಿಮ್ಮ ತ್ಯಾಜ್ಯ ನಿಮ್ಮ ಜವಾಬ್ದಾರಿ ಎನ್ನುವ ಮಾತನ್ನು ಹೇಳುತ್ತಿದೆ. ಕುಡ್ಲದಲ್ಲಿ ಬದುಕುವ ಮುಕ್ಕಾಲು ಮಂದಿ ಪ್ಲ್ಯಾಟ್ ನಲ್ಲಿಯೇ ಉಳಿದು ಬಿಟ್ಟಿದ್ದಾರೆ. ಇವರಿಗೆ‌ ತಮ್ಮ ಮನೆಯ ತ್ಯಾಜ್ಯ ನಿರ್ವಹಣೆ ಮಾಡಲು ಇಲ್ಲೊಂದು ಸರಳ ಉಪಾಯದ ಮೂಲಕ ಉತ್ತಮವಾದ ತರಕಾರಿಯನ್ನು ಬೆಳೆಸಬಹುದು.

ಮಂಗಳಾದೇವಿ ನಗರದ ಬ್ಲ್ಯಾನಿ ಡಿಸೋಜ ತಾರಸಿ ಕೃಷಿಯಲ್ಲಿ ದೊಡ್ಡ ಹೆಸರು ಇದೇ ಕೃಷಿಯಿಂದ ವರ್ಷಕ್ಕೆ ಬರೋಬರಿ ಆದಾಯ ಪಡೆಯುತ್ತಿದ್ದಾರೆ. ಆದರೆ ಈ ಕೃಷಿಗೆ ತಮ್ಮ ಮನೆಯ ಕಿಚನ್ ವೇಸ್ಟ್ ವನ್ನು ಮಾತ್ರ ಬಳಸುತ್ತಾರೆ. ದಿನ ನಿತ್ಯ ಕಿಚನ್ ನಲ್ಲಿ ಉಳಿದ ಹಸಿ ತ್ಯಾಜ್ಯವನ್ನು ಮಿಕ್ಸಿಯಲ್ಲಿ ಹಾಕಿ ಬಳಿಕ ಅದನ್ನು ನೀರಿಗೆ ಸೇರಿಸುವ‌ ಕೆಲಸ ಮಾಡುತ್ತಾರೆ. ಈ ನೀರನ್ನು ಅವರು ತಮ್ಮ ತರಕಾರಿ, ಹಣ್ಣುಹಂಪಲು ಹೀಗೆ ಎಲ್ಲ ಕೃಷಿಗೆ ಬಳಸುತ್ತಾರೆ ಇದು ಬಹಳ ಒಳ್ಳೆಯ ಗೊಬ್ಬರವಂತೆ ವಾಸನೆಯೂ ಬರೋದಿಲ್ಲ. ಆದರೆ ನಾನ್ ವೆಜ್ ಐಟಂಗಳನ್ನು ಮಾತ್ರ ಈ ರೀತಿ ಮಾಡಲು ಸಾಧ್ಯವಿಲ್ಲ ಆದರೆ ಉಳಿದ ಬಹಳಷ್ಟು ವಸ್ತುಗಳನ್ನು ಗೊಬ್ಬರ ಮಾಡಬಹುದು.

ಕುಡ್ಲದಲ್ಲಿ ಡೆಂಗೆ ಜ್ವರಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿ

ಕುಡ್ಲದಲ್ಲಿ ಡೆಂಗೆಯ ಡಂಗುರ ಜೋರಾಗಿದೆ. ಕಳೆದ ಒಂದು ತಿಂಗಳ ಒಳಗಡೆ 320 ಕ್ಕೂ ಡೆಂಗೆ ಪಾಸಿಟಿವ್ ಪ್ರಕರಣ ಬರೀ ಕುಡ್ಲದಲ್ಲಿ ಕಾಣಿಸಿಕೊಂಡಿದೆ. ಇದರ ಜತೆಯಲ್ಲಿ ಕುಡ್ಲದಲ್ಲಿ ಯೇ ಈಗಾಗಲೇ ಮೂರು ಮಂದಿಯನ್ನು ಬಲಿ ಪಡೆದಿರುವ ಡೆಂಗೆ ಈ ಬಾರಿ ರಾಜ್ಯದಲ್ಲಿ ಯೇ ಅತೀ ಹೆಚ್ಚು ಪ್ರಕರಣ ಗಳು ಬರೀ ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಕಾಣಿಸಿಕೊಂಡಿದೆ.
ವಿಶೇಷವಾಗಿ ಮಂಗಳೂರಿನ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುವ ವಿದ್ಯಾರ್ಥಿ ಯೊಬ್ಬರು ಬುಧವಾರ ಮೃತಪಟ್ಟರೆ ಗುರುವಾರ ಏಳನೇ ತರಗತಿ ಓದುವ ವಿದ್ಯಾರ್ಥಿನಿ ಯೊಬ್ಬರು ಮೃತ ರಾಗಿದ್ದಾರೆ. ಆರೋಗ್ಯ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಇಳಿಯದೇ ಇರುವುದರ ಜತೆಗೆ ಜನರಲ್ಲಿ ಆರೋಗ್ಯ ಕಾಳಜಿ ಇಲ್ಲದೇ ಇರುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.